Spread the love

ಕಾರ್ಕಳ: ದಿನಾಂಕ: 03-05-2025(ಹಾಯ್ ಉಡುಪಿ ನ್ಯೂಸ್) ನಿಟ್ಟೆ ರಾಜ್ಯ ಹೆದ್ದಾರಿ ಯಲ್ಲಿ ಚಲಿಸುತ್ತಿದ್ದ ಪ್ರಯಾಣಿಕ ಬಸ್ಸು ಒಂದಕ್ಕೆ ಯುವಕರೀರ್ವರು ಕಲ್ಲೆಸೆದು ಹಾನಿ ಮಾಡಿದ್ದಾರೆ ಎಂದು ಬಸ್ಸು ಚಾಲಕ ಪೊಲೀಸರಿಗೆ ದೂರು ನೀಡಿದ್ದಾರೆ.

ಕಾರ್ಕಳ,,ಸಾಣೂರು ಗ್ರಾಮ ನಿವಾಸಿ ಆಲ್ವಿನ್ ಪಿಂಟೋ (49) ಎಂಬವರು ದಿನಾಂಕ 02/05/2025 ರಂದು ಮಧ್ಯಾಹ್ನ ಕಾರ್ಕಳ ತಾಲೂಕು ನಿಟ್ಟೆ ಗ್ರಾಮದ ನಿಟ್ಟೆ ಪಂಚಾಯತ್ ಬಳಿ ಹಾದು ಹೋಗಿರುವ ಕಾರ್ಕಳ-ಪಡುಬಿದ್ರಿ ರಾಜ್ಯ ಹೆದ್ದಾರಿಯಲ್ಲಿ ನವೀನ್ ಎಂಬ ಹೆಸರಿನ ನಂಬರ್ ಪ್ಲೇಟ್ ಬಾರದ KA-20-AC-6338 ನೋಂದಣೆ ನಂಬ್ರದ ಪ್ರಯಾಣಿಕ ಬಸ್ಸನ್ನು ಕಾರ್ಕಳ ಕಡೆಯಿಂದ ಬೆಳ್ಮಣ್ ಕಡೆಗೆ ಚಲಾಯಿಸಿಕೊಂಡು ಹೋಗುವಾಗ ನಿಟ್ಟೆ ಕಡೆಯಿಂದ ಕಾರ್ಕಳ ಕಡೆಗೆ ಮೋಟಾರು ಸೈಕಲ್ ಸವಾರನೊಬ್ಬನು ಹಿಂಬದಿಯಲ್ಲಿ ಸಹಸವಾರನೊಬ್ಬನನ್ನು ಕುಳ್ಳಿರಿಸಿಕೊಂಡು ಮೋಟಾರು ಸೈಕಲನ್ನು ಸವಾರಿ ಮಾಡಿಕೊಂಡು ಬಂದು, ಸಹಸವಾರನು ಮೋಟಾರ್‌ ಸೈಕಲ್‌‌ನಲ್ಲಿಯೇ ಕುಳಿತುಕೊಂಡು ಕಲ್ಲನ್ನು ಬಸ್ಸಿನ ಗ್ಲಾಸಿಗೆ ಕಲ್ಲನ್ನು ಹೊಡೆದರೆ ಬಸ್ಸು ಚಾಲಕನ ಹತೋಟಿ ತಪ್ಪಿ ಅಪಘಾತ ಸಂಭವಿಸಿ ಬಸ್ಸಿನಲ್ಲಿದ್ದವರ ಜೀವಕ್ಕೆ ಹಾಗೂ ಬಸ್ಸಿಗೆ ಹಾನಿಯಾಗಬಹುದು ಎಂದು ತಿಳಿದರೂ, ಉದ್ದೇಶಪೂರ್ವಕವಾಗಿ ಆತನ ಕೈಯಲ್ಲಿ ಹಿಡಿದುಕೊಂಡ ಕಲ್ಲನ್ನು ಬಸ್ಸಿನ ಎದುರುಗಡೆಯ ಗ್ಲಾಸಿಗೆ ಹೊಡೆದು ಗ್ಲಾಸ್ ಜಖಂಗೊಳಿಸಿ 45,000/- ರೂಪಾಯಿ ನಷ್ಠವನ್ನುಂಟು ಮಾಡಿರುತ್ತಾರೆ ಎಂದು ಪೊಲೀಸರಿಗೆ ದೂರು ನೀಡಿದ್ದಾರೆ.

ಆಲ್ವಿನ್ ಪಿಂಟೋ ರವರು ನೀಡಿದ ದೂರಿನಂತೆ ಕಾರ್ಕಳ ಗ್ರಾಮಾಂತರ ಪೊಲೀಸ್‌ ಠಾಣೆಯಲ್ಲಿ ಕಲಂ: 110,324(4) ಜೊತೆಗೆ 3(5) BNS ರಂತೆ ಪ್ರಕರಣ ದಾಖಲಾಗಿದೆ.

error: No Copying!