Spread the love

ಬೈಂದೂರು: ದಿನಾಂಕ : 21-04-2025( ಹಾಯ್ ಉಡುಪಿ ನ್ಯೂಸ್) ತನ್ನ ಸ್ವಂತ ಜಾಗದಲ್ಲಿ ಬೋರ್ವೆಲ್ ಕೊರೆಯುತ್ತಿದ್ದ ಪದ್ಮಾವತಿ (65) ಎಂಬವರಿಗೆ ಜೀವ ಬೆದರಿಕೆ ಹಾಕಿದ್ದಾರೆ ಎಂದು ಪೊಲೀಸರಿಗೆ ದೂರು ನೀಡಿದ್ದಾರೆ.

ಯಡ್ತರೆ ಗ್ರಾಮದ ನಿವಾಸಿ ಪದ್ಮಾವತಿ ಎಂಬವರ ಮಗ ಗುರುದಾಸ್‌ ರವರು ಯೋಜನಾ ನಗರದ ತನ್ನ ಜಾಗದಲ್ಲಿ ಪಟ್ಟಣ ಪಂಚಾಯಿತಿ ಹಾಗು ಭೂ ವಿಜ್ಞಾನ ಜಿಲ್ಲಾ ಅಂತರ್ಜಲ ಕಚೇರಿ ಯಿಂದ ಪರವಾನಿಗೆ ಪಡೆದುಕೊಂಡು ದಿನಾಂಕ 19/04/2025 ಸಂಜೆ  ಬೋರ್ವೆಲ್‌ ಕೊರೆಸಲು ಪ್ರಾರಂಬಿಸಿದ್ದರು ಎಂದು ಪೊಲೀಸರಿಗೆ ನೀಡಿದ ದೂರಿನಲ್ಲಿ ತಿಳಿಸಿದ್ದಾರೆ.

ಬೋರ್ವೆಲ್ ಕೆಲಸ ಮಾಡುತ್ತಿರುವಾಗ ಸಂಜೆ  ಆಪಾದಿತ ಶಿವರಾಜ್‌ ಎಂಬವ ಹಾಗು 20 ರಿಂದ 25 ಜನ ಗಂಡಸರು ಹಾಗು ಹೆಂಗಸರು ಸೇರಿ ಪದ್ಮಾವತಿ ರವರ ಮಗನ ಜಾಗಕ್ಕೆ ಅಕ್ರಮ ಪ್ರವೇಶ ಮಾಡಿ ಬೋರ್ವೆಲ್‌ ಕೊರೆಯುತ್ತಿರುವುದನ್ನು ತಡೆದಿರುತ್ತಾರೆ ಎಂದು  ದೂರಿದ್ದಾರೆ, ಪದ್ಮಾವತಿರವರು ಮತ್ತು ಅವರ ಗಂಡ ಯಾಕೆ ತಡೆಯುತ್ತೀರ ಎಂದು ಕೇಳಿದಾಗ, ಆರೋಪಿತರುಗಳು ಪದ್ಮಾವತಿರವರ ಮತ್ತು ಅವರ ಗಂಡನಿಗೆ ಅವಾಚ್ಯಾ ಶಬ್ದಗಳಿಂದ ಬೈದು ಕಾಲಿನಿಂದ ತುಳಿದು ಬೋರ್ವೆಲ್‌ ಕೊರೆಯುವುದನ್ನು ಮುಂದುವರಿಸಿದರೆ ನಿಮ್ಮನ್ನು ಕೊಲ್ಲುತ್ತೇವೆ ಎಂದು ಜೀವ ಬೆದರಿಕೆ ಹಾಕಿದ್ದು ಅಲ್ಲದೆ ಮುಂದುವರೆಸಿದರೆ ಗಾಡಿಗೆ ಬೆಂಕಿ ಹಾಕುವುದಾಗಿ ಹೆದರಿಸಿರುತ್ತಾರೆ ಎಂದು ಪೊಲೀಸರಿಗೆ ದೂರು ನೀಡಿದ್ದಾರೆ,

ಈ ಬಗ್ಗೆ ಬೈಂದೂರು ಪೊಲೀಸ್‌ ಠಾಣೆಯಲ್ಲಿ  ಕಲಂ: 189(2),329(3),352, 351(2) ಜೊತೆಗೆ 190 BNS ರಂತೆ ಪ್ರಕರಣ ದಾಖಲಾಗಿದೆ.

error: No Copying!