Spread the love

ಮಲ್ಪೆ; ದಿನಾಂಕ:15-05-2025 (ಹಾಯ್ ಉಡುಪಿ ನ್ಯೂಸ್) ನಡೆದಾಡುವ ಜಾಗದ ವಿಚಾರದಲ್ಲಿ ಮೂವರು ವ್ಯಕ್ತಿಗಳು ಜೀವಬೆದರಿಕೆ ಹಾಕಿದ್ದಾರೆ ಎಂದು ಪಡುತೋನ್ಸೆ ಗ್ರಾಮದ ರಹಮತುಲ್ಲಾ ಎಂಬವರು ದೂರು ನೀಡಿದ್ದಾರೆ.

ಹೂಡೆ ಪಡುತೋನ್ಸೆ ಗ್ರಾಮದ ನಿವಾಸಿ ರಹಮತುಲ್ಲಾ ಎಂಬವರು ದಾರುಸ್ಸುನ್ನ ಸಂಸ್ಥೆಯ ಕಾರ್ಯದರ್ಶಿ ಯಾಗಿದ್ದಾರೆ ಎಂದು ಪೊಲೀಸರಿಗೆ ನೀಡಿದ ದೂರಿನಲ್ಲಿ ತಿಳಿಸಿದ್ದಾರೆ.ಇವರ ಸಂಸ್ಥೆಯ ಪಕ್ಕದಲ್ಲಿ 3 ನೇ ಆರೋಪಿಗೆ ಸೇರಿದ ಜಾಗವಿದ್ದು, ರಹಮತುಲ್ಲಾ ರವರು ಅವರ ಸಂಸ್ಥೆಯ ಜಾಗದಲ್ಲಿ ಹೋಗುತ್ತಿರುವಾಗ ಆರೋಫಿತರಾದ 1.ಅಸ್ರಾರ್‌, 2.ಅಫ್ತಾಬ್‌, 3.ಶೇಖ್‌ ಅಕ್ಬರ್ ಎಂಬವರು ರಹಮತುಲ್ಲಾ ರನ್ನು ಉದ್ದೇಶಿಸಿ ನೀನು ಈ ಜಾಗದಲ್ಲಿ ಬಂದರೆ ನಿನ್ನನ್ನು ಬಿಡುವುದಿಲ್ಲ ಸೊಂಟವನ್ನು ಮುರಿಯುತ್ತೇವೆ ಎಂದು ಹಲ್ಲೆಗೆ ಮುಂದಾಗಿದ್ದು, ಹಾಗೂ ನಿನ್ನ ಸಂಸ್ಥೆಯ ಎಲ್ಲಾ ಅವ್ಯವಹಾರವನ್ನು ಬಂದ್‌ ಮಾಡುತ್ತೇನೆ ಮತ್ತು ನಿನ್ನನ್ನು ಈ ಜಾಗದಿಂದ ಖಾಲಿ ಮಾಡಿಸುತ್ತೇನೆಂದು ಅವಾಚ್ಯವಾಗಿ ಬೈದು ಜೀವ ಬೆದರಿಕೆ ಹಾಕಿರುತ್ತಾರೆ ಎಂದು ರಹಮತುಲ್ಲಾ ರವರು ನ್ಯಾಯಾಲಯದಲ್ಲಿ ಖಾಸಗಿ ದೂರು ಸಲ್ಲಿಸಿದ್ದಾರೆ.

ಈ ಬಗ್ಗೆ ಮಲ್ಪೆ ಪೊಲೀಸ್‌ ಠಾಣೆಯಲ್ಲಿ ಕಲಂ:352,351(2) BNS ರಂತೆ ಪ್ರಕರಣ ದಾಖಲಾಗಿದೆ..

error: No Copying!