Spread the love

ಉಡುಪಿ: ದಿನಾಂಕ : 12/05/2025 (ಹಾಯ್ ಉಡುಪಿ ನ್ಯೂಸ್) ಬಲಾಯಿಪಾದೆ ಜಂಕ್ಷನ್ ಬಳಿಯ ಅಂಗಡಿಯೊಂದರಲ್ಲಿ ಅಕ್ರಮವಾಗಿ ಮದ್ಯ ಮಾರಾಟ ಮಾಡುತ್ತಿದ್ದ ವ್ಯಕ್ತಿಯನ್ನು ಉಡುಪಿ ನಗರ ಪೊಲೀಸ್ ಠಾಣೆಯ ಪೊಲೀಸ್ ಉಪ ನಿರೀಕ್ಷಕರಾದ  ಭರತೇಶ್‌ ಕಂಕಣವಾಡಿ ಅವರು ಬಂಧಿಸಿದ್ದಾರೆ.

ಉಡುಪಿ ನಗರ ಪೊಲೀಸ್‌ ಠಾಣೆ ,ಪೊಲೀಸ್ ಉಪ ನಿರೀಕ್ಷಕರಾದ (ಕಾ.ಸು) ಭರತೇಶ್ ಕಂಕಣವಾಡಿ ಅವರು ದಿನಾಂಕ :11-05-2025 ರಂದು ರೌಂಡ್ಸ್‌ ಕರ್ತವ್ಯದಲ್ಲಿರುವಾಗ ಅಕ್ರಮ ಮದ್ಯ ಮಾರಾಟ ನಡೆಯುತ್ತಿರುವುದಾಗಿ ದೊರೆತ ಸಾರ್ವಜನಿಕ ಮಾಹಿತಿಯಂತೆ ಕೂಡಲೇ ಉಡುಪಿ ತಾಲೂಕು 76 ಬಡಗುಬೆಟ್ಟು ಗ್ರಾಮದ ಬಲಾಯಿಪಾದೆ ಜಂಕ್ಷನ್‌ ಹತ್ತಿರ ಇರುವ ಲಿಕ್ಕರ್‌ ಹೌಸ್‌ ಬಳಿಯಿರುವ ಮಧುವನ ಫಾಸ್ಟ್‌ ಫುಡ್‌ ಹೊಟೇಲ್‌ ನ ಹಿಂದೆ ಇರುವ ತಗಡು ಶೀಟಿನ ಶೆಡ್‌ ಒಳಗೆ ಮದ್ಯ ಮಾರಾಟ ಮಾಡುತ್ತಿರುವ ಬಗ್ಗೆ ಬಂದ ಮಾಹಿತಿಯಂತೆ ದಾಳಿ ನಡೆಸಿ ಆಪಾದಿತ ಪ್ರಶಾಂತ್‌ ಎಂಬಾತನನ್ನು ಬಂಧಿಸಿ ವಶಕ್ಕೆ ಪಡೆದುಕೊಂಡಿದ್ದಾರೆ .

ಪ್ರಶಾಂತ್ ನನ್ನು ವಿಚಾರಣೆ ನಡೆಸಿದಾಗ ಆಪಾದಿತನು ಯಾವುದೇ ಪರವಾನಿಗೆಯಿಲ್ಲದೆ ಅಕ್ರಮವಾಗಿ ತಗಡು ಶೆಡ್ಡಿನಲ್ಲಿ ತನ್ನ ಸ್ವಂತ ಲಾಭಕ್ಕಾಗಿ ಮದ್ಯ ಮಾರಾಟ ಮಾಡುತ್ತಿರುವುದಾಗಿ ತಿಳಿಸಿದಂತೆ ಆಪಾದಿತನ ವಶದಿಂದ ಒಟ್ಟು ವಿವಿಧ ಬ್ರ್ಯಾಂಡ್‌ ನ ಮದ್ಯದ ಸಾಚೇಟ್‌, ಬೀಯರ್‌ ಬಾಟಲ್‌,ನೀರಿನ ಬಾಟಲ್‌ ಗಳು ಮತ್ತು ನಗದು ರೂಪಾಯಿ 570/- ನ್ನು ವಶಪಡಿಸಿಕೊಂಡಿದ್ದಾರೆ.

ಈ ಬಗ್ಗೆ ಉಡುಪಿ ನಗರ ಪೊಲೀಸ್‌ ಠಾಣೆಯಲ್ಲಿ  ಕಲಂ: 15(A) 32(3) KE ACT ರಂತೆ ಪ್ರಕರಣ ದಾಖಲಾಗಿದೆ.

error: No Copying!