
ಕೊಲ್ಲೂರು: ದಿನಾಂಕ 11/04/2025 (ಹಾಯ್ ಉಡುಪಿ ನ್ಯೂಸ್) ಗ್ರಾಮದ ಬಸ್ ನಿಲ್ದಾಣದ ಬಳಿಯ ಸಾರ್ವಜನಿಕ ಸ್ಥಳದಲ್ಲಿ ಶರಾಬು ಸೇವನೆ ಮಾಡುತ್ತಿದ್ದ ವ್ಯಕ್ತಿಯನ್ನು ಕೊಲ್ಲೂರು ಪೊಲೀಸ್ ಠಾಣೆಯ ಪೊಲೀಸ್ ಉಪ ನಿರೀಕ್ಷಕರಾದ ವಿನಯ್ ಎಂ ಕೊರ್ಲಹಳ್ಳಿಅವರು ಬಂಧಿಸಿದ್ದಾರೆ.
ಕೊಲ್ಲೂರು ಪೊಲೀಸ್ ಠಾಣೆಯ ಪೊಲೀಸ್ ಉಪ ನಿರೀಕ್ಷಕರಾದ ವಿನಯ್ ಎಂ ಕೊರ್ಲಹಳ್ಳಿ ಅವರು ದಿನಾಂಕ :10-04-2025 ರಂದು ಇಲಾಖೆಯ ಜೀಪಿನಲ್ಲಿ, ಚಾಲಕರಾದ ವಿಜಯ, ಸಿಬ್ಬಂದಿಯಾದ ರಾಘವೇಂದ್ರರೊಂದಿಗೆ, ಕೊಲ್ಲೂರು ಗ್ರಾಮದಲ್ಲಿ ರೌಂಡ್ಸ್ ಕರ್ತವ್ಯದಲ್ಲಿರುವಾಗ, ಕೊಲ್ಲೂರು ಗ್ರಾಮದ ಬೀಟ್ ಸಿಬ್ಬಂದಿಯಾದ ನಾಗೇಂದ್ರ ರವರು ನೀಡಿದ ಮಾಹಿತಿ ಮೇರೆಗೆ ಬೈಂದೂರು ತಾಲೂಕು, ಕೊಲ್ಲೂರು ಗ್ರಾಮದ ಬಸ್ ನಿಲ್ದಾಣದ ಹತ್ತಿರದ ಫ್ರೆಂಡ್ಸ್ ಹೊಟೇಲ್ ಬಳಿಯ ಸಾರ್ವಜನಿಕ ಸ್ಥಳಕ್ಕೆ ದಾಳಿ ಮಾಡಿದಾಗ ಅಲ್ಲಿ ಕೊಲ್ಲೂರು ಗ್ರಾಮದ ನಿವಾಸಿ ಆಪಾದಿತ ಸೀತಾರಾಮ (31) ಎಂಬವನು ಸಾರ್ವಜನಿಕ ಸ್ಥಳದಲ್ಲಿ ಅಕ್ರಮವಾಗಿ ಶರಾಬು ಸೇವನೆ ಮಾಡುತ್ತಿದ್ದು ಆತನನ್ನು ಪೊಲೀಸರು ಬಂಧಿಸಿದ್ದಾರೆ.
ಆರೋಪಿ ಸೀತಾರಾಮನ ವಶದಿಂದ ORGINAL CHOICE DELUXE Whisky ಎಂದು ಬರೆದಿರುವ 90 ml ನ ಖಾಲಿ ಸ್ಯಾಚೆಟ್ 2, ನೀರಿನ ಪ್ಲಾಸ್ಟಿಕ ಬಾಟಲಿ- 1 & ಪ್ಲಾಸ್ಟಿಕ್ ಲೋಟ -1ನ್ನು ಪೊಲೀಸರು ಸ್ವಾಧೀನಪಡಿಸಿಕೊಂಡಿದ್ದಾರೆ.
ಈ ಬಗ್ಗೆ ಕೊಲ್ಲೂರು ಪೊಲೀಸ್ ಠಾಣೆಯಲ್ಲಿ ಕಲಂ:15 (ಎ) ಕರ್ನಾಟಕ ಅಬಕಾರಿ ಕಾಯ್ಡೆಯಂತೆ ಪ್ರಕರಣ ದಾಖಲಾಗಿದೆ.