Spread the love
  • ಕೊಲ್ಲೂರು: ದಿನಾಂಕ:22-04-2025(ಹಾಯ್ ಉಡುಪಿ ನ್ಯೂಸ್)  ಹೊಸೂರು ಗ್ರಾಮದ ಪರಿಶಿಷ್ಟ ಜಾತಿಗೆ ಸೇರಿದ ಯುವಕನಿಗೆ ವ್ಯಕ್ತಿ ಯೋರ್ವ ಜೀವ ಬೆದರಿಕೆ ಹಾಕಿದ್ದಾನೆ ಎಂದು ಕೊಲ್ಲೂರು ಪೊಲೀಸ್‌ ಠಾಣೆಯಲ್ಲಿ ದೂರು ದಾಖಲಾಗಿದೆ.
  • ಕುಂದಾಪುರ ತಾಲೂಕು ಹೊಸೂರು ಗ್ರಾಮದ ನಿವಾಸಿ ಎಸ್.ಎನ್ ಶ್ರೀಕಾಂತ ಎಂಬವರ ತಾಯಿ   ನಾಗರತ್ನ  ರವರು  ಪರಿಶಿಷ್ಟ ಜಾತಿಗೆ ಸೇರಿದವರಾಗಿದ್ದು, ದಿನಾಂಕ 16/04/2025 ರಂದು ಸಂಜೆ  ಕುಂದಾಪುರ ತಾಲೂಕಿನ  ಹೊಸೂರು ಗ್ರಾಮದ  ಮತ್ತಿಕೊಡ್ಲುವಿನಿಂದ  ಅರಾಟೆ ಎಂಬಲ್ಲಿಗೆ ಹೋಗುವ ರಸ್ತೆಯಲ್ಲಿ  ಹೋಗುತ್ತಿರುವಾಗ,  ಆಪಾದಿತ ಅಶೋಕ್‌ ಎಂಬವನು KA20-W-8253ನೇ ಬೈಕಿನಲ್ಲಿ ಬಂದು ಎಸ್.ಎನ್ ಶ್ರೀಕಾಂತ ರವರನ್ನು ಅಕ್ರಮವಾಗಿ ಅಡ್ಡಗಟ್ಟಿ,  ಜೀವ ಬೆದರಿಕೆ ಹಾಕಿರುತ್ತಾನೆ ಎಂದು ಪೊಲೀಸರಿಗೆ ನೀಡಿದ ದೂರಿನಲ್ಲಿ ತಿಳಿಸಿದ್ದಾರೆ.
  • ಆ ಸಮಯ ಶ್ರೀಕಾಂತ್ ಹೆದರಿ  ಗಟ್ಟಿಯಾಗಿ  ಬೊಬ್ಬೆ ಹೊಡೆದಾಗ  ತಾಯಿ ಹಾಗೂ ಸಿಂಗಾರಿ ಎಂಬವರು ಬಂದಿದ್ದು ಅವರನ್ನು ಕಂಡ ಆಪಾದಿತ ಅಶೋಕ ಅಲ್ಲಿಂದ ಓಡಿ ಹೋಗಿರುತ್ತಾನೆ ಎಂದು ಪೊಲೀಸರಿಗೆ  ದೂರು ನೀಡಿದ್ದಾರೆ.
  • ಈ ಬಗ್ಗೆ ಕೊಲ್ಲೂರು ಪೊಲೀಸ್‌ ಠಾಣೆಯಲ್ಲಿ  ಕಲಂ: 126 (2), 352, 131, 351 (2) BNS & 3 (1), (r), (s), 3 (1)(e), 3(2), (v-a), SC/ST act 2015 ರಂತೆ ಪ್ರಕರಣ ದಾಖಲಾಗಿದೆ.
error: No Copying!