
ಉಡುಪಿ: ದಿನಾಂಕ 18/05/2025 (ಹಾಯ್ ಉಡುಪಿ ನ್ಯೂಸ್) ಕಾನಂಗಿ ದೇವಸ್ಥಾನ ಬಳಿಯ ಸಾರ್ವಜನಿಕ ರಸ್ತೆಯಲ್ಲಿ ಗಾಂಜಾ ಸೇವನೆ ಮಾಡಿ ತೂರಾಡಿ ಕೊಂಡಿದ್ದ ಇಬ್ಬರು ಯುವಕರನ್ನು ಉಡುಪಿ ನಗರ ಪೊಲೀಸ್ ಠಾಣೆಯ ಪೊಲೀಸ್ ಉಪ ನಿರೀಕ್ಷಕರಾದ ಗೋಪಾಲಕೃಷ್ಣ ಜೋಗಿ ಅವರು ಬಂಧಿಸಿದ್ದಾರೆ.
ಉಡುಪಿ ನಗರ ಪೊಲೀಸ್ ಠಾಣೆ , ಪೊಲೀಸ್ ಉಪ ನಿರೀಕ್ಷಕರಾದ ತನಿಖೆ -3 ಗೋಪಾಲಕೃಷ್ಣ ಜೋಗಿ ಅವರು ದಿನಾಂಕ : 17-05-2025 ರಂದು ವಾಹನ ತಪಾಸಣೆ ಮಾಡುತ್ತಿರುವಾಗ ಉಡುಪಿ ತಾಲೂಕು ಕುತ್ಪಾಡಿ ಗ್ರಾಮದ ಕಾನಂಗಿ ವಾಸುಕಿ ದೇವಸ್ಥಾನ ಬಳಿಯ ಸಾರ್ವಜನಿಕ ರಸ್ತೆಯಲ್ಲಿ ಇಬ್ಬರು ಯುವಕರು ಅಮಲಿನಲ್ಲಿ ತೂರಾಡಿಕೊಂಡು ಬರುತ್ತಿರುವುದನ್ನು ಕಂಡು ಪೊಲೀಸರು ಅವರ ಹತ್ತಿರ ಹೋದಾಗ ಅವರುಗಳು ಮಾದಕ ದ್ರವ್ಯ ಸೇವನೆ ಮಾಡಿ ಅಮಲಿನಲ್ಲಿರುವುದು ಕಂಡು ಬಂದಿದ್ದು ಪೊಲೀಸರು ಅವರ ಹೆಸರು ಮತ್ತು ವಿಳಾಸ ವಿಚಾರಿಸಿದಾಗ 1)ಮೊಹಮ್ಮದ್ ಅನಾಸ್ ಮತ್ತು 2) ಫರ್ಹಾನ್ ಎಂದು ತಿಳಿಸಿದ್ದಾರೆ ಎನ್ನಲಾಗಿದೆ.
ಅಪಾದಿತರನ್ನು ಬಂಧಿಸಿ ವಶಕ್ಕೆ ಪಡೆದು, ಉಡುಪಿ ಜಿಲ್ಲಾಸ್ಪತ್ರೆ, ಅಜ್ಜರಕಾಡು ಇಲ್ಲಿ ವೈದ್ಯಕೀಯ ಪರೀಕ್ಷೆಗೆ ಒಳಪಡಿಸಿದ್ದು ತಜ್ಞರಿಂದ ಬಂದಿರುವ ವರದಿಯಲ್ಲಿ ಆಪಾದಿತರು ನಿಷೇಧಿತ THC(Tetrahydrocannabinol) ಗಾಂಜಾ ಎಂಬ ಮಾದಕ ವಸ್ತುವನ್ನು ಸೇವಿಸಿರುವುದು ದೃಢಪಟ್ಟಿದೆ ಎನ್ನಲಾಗಿದೆ.
ಈ ಬಗ್ಗೆ ಉಡುಪಿ ನಗರ ಪೊಲೀಸ್ ಠಾಣೆಯಲ್ಲಿ ಕಲಂ: 27(ಬಿ) NDPS ಕಾಯ್ದೆಯಂತೆ ಪ್ರಕರಣ ದಾಖಲಾಗಿದೆ.