Spread the love

ಮಲ್ಪೆ: ದಿನಾಂಕ :21-04-2025 (ಹಾಯ್ ಉಡುಪಿ ನ್ಯೂಸ್) ಕಿದಿಯೂರು ಗ್ರಾಮದಲ್ಲಿ ಕೋಳಿ ಅಂಕ ಜುಗಾರಿ ನಡೆಯುತ್ತಿದ್ದ ಸ್ಥಳಕ್ಕೆ ಮಲ್ಪೆ ಪೊಲೀಸ್‌ ಠಾಣೆಯ ಪಿಎಸ್‌ಐ ರವಿ ಬಿ.ಕೆ ಅವರು ದಾಳಿ ನಡೆಸಿ ಐವರನ್ನು ಬಂಧಿಸಿದ್ದಾರೆ.

ಮಲ್ಪೆ ಪೊಲೀಸ್‌ ಠಾಣೆಯ ಪಿಎಸ್ಐಯವರಾದ ರವಿ ಬಿ.ಕೆ  ಅವರು ದಿನಾಂಕ 20/04/2025 ರಂದು ಠಾಣೆಯಲ್ಲಿರುವಾಗ ಮಾಹಿತಿದಾರರು ಮೊಬೈಲ್ ಕರೆ ಮಾಡಿ ಕಿದಿಯೂರು ಗ್ರಾಮದ ಕಪ್ಪೆಟ್ಟುಗರಡಿಯ ಬಳಿ ಸಾರ್ವಜನಿಕ ಸ್ಥಳದಲ್ಲಿ ಹಣವನ್ನು ಪಣವಾಗಿರಿಸಿ ಕೋಳಿ ಅಂಕ ನಡೆಸುತ್ತಿರುವುದಾಗಿ ಮಾಹಿತಿ ನೀಡಿದ ಮೇರೆಗೆ ಠಾಣಾ ಸಿಬ್ಬಂದಿಗಳೊಂದಿಗೆ  ಉಡುಪಿ ತಾಲೂಕು ಕಿದಿಯೂರು ಗ್ರಾಮದ ಕಪ್ಪೆಟ್ಟು ಬ್ರಹ್ಮ ಬೈದರ್ಕಳ ಗರಡಿಯ ಬಳಿ ಪಿಎಸ್ಐ ಯವರು ಮತ್ತು ಸಿಬ್ಬಂದಿಗಳು ದಾಳಿ ನಡೆಸಿದಾಗ  ಸಾರ್ವಜನಿಕ ಸ್ಥಳದಲ್ಲಿ ಶರತ್‌, ಸಂದೇಶ , ಜಯಕರ, ರಮೇಶ, ಅರುಣ ಕುಮಾರ್‌ ಮತ್ತು ಕೆಲವು ಜನರು ಒಟ್ಟು ಸೇರಿಕೊಂಡಿದ್ದು, ಕೋಳಿಗಳಿಗೆ ಹಿಂಸಾತ್ಮಕವಾಗಿ ಅದರ ಕಾಲಿಗೆ ಬಾಳು ಕತ್ತಿಯನ್ನು ಕಟ್ಟಿ ಕೋಳಿ ಅಂಕ ಎಂಬ ಜುಗಾರಿ ಗೆ ಹಣವನ್ನು ಪಣವಾಗಿ ಕಟ್ಟಿಕೊಳ್ಳುತ್ತಿದ್ದರು ಎನ್ನಲಾಗಿದೆ .

ಪೊಲೀಸ್ ಸಿಬ್ಬಂದಿಯವರ ಸಹಾಯದಿಂದ ದಾಳಿ ನಡೆಸಿದಾಗ ಕೆಲವರು ಓಡಿ ಹೋಗಿದ್ದು, ಜುಗಾರಿ ಆಟಕ್ಕೆ ಬಳಸಿದ ಹಣವನ್ನು ಸ್ಥಳದಲ್ಲಿಯೇ ಬೀಸಾಕಿದ್ದನ್ನು ತೆಗೆದು ನೋಡಿದಾಗ ಒಟ್ಟು ನಗದು ರೂಪಾಯಿ 2,200/- ಇರುತ್ತದೆ. ಇವರು ಹಿಂಸಾತ್ಮಕ ವಾಗಿ ಜುಗಾರಿ ಆಟಕ್ಕೆ ಬಳಸಿದ 10 ಹುಂಜ ಕೋಳಿ ಅದೇ ಸ್ಥಳದಲ್ಲಿದ್ದು, ಅವುಗಳ ಒಟ್ಟು ಅಂದಾಜು ಮೌಲ್ಯ ರೂ. 10,000/- ಆಗಬಹುದು. ಕೋಳಿಯ ಕಾಲಿಗೆ ಕಟ್ಟಿದ ಬಾಳು (ಕತ್ತಿ)– 2, ನಗದು 2,200/- ರೂಪಾಯಿ, 10 ಜೀವಂತ ಹುಂಜ ಕೋಳಿಗಳು ಇದ್ದು.ಕೋಳಿ ಅಂಕ ಎಂಬ ಅಕ್ರಮ ಜುಗಾರಿ ಆಟ ಆಡಿರುತ್ತಾರೆ ಎಂದು ದೂರಿನಲ್ಲಿ ತಿಳಿಸಿದ್ದಾರೆ.

ಈ ಬಗ್ಗೆ ಮಲ್ಪೆ ಪೊಲೀಸ್‌ ಠಾಣೆಯಲ್ಲಿ  ಕಲಂ:112 BNS, ಕಲಂ:87, 93 ಕೆಪಿ ಆಕ್ಟ್ ರಂತೆ ಪ್ರಕರಣ ದಾಖಲಗಿದೆ.

error: No Copying!