
ಮಲ್ಪೆ; ಬಂದರು ರಸ್ತೆಯಲ್ಲಿರುವ ಐಸ್ ಪ್ಲಾಂಟ್ ಒಂದರ ಹಿಂಬದಿಯ ಸಾರ್ವಜನಿಕ ಸ್ಥಳದಲ್ಲಿ ಅಂದರ್ ಬಾಹರ್ ಜುಗಾರಿ ಆಡುತ್ತಿದ್ದ ಹನ್ನೊಂದು ಜನರನ್ನು ಮಲ್ಪೆ ಪೊಲೀಸ್ ಠಾಣೆಯ ಪಿಎಸ್ಐ ಯವರಾದ ರವಿ ಬಿ ಕೆ ಯವರು ಬಂಧಿಸಿದ್ದಾರೆ.
ಮಲ್ಪೆ ಪೊಲೀಸ್ ಠಾಣೆ ಪಿಎಸ್ಐ ಯವರಾದ ರವಿ ಬಿ ಕೆ ಯವರು ದಿನಾಂಕ 10/05/2025 ರಂದು ಠಾಣೆಯಲ್ಲಿರುವಾಗ ಉಡುಪಿ ತಾಲೂಕು ಕೊಡವೂರು ಗ್ರಾಮದ ಮಲ್ಪೆ ಬಂದರು ರಸ್ತೆಯಲ್ಲಿರುವ ಶ್ಯಾಮಿಲಿ ಐಸ್ ಪ್ಲಾಂಟ್ ಹಿಂಬದಿಯ ಸಾರ್ವಜನಿಕ ಸ್ಥಳದಲ್ಲಿ ಹಣವನ್ನು ಪಣವಾಗಿಟ್ಟು ಅಂದರ್-ಬಾಹರ್ ಜುಗಾರಿ ಆಟವನ್ನು ಆಡುತ್ತಿರುವುದಾಗಿ ಖಚಿತ ಮಾಹಿತಿ ಬಂದಿದೆ ಎಂದು ದೂರಿನಲ್ಲಿ ತಿಳಿಸಿದ್ದಾರೆ.
ಮಾಹಿತಿ ಬಂದ ಕೂಡಲೇ ಠಾಣಾ ಸಿಬ್ಬಂದಿಗಳೊಂದಿಗೆ ಕೊಡವೂರು ಗ್ರಾಮದ ಮಲ್ಪೆ ಬಂದರು ರಸ್ತೆಯಲ್ಲಿರುವ ಶ್ಯಾಮಿಲಿ ಐಸ್ ಪ್ಲಾಂಟ್ ಹಿಂಬದಿ ತಲುಪಿ ನೋಡಿದಾಗ ಅಲ್ಲಿನ ವಿದ್ಯುತ್ ಬೆಳಕು ಇರುವ ಸಾರ್ವಜನಿಕ ಖಾಲಿ ಸ್ಥಳದಲ್ಲಿ 10:12 ಜನರು ಕಪ್ಪು ಬಣ್ಣದ ಟರ್ಪಾಲು ಹಾಸಿಕೊಂಡು ಕುಳಿತುಕೊಂಡಿದ್ದು, ಅವರಲ್ಲಿ ಓರ್ವ ವ್ಯಕ್ತಿಯು ಇಸ್ಪೀಟ್ ಎಲೆಗಳನ್ನು ಹಿಡಿದುಕೊಂಡು ಅದೃಷ್ಟದ ಒಂದು ಎಲೆಯನ್ನು ಟರ್ಪಾಲಿನ ಒಂದು ಬದಿಯಲ್ಲಿ ಹಾಕಿ ಈ ವ್ಯಕ್ತಿಯು ಒಳಗೆ ಹೊರಗೆ ಎಂದು ಹೇಳುತ್ತಾ ತನ್ನ ಕೈಯಲ್ಲಿದ್ದ ಇಸ್ಪೀಟ್ ಎಲೆಗಳನ್ನು ಹೊರಗಡೆ ಮತ್ತು ಒಳಗಡೆ ಹಾಕುತ್ತಿದ್ದು, ಉಳಿದವರು ತಮ್ಮ ಕೈಯಲ್ಲಿ ಹಣವನ್ನು ಹಿಡಿದುಕೊಂಡು ಒಳಗೆ- ಹೊರಗೆ ಎಂದು ಹೇಳುತ್ತಾ ಹಣವನ್ನು ಟರ್ಪಾಲಿನ ಮೇಲೆ ಹಾಕಿ ಅಂದರ್ ಬಾಹರ್ ಎಂಬ ಇಸ್ಪೀಟ್ ಆಟ ಆಡುತ್ತಾ ಹಣವನ್ನು ಪಣವಾಗಿಟ್ಟು ಜೂಜಾಟ ಆಡುತ್ತಿದ್ದರು ಎನ್ನಲಾಗಿದೆ.
ಪೊಲೀಸ್ ಸಿಬ್ಬಂದಿಯವರು ಆಟದ ಸ್ಥಳಕ್ಕೆ ದಾಳಿ ಮಾಡಿ ಇಸ್ಪೀಟು ಜುಗಾರಿ ಆಟ ಆಡುತ್ತಿದ್ದ 1. ಬಾಶಾ ಸಾಬ್, 2. ಜಿ ಶಶಿಕುಮಾರ್, 3. ಯಮುನಪ್ಪ ಉಮೇಶ ಮಾದರ, 4. ಮಂಜುನಾಥ, 5. ದ್ಯಾಮಣ್ಣ ರಾಮಪ್ಪ ಪಶುಪತಿಹಾಳ, 6. ಸೋಮೇಶ ಕುರಿ, 7. ಗೋಪಿ, 8.ಗುತ್ತೆಪ್ಪ ಗುಡ್ಡಪ್ಪ ಕದರಮಂಡಲಗಿ, 9. ವೀರಪಣ್ಣ, 10. ಅಜ್ಜಳಾರ ಪರಶುರಾಮ, 11. ಪರಮೇಶ್ ಎಂಬವರನ್ನು ಪೊಲೀಸರು ಸುತ್ತುವರಿದು ಹಿಡಿದು ಅವರಲ್ಲಿ ವಿಚಾರಿಸಿದಾಗ ತಾವು ಹಣವನ್ನು ಪಣವಾಗಿಟ್ಟು ಅಂದರ್- ಬಾಹರ್ ಇಸ್ಪೀಟು ಜುಗಾರಿ ಆಟ ಆಡುತ್ತಿದ್ದುದಾಗಿ ಒಪ್ಪಿಕೊಂಡಿರುತ್ತಾರೆ ಎನ್ನಲಾಗಿದೆ .
ಆರೋಪಿಗಳನ್ನು ಪೊಲೀಸರು ಬಂಧಿಸಿದ್ದು ಈ ಬಗ್ಗೆ ಮಲ್ಪೆ ಪೊಲೀಸ್ ಠಾಣೆಯಲ್ಲಿ ಕಲಂ:112 BNS & 87 KP Act ರಂತೆ ಪ್ರಕರಣ ದಾಖಲಾಗಿದೆ.