
ಪಡುಬಿದ್ರಿ: ದಿನಾಂಕ :11-04-2025(ಹಾಯ್ ಉಡುಪಿ ನ್ಯೂಸ್) ನಿಷೇಧಿತ ಮಾದಕವಸ್ತು MDMA ಹೊಂದಿದ್ದ ಮೂವರು ಯುವಕರನ್ನು ಪಡುಬಿದ್ರಿ ಠಾಣೆಯ ಪೊಲೀಸರು ಬಂಧಿಸಿದ್ದಾರೆ.
ಪಡುಬಿದ್ರಿ ಪೊಲೀಸ್ ಠಾಣೆಯಲ್ಲಿ ದಾಖಲಾದ ಅಪರಾಧ ಪ್ರಕರಣವೊಂದರಲ್ಲಿ ಆರೋಪಿಗಳಾದ 1.ಮೊಹಮ್ಮದ್ ನೌಫಿಲ್,2. ಅಬ್ದುಲ್ ಮೌಸೀನ್ 3.ಮೊಹಮ್ಮದ್ ಶಂಶೀರ್ ಎಂಬವರ ವಿಚಾರಣೆಯ ಸಮಯ ಆರೋಪಿಗಳು ಅಪರಾಧ ನಡೆಸಿದ ಸ್ಥಳಕ್ಕೆ ಬಂದ KA-37 N-6060 ಕಾರಿನಲ್ಲಿ ನಿಷೇದಿತ ಮಾದಕ ವಸ್ತು MDMA ಇರುವುದಾಗಿ ಮಾಹಿತಿ ನೀಡಿದ್ದಾರೆ ಎನ್ನಲಾಗಿದೆ.
ಈ ಬಗ್ಗೆ ಆರೋಪಿಗಳೊಂದಿಗೆ ಅಪರಾಧ ನಡೆಸಿದ ಸ್ಥಳವಾದ ಕಾಪು ತಾಲೂಕು ಬಡಾ ಎರ್ಮಾಳು ಗ್ರಾಮದ ಗ್ರೀನ್ ಚಿಲ್ಲಿ ಹೋಟೆಲ್ ಬಳಿ ತೆರಳಿ ಅಧಿಕಾರಿಗಳು ಆರೋಪಿಗಳು ತೋರಿಸಿಕೊಟ್ಟಂತೆ ಕಾರಿನ ಡ್ಯಾಶ್ ಬೋರ್ಡ್‌ನ ಒಳಗೆ ಮೆಟಲ್ ಬಾಕ್ಸ್ ನಲ್ಲಿ ಇದ್ದ (1) 0.75 ಗ್ರಾಂ, (2). 0.40 ಗ್ರಾಂ, (3). 0.65 ಗ್ರಾಂ, (4). 0.70, (5). 0.71, (6) 0.71, (7) 0.44 ಗ್ರಾಂ ತೂಕದ ಒಟ್ಟು 4 ಗ್ರಾಂ 36 ಮಿಲಿಗ್ರಾಂ ತೂಕ ದ MDMA ಇರುವ 7 ಪ್ಯಾಕೇಟ್‌ಗಳು ಇದ್ದು, ಅವುಗಳ ಮಾರುಕಟ್ಟೆ ಬೆಲೆಯು ಒಟ್ಟು ಸುಮಾರು 20,000/- ರೂಪಾಯಿಗಳಾಗಿದ್ದು, ಮಾದಕವಸ್ತು ಗಳನ್ನು, ಮೆಟಲ್ ಬಾಕ್ಸ್, ಕಾರು ಹಾಗೂ ಆರೋಪಿ ಮೊಹಮ್ಮದ್ ಶಂಶೀರ್ ಈತನ ವಶ ಇದ್ದ ವಿವೋ ಮೊಬೈಲ್ ಪೋನನ್ನು ಪೊಲೀಸರು ವಶಕ್ಕೆ ಪಡೆದು ಆರೋಪಿ ಮೂರೂ ಜನರನ್ನು ಮಾದಕವಸ್ತು ಹೊಂದಿದ್ದ ಪ್ರಕರಣದಲ್ಲಿ ಬಂಧಿಸಿ ವಶಕ್ಕೆ ಪಡೆದುಕೊಂಡಿದ್ದಾರೆ.
ಈ ಬಗ್ಗೆ ಪಡುಬಿದ್ರಿ ಪೊಲೀಸ್ ಠಾಣೆಯಲ್ಲಿ ಕಲಂ: 8(ಸಿ), 22ಬಿ NDPS ರಂತೆ ಪ್ರಕರಣ ದಾಖಲಾಗಿದೆ.