
ಮಣಿಪಾಲ: ದಿನಾಂಕ : 23/04/2025 (ಹಾಯ್ ಉಡುಪಿ ನ್ಯೂಸ್) ದಶರಥ ನಗರದ ಲಾಡ್ಜ್ ಒಂದರ ರೂಂ ಒಂದರಲ್ಲಿ ಮಾದಕವಸ್ತು ಗಳೊಂದಿಗೆ ಇದ್ದ ಮೂವರು ಯುವಕರನ್ನು ಮಣಿಪಾಲ ಪೊಲೀಸ್ ಠಾಣೆಯ ಪೊಲೀಸ್ ನಿರೀಕ್ಷಕರಾದ ಮಹೇಶ್ ಪ್ರಸಾದ್ ಅವರು ಬಂಧಿಸಿದ್ದಾರೆ.
ಮಣಿಪಾಲ ಪೊಲೀಸ್ ಠಾಣೆಯ ಪೊಲೀಸ್ ನಿರೀಕ್ಷಕರಾದ ಮಹೇಶ್ ಪ್ರಸಾದ್ ಅವರು ದಿನಾಂಕ:22-04-2025 ರಂದು ಠಾಣೆಯಲ್ಲಿದ್ದಾಗ ಉಡುಪಿ ತಾಲೂಕು 80 ಬಡಗಬೆಟ್ಟು ಗ್ರಾಮದ ಧಶರಥ ನಗರದ ಡೌನ್ ಟೌನ್ ಲಾಡ್ಜ್‌ನ ರೂಮ್ ನಂ 106 ನೇದರಲ್ಲಿರುವ ಕೆಲವು ವ್ಯಕ್ತಿಗಳು ಮಾದಕವಸ್ತುವನ್ನು ತೆಗೆದುಕೊಳ್ಳಲು ಉಪಯೋಗಿಸುವ ಸಿರಿಂಜ್‌ಗಳನ್ನು ಹೊಂದಿದ ಬಗ್ಗೆ ಗುಮಾನಿ ಇರುವ ಬಗ್ಗೆ ಮಾಹಿತಿದಾರರಿಂದ ಖಚಿತ ಮಾಹಿತಿ ಬಂದಿದೆ ಎನ್ನಲಾಗಿದೆ.
ಕೂಡಲೇ ಸಿಬ್ಬಂದಿಯವರೊಂದಿಗೆ ಮಾಹಿತಿ ಬಂದ ಸ್ಥಳವಾದ ಡೌನ್ ಟೌನ್ ಲಾಡ್ಜ್‌ನ ರೂಮ್ ನಂ 106 ನೇದಕ್ಕೆ ದಾಳಿ ಮಾಡಿದಾಗ ಅಲ್ಲಿದ್ಧ ಆರೋಪಿಗಳಾದ 1. ಮಹಮ್ಮದ್ ಅಜರುದ್ದೀನ್ ಯಾನೆ ಮಂಚಕಲ್ ಅಜರುದ್ದೀನ್ 2. ರಾಜೇಶ್ ಪ್ರಕಾಶ್ ಜಾದವ್ 3. ನಾಜೀಲ್ ಯಾನೆ ಆಶಿಪ್ ರವರನ್ನು ಹಾಗೂ ಅವರ ವಶದಲ್ಲಿದ್ದ ಅಂದಾಜು ಸುಮಾರು 40000/- ರೂ ಮೌಲ್ಯದ ಒಟ್ಟು 13.70 ಗ್ರಾಂ ತೂಕದ MDMA ಮತ್ತು 10500 ರೂ ಮೌಲ್ಯದ 225 ಗ್ರಾಂ ಗಾಂಜಾ , ಪ್ಲಾಸ್ಟಿಕ್ ಸಣ್ಣ ಸಣ್ಣ ಕವರ್ 15, 5 ಸಿರಿಂಜ್‌ಗಳು , Sterile water 5 ml ನ 3 ಪ್ಲಾಸ್ಟಿಕ್ ಸೀಸೆ ಹಾಗೂ 500 ಮೌಲ್ಯದ ACE ಕಂಪೆನಿಯ ಕೀಪ್ಯಾಡ್ ಮೊಬೈಲ್ ಮತ್ತು 5000 ರೂ ಮೌಲ್ಯದ REDMI ಕಂಪೆನಿಯ ಟಚ್ ಸ್ಕ್ರೀನ್ ಮೊಬೈಲ್ ನ್ನು ವಶಪಡಿಸಿಕೊಂಡಿದ್ದಾರೆ.
ಈ ಬಗ್ಗೆ ಮಣಿಪಾಲ ಪೊಲೀಸ್ ಠಾಣೆಯಲ್ಲಿ ಕಲಂ: 8(c), 20(b),22(b) NDPS Act ರಂತೆ ಪ್ರಕರಣ ದಾಖಲಾಗಿದೆ.