
ಕಾರ್ಕಳ: ದಿನಾಂಕ: 23-04-2025 (ಹಾಯ್ ಉಡುಪಿ ನ್ಯೂಸ್) ರಂಗನಪಲ್ಕೆಯಲ್ಲಿ ಸ್ಟೇಷನರಿ ಅಂಗಡಿ ತೆರೆಯಲು ಸಹಾಯ ಮಾಡುವುದಾಗಿ ನಂಬಿಸಿ ಲಕ್ಷ್ಮೀ ಎಂಟರ್ಪ್ರೈಸಸ್ ಹೆಸರಿನಲ್ಲಿ ಕೌಡೂರು ಗ್ರಾಮದ ಕವಿತಾ ಕೃಪಾಲಿನಿ ಎಂಬವರಿಗೆ ಒಂಭತ್ತು ಲಕ್ಷ ಐವತ್ತು ಸಾವಿರ ರೂಪಾಯಿ ವಂಚನೆ ನಡೆಸಿದ್ದಾರೆ ಎಂದು ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
ಕಾರ್ಕಳ ,ಕೌಡೂರು ಗ್ರಾಮದ ಕವಿತಾ ಕ್ರಪಾಲಿನಿ (38) ಎಂಬವರು ರಂಗನಪಲ್ಕೆಯಲ್ಲಿ ಸ್ಟೇಷನರಿ ಮತ್ತು ಪುಸ್ತಕ ಅಂಗಡಿಯನ್ನು ಮಾಡಲು ಜೆರಾಕ್ಸ್ ಮೆಷೀನ್ ಲ್ಯಾಮಿನೇಷನ್ ಮೆಷೀನ್ ಲ್ಯಾಪ್ ಟಾಪ್ ಎಲ್ಲ ವನ್ನು PMEGP ಯೋಜನೆಯಲ್ಲಿ ಸಾಲ ಪಡೆಯುವುದಕ್ಕಾಗಿ ಕೆನರಾ ಬ್ಯಾಂಕ್ ಕಣಜಾರು ಶಾಖೆಯಲ್ಲಿ ಅರ್ಜಿಸಲ್ಲಿಸಿದ್ದರು ಎಂದು ಪೊಲೀಸರಿಗೆ ನೀಡಿದ ದೂರಿನಲ್ಲಿ ತಿಳಿಸಿದ್ದಾರೆ.
ಈ ಸಮಯ ಲಕ್ಷ್ಮೀ ಎಂಟರ್ಪ್ರೈಸಸ್ ನ ಆರೋಪಿಯು ಕವಿತಾ ಕ್ರಪಾಲಿನಿ ರವರನ್ನು ನಂಬಿಸಿ ಬ್ಯಾಂಕ್‌ಗೆ ನೀಡುವ ಸಾಲದ ಕೊಟೇಶನ್ ನೀಡಿ ಸಾಲ ತೆಗೆಯಿಸಿಕೊಡುವುದಾಗಿ ಹೇಳಿದ್ದು, ಲಕ್ಷೀ ಎಂಟರ್ ಪ್ರೈಸಸ್ ಮೂಲಕ ಎಲ್ಲಾ ಸಾಮಾಗ್ರಿಗಳ ನ್ನು ನೀಡುವುದಾಗಿ ನಂಬಿಸಿ ಕೊಟೇಶನ್ ನೀಡಿದ್ದು ಅದರಂತೆ ದಿನಾಂಕ 18/12/2024 ರಂದು ಕೆನರಾ ಬ್ಯಾಂಕ್ ಕಣಜಾರು ಶಾಖೆ ಯಿಂದ 9,00,000/- ಸಾಲದ ಹಣ ಹಾಗೂ 50,000/- ಕವಿತಾ ಕ್ರಪಾಲಿನಿ ರವರ ಖಾತೆಯಿಂದ ನಗದು ಹಣ ಆರೋಪಿ ತಿಳಿಸಿದ ಲಕ್ಷೀ ಎಂಟರ್ಪ್ರೈಸಸ್ ಖಾತೆಗೆ ಜಮೆ ಆಗಿರುತ್ತದೆ ಎನ್ನಲಾಗಿದೆ.
ಆದರೆ ಆರೋಪಿಯು ಕವಿತಾ ಕ್ರಪಾಲಿನಿ ರವರಿಗೆ ಯಾವುದೇ ಸಾಮಾಗ್ರಿಗಳನ್ನು ನೀಡಿರುವುದಿಲ್ಲ ಹಾಗೂ ಬ್ಯಾಂಕ್ ನವರು ಸಾಲದ ತಿಂಗಳ ಕಂತನ್ನು ಕಟ್ಟುವಂತೆ ಹೇಳಿದ್ದು ಆಗ ಆರೋಪಿಯಲ್ಲಿ ಹಾಗೂ ಕವಿತಾ ಕ್ರಪಾಲಿನಿ ರವರಲ್ಲಿ PMEGP ಯೋಜನೆಯಡಿಯಲ್ಲಿ ಪಡೆದ ಸಾಲ ಮರು ಪಾವತಿ ಮಾಡುವಂತೆ ಬ್ಯಾಂಕ್‌ನವರು ಹೇಳಿದಾಗ ಆರೋಪಿಯು ದಿನಾಂಕ 21/02/2025 ರಂದು 2,00,000/- ರೂ ಹಣವನ್ನು ಬ್ಯಾಂಕ್ ಖಾತೆಗೆ ಹಾಕಿದ್ದು.ಉಳಿದ ಹಣವನ್ನಾಗಲಿ ಕೊಟೇಶನ್ ನಲ್ಲಿ ನೀಡಿದ ಮೆಷೀನ್ ಗಳಾಗಲಿ ನೀಡದೇ ಮೋಸ ಮಾಡಿದ್ದಾನೆ ಎಂದು ಪೊಲೀಸರಿಗೆ ದೂರು ನೀಡಿದ್ದಾರೆ.
ಈ ಬಗ್ಗೆ ಕಾರ್ಕಳ ನಗರ ಪೊಲೀಸ್ ಠಾಣೆಯಲ್ಲಿ ಕಲಂ: 316(2), 318 (4) BNS ರಂತೆ ಪ್ರಕರಣ ದಾಖಲಾಗಿದೆ.