Spread the love

ಬೈಂದೂರು: ದಿನಾಂಕ:15-05-2025(ಹಾಯ್ ಉಡುಪಿ ನ್ಯೂಸ್) ಗ್ರೀನ್ ವ್ಯಾಲಿ ಪದವಿ ಪೂರ್ವ ಕಾಲೇಜಿನ ಮೂವರು  ಪ್ರಾಧ್ಯಾಪಕರು ಅಪ್ರಾಪ್ತ ಬಾಲಕನಿಗೆ ಹಲ್ಲೆ ನಡೆಸಿದ್ದಾರೆ ಎಂದು ಬೈಂದೂರು ಪೊಲೀಸ್‌ ಠಾಣೆಯಲ್ಲಿ ದೂರು ದಾಖಲಾಗಿದೆ.

ಶಿರೂರು ಗ್ರೀನ್‌ ವ್ಯಾಲಿ ಪದವಿ ಪೂರ್ವ ಕಾಲೇಜಿನ ಚೀಪ್‌ ಕೊ ಅರ್ಡಿನೇಟರ್‌ ಕಛೇರಿಯೊಳಗೆ ದಿನಾಂಕ 09/11/2024 ರಂದು ಮಧ್ಯಾಹ್ನದ ಸಮಯ  ಕಾಲೇಜಿನ ಪ್ರಾಧ್ಯಾಪಕ ವಿನಾಯಕ  ಎಂಬವರು ಇತರ ಇಬ್ಬರೊಂದಿಗೆ ಸೇರಿಕೊಂಡು  ಕಾಲೇಜಿನ ಪಿ.ಯು. ವಿದ್ಯಾರ್ಥಿ ಅಪ್ರಾಪ್ತ ಬಾಲಕನಾಗಿರುವ ಅರ್ಫಾಕ್‌ ಅಬು ಹುಸೈನ್‌ ಎಂಬವನಿಗೆ ಕೈಯಿಂದ ಹಲ್ಲೆ ಮಾಡುತ್ತಿರುವ ವೀಡಿಯೋ ದಿನಾಂಕ 14/05/2025 ರಂದು ಸೋಶಿಯಲ್‌ ಮೀಡಿಯಾದಲ್ಲಿ ಹರಿದಾಡುತ್ತಿರುವುದನ್ನು ವೀಕ್ಷಿಸಿದ ಬೈಂದೂರು , ಪಡುವರಿ ಗ್ರಾಮದ ನಿವಾಸಿ ಶ್ರೀಧರ (42) ಎಂಬವರು ನೀಡಿದ ದೂರಿನಂತೆ ಬೈಂದೂರು ಪೊಲೀಸ್‌ ಠಾಣೆಯಲ್ಲಿ  ಕಲಂ: 115 (2) 3 (5) BNS & 75,JJ Act ರಂತೆ ಪ್ರಕರಣ ದಾಖಲಾಗಿದೆ.

error: No Copying!