
ಉಡುಪಿ: ದಿನಾಂಕ :18-05-2025(ಹಾಯ್ ಉಡುಪಿ ನ್ಯೂಸ್) ಅಜ್ಜರಕಾಡುವಿನಿಂದ ಅಗ್ನಿ ಶಾಮಕ ಇಲಾಖೆ ಸಂಪರ್ಕಿಸುವ ರಸ್ತೆಯಲ್ಲಿ ನಿನ್ನೆ ರಾತ್ರಿ ವಿದ್ಯುತ್ ತಂತಿ ಗಳ ಮೇಲಿದ್ದ ಗೇರು ಮರದ ಗೆಲ್ಲು ತುಂಡಾಗಿ ಬಿದ್ದು ಐದು ವಿದ್ಯುತ್ ಕಂಬಗಳು ನೆಲಕಚ್ಚಿವೆ.
ಇಲ್ಲಿನ ರೈಡರ್ಸ್ ಪಾಯಿಂಟ್ ದ್ವಿಚಕ್ರ ವಾಹನ ಗ್ಯಾರೇಜ್ ಮೇಲೆ ಒಂದು ವಿದ್ಯುತ್ ಕಂಬ ಬಿದ್ದು ಕಟ್ಟಡಕ್ಕೆ ತುಂಬಾ ಹಾನಿಯಾಗಿದೆ.ಮೆಸ್ಕಾಂ ಇಲಾಖೆ ಮಳೆಗಾಲಕ್ಕೆ ಮೊದಲು ವಿದ್ಯುತ್ ತಂತಿ ಗಳ ಮೇಲಿದ್ದ ಮರದ ಗೆಲ್ಲುಗಳನ್ನು ಕಡಿಯುತ್ತಾರೆ,ಆದರೆ ಅಗತ್ಯ ವಾಗಿ ಕಡಿಯ ಬೇಕಾಗಿದ್ದ ಮರದ ಗೆಲ್ಲು ಕಡಿಯದೆ ಈ ನಷ್ಟ ಸಂಭವಿಸಿದೆ ಎಂದು ಸ್ಥಳೀಯರು ಆರೋಪಿಸಿದ್ದಾರೆ. ಗೇರು ಮರದ ಗೆಲ್ಲು ಹಾಗೂ ವಿದ್ಯುತ್ ಕಂಬಗಳು ರಸ್ತೆ ಮದ್ಯೆ ಬಿದ್ದು ರಸ್ತೆ ಮುಚ್ಚಲ್ಪಟ್ಟಿದೆ . ಇಲಾಖೆಗೆ ಹಾಗೂ ಸಾರ್ವಜನಿಕ ಕಟ್ಟಡಕ್ಕೆ ಹಾನಿಯಾಗಿ ಅಪಾರ ನಷ್ಟವಾಗಿದೆ.

