
ಮಲ್ಪೆ: ದಿನಾಂಕ: 11-05-2025(ಹಾಯ್ ಉಡುಪಿ ನ್ಯೂಸ್) ಪಡುತೋನ್ಸೆ ಗ್ರಾಮದ ಮನೆಯೊಂದರ ರೂಂನಲ್ಲಿ ಇಟ್ಟಿದ್ದ ಚಿನ್ನಾಭರಣಗಳು ಕಳುವಾಗಿದೆ ಎಂದು ಪೊಲೀಸರಿಗೆ ದೂರು ನೀಡಿದ್ದಾರೆ.
ದಿನಾಂಕ 02/05/2025 ರಿಂದ ದಿನಾಂಕ 06/05/2025 ರ ನಡುವಿನ ಸಮಯದಲ್ಲಿ ಉಡುಪಿ, ಪಡುತೋನ್ಸೆ ಗ್ರಾಮದ ಗುಳಿಬೆಟ್ಟು ಎಂಬಲ್ಲಿನ ದುರ್ಗಾ ನಿಲಯ ಎಂಬಲ್ಲಿ ವಾಸವಾಗಿರುವ ರಾಜು ಶೀನ (75) ಎಂಬವರ ವಾಸ್ತವ್ಯದ ಮನೆಯ ರೂಮ್ ನ ಬೆಡ್ ಮೇಲೆ ಇಟ್ಟಿದ್ದ ರಾಜುಶೀನರ ಹೆಂಡತಿಯ 1) ಚಿನ್ನದ ನೆಕ್ಲೇಸ್-1, ಅಂದಾಜು 28 ಗ್ರಾಂ 2) ಚಿನ್ನದ ಕೀಲು ಬಳೆ-1 ಅಂದಾಜು 18 ಗ್ರಾಂ 3) ಚಿನ್ನದ ಬಳೆಗಳು- 2, ಅಂದಾಜು 30 ಗ್ರಾಂ 4) ಚಿನ್ನದ ಚೈನ್- 2, ಅಂದಾಜು 30 ಗ್ರಾಂ 5) ಚಿನ್ನದ ಕಿವಿ ಓಲೆ- 2, ಅಂದಾಜು 8 ಗ್ರಾಂ 6) ಚಿನ್ನದ ಉಂಗುರ- 1, ಅಂದಾಜು 4 ಗ್ರಾಂ ಚಿನ್ನಾಭರಣಗಳನ್ನು ಯಾರೋ ಕಳ್ಳರು ಕಳವು ಮಾಡಿಕೊಂಡು ಹೋಗಿದ್ದು, ಕಳವಾದ ಚಿನ್ನಾಭರಣಗಳ ಒಟ್ಟು ತೂಕ ಅಂದಾಜು 118 ಗ್ರಾಂ ಆಗಿದ್ದು, ಒಟ್ಟು ಅಂದಾಜು ಮೌಲ್ಯ ರೂ. 9,50,000/- ಆಗಬಹುದಾಗಿದೆ ಎಂದು ಪೊಲೀಸರಿಗೆ ದೂರು ನೀಡಿದ್ದಾರೆ.
ಈ ಬಗ್ಗೆ ಮಲ್ಪೆ ಪೊಲೀಸ್ ಠಾಣೆಯಲ್ಲಿ ಕಲಂ:305 BNS ರಂತೆ ಪ್ರಕರಣ ದಾಖಲಾಗಿದೆ.