Spread the love

ಉಡುಪಿ: ದಿನಾಂಕ 12/05/2025 (ಹಾಯ್ ಉಡುಪಿ ನ್ಯೂಸ್)  ಬಲಾಯಿಪಾದೆ ಜಂಕ್ಷನ್ ಬಳಿಯ ಹೀರಾ ಸಾಗರ್ ಹೋಟೆಲ್ ನಲ್ಲಿ ಮದ್ಯ ಮಾರಾಟ ಮಾಡುತ್ತಿದ್ದ ವ್ಯಕ್ತಿಯನ್ನು ಉಡುಪಿ ನಗರ ಪೊಲೀಸ್ ಠಾಣೆಯ ಪೊಲೀಸ್ ಉಪ ನಿರೀಕ್ಷಕರಾದ ಗೋಪಾಲಕೃಷ್ಣ ಜೋಗಿ ಅವರು ಬಂಧಿಸಿದ್ದಾರೆ.

ಉಡುಪಿ ನಗರ ಪೊಲೀಸ್ ಠಾಣೆಯ ಪೊಲೀಸ್ ಉಪ ನಿರೀಕ್ಷಕರಾದ ಗೋಪಾಲಕೃಷ್ಣ ಜೋಗಿ ಅವರು ದಿನಾಂಕ: 11-05-2025 ರಂದು ರೌಂಡ್ಸ್‌ ಕರ್ತವ್ಯದಲ್ಲಿರುವಾಗ ಅಕ್ರಮ ಮದ್ಯ ಮಾರಾಟ ನಡೆಯುತ್ತಿರುವುದಾಗಿ ದೊರೆತ ಖಚಿತ ಮಾಹಿತಿಯಂತೆ ಉಡುಪಿ ತಾಲೂಕು 76 ಬಡಗುಬೆಟ್ಟು ಗ್ರಾಮದ ಬಲಾಯಿಪಾದೆ ಜಂಕ್ಷನ್‌ ಹತ್ತಿರ ಇರುವ ಲಿಕ್ಕರ್‌ ಹೌಸ್‌ ಬಳಿಯಿರುವ ಹೋಟೆಲ್‌ ಹೀರಾ ಸಾಗರ್ ಒಳಗೆ ಮದ್ಯ ಮಾರಾಟ ಮಾಡುತ್ತಿರುವ ಬಗ್ಗೆ ಖಚಿತ ಮಾಹಿತಿ ಮೇರೆಗೆ ಕೂಡಲೇ ದಾಳಿ ನಡೆಸಿ ಆಪಾದಿತ ಪ್ರವೀಣ್ ಎಂಬಾತನನ್ನು ಬಂಧಿಸಿ ವಶಕ್ಕೆ ಪಡೆದುಕೊಂಡಿದ್ದಾರೆ .

ಆತನನ್ನು ವಿಚಾರಣೆ ನಡೆಸಿದಾಗ ಆಪಾದಿತ ಪ್ರವೀಣನು ಯಾವುದೇ ಪರವಾನಿಗೆಯಿಲ್ಲದೆ ಅಕ್ರಮವಾಗಿ ಹೋಟೆಲ್‌ ನಲ್ಲಿ ತನ್ನ ಸ್ವಂತ ಲಾಭಕ್ಕಾಗಿ ಮದ್ಯ ಮಾರಾಟ ಮಾಡುತ್ತಿರುವುದಾಗಿ ಖಚಿತಪಡಿಸಿದ್ದು , ಆಪಾದಿತನ ವಶದಿಂದ ವಿವಿಧ ಬ್ರ್ಯಾಂಡ್‌ ನ ಮದ್ಯದ ಸಾಚೇಟ್‌, ಬೀಯರ್‌ ಬಾಟಲ್‌,ನೀರಿನ ಬಾಟಲ್‌ ಗಳು ಮತ್ತು ನಗದು ರೂಪಾಯಿ 300/- ನ್ನು ವಶಪಡಿಕೊಂಡಿದ್ದಾರೆ.

ಈ ಬಗ್ಗೆ ಉಡುಪಿ ನಗರ ಪೊಲೀಸ್‌ ಠಾಣೆಯಲ್ಲಿ  ಕಲಂ: 15(A) 32(3) KE ACT ರಂತೆ ಪ್ರಕರಣ ದಾಖಲಾಗಿದೆ.

error: No Copying!