
ಉಡುಪಿ: ದಿನಾಂಕ:16-05-2025(ಹಾಯ್ ಉಡುಪಿ ನ್ಯೂಸ್) ಸ್ಟಾಕ್ ಮಾರ್ಕೆಟ್ ನಲ್ಲಿ ಹಣ ಹೂಡಿಕೆ ಮಾಡಿದರೆ ಅಧಿಕ ಲಾಭಾಂಶ ಕೊಡುವುದಾಗಿ ನಂಬಿಸಿ ವಂಚನೆ ನಡೆಸಿದ್ದಾರೆ ಎಂದು ಜಯಾನಂದ ಎಂಬವರು ಪೊಲೀಸರಿಗೆ ದೂರು ನೀಡಿದ್ದಾರೆ.
ಉಡುಪಿ ನಿವಾಸಿ ಜಯಾನಂದ (55) ಎಂಬವರನ್ನು ಯಾರೋ ಅಪರಿಚಿತರು ವಾಟ್ಸ್ ಆಫ್ ನಂಬ್ರದಿಂದ ದಿನಾಂಕ 20/03/2025 ರಂದು The Wealth Architects ಎಂಬ ವಾಟ್ಸ್ ಆಫ್ ಗುಂಪಿಗೆ ಸೇರ್ಪಡೆ ಮಾಡಿದ್ದರು ಎಂದು ಪೊಲೀಸರಿಗೆ ನೀಡಿದ ದೂರಿನಲ್ಲಿ ತಿಳಿಸಿದ್ದಾರೆ.
ಈ ಗ್ರೂಪಿನಲ್ಲಿ KOPERNIK DMAT ಎಂಬ ಖಾತೆ ತೆರೆದು ಸ್ಟಾಕ್ ಮಾರ್ಕೇಟ್ ನಲ್ಲಿ ಹಣ ಹೂಡಿಕೆ ಮಾಡುವ ಬಗ್ಗೆ ಮೆಸೇಜ್ ಬರುತ್ತಿದ್ದು , ಶೇರು ಮಾರುಕಟ್ಟೆಯಲ್ಲಿ ಹಣ ಹೂಡಿಕೆ ಮಾಡಿದರೆ ಅಧಿಕ ಲಾಭಾಂಶಗಳಿಸಬಹುದಾಗಿ ಜಯಾನಂದ ರನ್ನು ನಂಬಿಸಿದ್ದರು , ಅದರಂತೆ ಜಯಾನಂದರವರು ದಿನಾಂಕ 01/04/2025 ರಿಂದ ದಿನಾಂಕ 13/05/2025 ರ ವರೆಗೆ ಆಪಾದಿತರು ನೀಡಿದ ವಿವಿಧ ಬ್ಯಾಂಕ್ ಖಾತೆಗಳಿಗೆ ಹಂತ ಹಂತವಾಗಿ ಒಟ್ಟು 2,30,65,000/-ರೂಪಾಯಿ ಹಣವನ್ನು ವರ್ಗಾವಣೆ ಮಾಡಿರುತ್ತಾರೆ ಎಂದು ದೂರಿನಲ್ಲಿ ತಿಳಿಸಿದ್ದಾರೆ.
ಅದರೆ ಈ ತನಕ ಜಯಾನಂದ ರವರು ಶೇರು ಮಾರುಕಟ್ಟೆಯಲ್ಲಿ ಹೂಡಿಕೆ ಮಾಡಿದ ಹಣವನ್ನಾಗಲೀ ಅಥವಾ ಲಾಭಾಂಶನ್ನಾಗಲೀ ನೀಡದೇ ವಂಚನೆ ಮಾಡಿರುತ್ತಾರೆ ಎಂದು ಪೊಲೀಸರಿಗೆ ದೂರು ನೀಡಿದ್ದಾರೆ.
ಈ ಬಗ್ಗೆ ಸೆನ್ ಅಪರಾಧ ಪೊಲೀಸ್ ಠಾಣೆಯಲ್ಲಿ ಕಲಂ: 66(ಸಿ), 66(ಡಿ)ಐ.ಟಿ. ಆಕ್ಟ ಮತ್ತು 318(4)BNS ರಂತೆ ಪ್ರಕರಣ ದಾಖಲಾಗಿದೆ.