Spread the love

ಬ್ರಹ್ಮಾವರ: ದಿನಾಂಕ: 19-04-2025(ಹಾಯ್ ಉಡುಪಿ ನ್ಯೂಸ್) ಕೆ.ಜಿ.ರೋಡ್ ರಿಕ್ಷಾ ನಿಲ್ದಾಣದ ರಿಕ್ಷಾ ಚಾಲಕನ ಮೇಲೆ ಯುವಕನೋರ್ವ ತಲವಾರಿನಿಂದ ಹಲ್ಲೆ ನಡೆಸಿ ಕೈ ಕಡಿದಿರುವ ಬಗ್ಗೆ ವರದಿಯಾಗಿದೆ.

ಇಂದು ರಾತ್ರಿ ಸ್ಥಳೀಯ ಯುವಕನೊಂದಿಗೆ ರಿಕ್ಷಾ ಚಾಲಕ ರಮೇಶ್ ಎಂಬವ ಮಾತಿನ ಚಕಮಕಿ ನಡೆಸಿ ಯುವಕನಿಗೆ ರಿಕ್ಷಾ ಚಾಲಕ ಹಲ್ಲೆ ನಡೆಸಿದ್ದನೆನ್ನಲಾಗಿದೆ. ಇದರಿಂದ ಸಿಟ್ಟಿಗೆದ್ದ ಯುವಕ ಸ್ವಲ್ಪ ಹೊತ್ತಿನ ಬಳಿಕ ದ್ವಿಚಕ್ರ ವಾಹನದಲ್ಲಿ ತಲವಾರು ಹಿಡಿದು ಬಂದು ರಿಕ್ಷಾ ಚಾಲಕನ ಕೈಯನ್ನೇ ಕಡಿದು ಹಾಕಿದ್ದಾನೆ ಎನ್ನಲಾಗಿದೆ. ಕೈಯನ್ನು ಕಡಿದು ಹಾಕಿದ ಯುವಕ ಸ್ಥಳದಲ್ಲಿ ತಲವಾರು, ಮೊಬೈಲ್, ದ್ವಿಚಕ್ರ ವಾಹನ ಬಿಟ್ಟು ಹೋಗಿದ್ದಾನೆ ಎನ್ನಲಾಗಿದೆ. ಈ ಬಗ್ಗೆ ಹೆಚ್ಚಿನ ವಿವರ ಪೊಲೀಸ್ ತನಿಖೆಯ ಬಳಿಕವಷ್ಟೇ ತಿಳಿದು ಬರಲಿದೆ.

error: No Copying!