Spread the love

ಮಲ್ಪೆ: ದಿನಾಂಕ:09-04-2025(ಹಾಯ್ ಉಡುಪಿ ನ್ಯೂಸ್) ಬಂದರಿನಲ್ಲಿ ಬೋಟಿನಲ್ಲಿ ಕೆಲಸ ಮಾಡುತ್ತಿರುವಾಗ ಕ್ಷುಲ್ಲಕ ಕಾರಣಕ್ಕೆ ಪಕ್ಕದ ಬೋಟಿನ ಕೆಲಸಗಾರ ಹಲ್ಲೆ ನಡೆಸಿದ್ದಾನೆ ಎಂದು ರಾಘವೇಂದ್ರ ಎಂಬವರು ಪೊಲೀಸರಿಗೆ ದೂರು ನೀಡಿದ್ದಾರೆ.

ಚಿತ್ತಾಕುಲ ಗ್ರಾಮದ ನಿವಾಸಿ ರಾಘವೇಂದ್ರ (37) ಅವರು ದಿ:08-04-2025 ರಂದು ಮಲ್ಪೆ ಬಂದರಿನಲ್ಲಿ ಬೋಟ್‌ ನಲ್ಲಿ ಕೆಲಸ ಮಾಡುತ್ತಿರುವಾಗ ಪಕ್ಕದ ಬೋಟಿನ ವ್ಯಕ್ತಿಯ ಬಳಿ ಬೋಟಿನ ಹಗ್ಗ ಬಿಚ್ಚು ಎಂದು ಹೇಳಿದ್ದಕ್ಕೆ ಆತನು ʼಅವಾಚ್ಯ ಶಬ್ದಗಳಿಂದ ಬೈದಿರುತ್ತಾನೆ ಎಂದು ಪೊಲೀಸರಿಗೆ ನೀಡಿದ ದೂರಿನಲ್ಲಿ ತಿಳಿಸಿದ್ದಾರೆ.

ನಂತರ ಮಲ್ಪೆಯಲ್ಲಿ ಊಟ ಮಾಡಿ ವಾಪಾಸ್ಸು ಮಲ್ಪೆ ಬಂದರು ಕಡೆಗೆ ಹೋಗುತ್ತಿರುವಾಗ ರಾತ್ರಿ  ಮಲ್ಪೆ ಬಸ್‌ ನಿಲ್ದಾಣದ ಬಳಿ ಇರುವಾಗ ರಾಘವೇಂದ್ರ ರವರು ಕೆಲಸ ಮಾಡುವ ಬೋಟಿನ ಪಕ್ಕದ ಬೋಟಿನ ಅಪರಿಚಿತ ವ್ಯಕ್ತಿ ರಾಘವೇಂದ್ರ ರವರನ್ನು ಅಡ್ಡಗಟ್ಟಿ ತಡೆದು ನಿಲ್ಲಿಸಿ ನೀನು ಮಲ್ಪೆ ಬಿಟ್ಟು ಓಡಬೇಕುʼ ಎಂದು ಅವಾಚ್ಯ ಶಬ್ದಗಳಿಂದ ಬೈದು ಆತನ ಕೈಯಲ್ಲಿದ್ದ ಕಬ್ಬಿಣದ ರಾಡ್‌ ನಿಂದ ತಲೆಗೆ ಹೊಡೆದಿದ್ದು ಪರಿಣಾಮ ತಲೆಯಲ್ಲಿ ಗಾಯವಾಗಿ ತುಂಬಾ ರಕ್ತಬಂದಿರುತ್ತದೆ ಎಂದು ಪೊಲೀಸರಿಗೆ ದೂರು ನೀಡಿದ್ದಾರೆ.

ಈ ಬಗ್ಗೆ ಮಲ್ಪೆ ಪೊಲೀಸ್‌ ಠಾಣೆಯಲ್ಲಿ  ಕಲಂ: 352,126(2),118 (1) BNS 2023 ರಂತೆ ಪ್ರಕರಣ ದಾಖಲಾಗಿದೆ.

error: No Copying!