
ಉಡುಪಿ: ದಿನಾಂಕ:09-04-2025 (ಹಾಯ್ ಉಡುಪಿ ನ್ಯೂಸ್) ಸಾರಿಗೆ ಇಲಾಖೆಯಲ್ಲಿ ಇನ್ಸ್ಪೆಕ್ಟರ್ ಎಂದು ನಂಬಿಸಿ ಕೆಲಸ ತೆಗೆಸಿ ಕೊಡುವುದಾಗಿ ಅಲೆವೂರಿನ ಇಬ್ಬರು ಯುವಕರಿಗೆ ಬೆಂಗಳೂರಿನ ವ್ಯಕ್ತಿ ಯೋರ್ವ ಇಪ್ಪತ್ತೆಂಟು ಲಕ್ಷ ರೂಪಾಯಿ ವಂಚನೆ ನಡೆಸಿದ್ದಾನೆ ಎಂದು ನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
ಪಡು ಅಲೆವೂರು,ದುರ್ಗಾ ನಗರ ನಿವಾಸಿ ವೀರೇಶ್ (28) ಎಂಬವರಿಗೆ ಆರೋಪಿ ಅಭಿಷೇಕ್ ಎನ್ ಎಂಬುವವನು ಬೆಂಗಳೂರಿನಲ್ಲಿ ಪರಿಚಯವಾಗಿದ್ದು, ತಾನು ಸಾರಿಗೆ ಇಲಾಖೆಯಲ್ಲಿ ಬ್ರೇಕ್ ಇನ್ಸ್ಪೆಕ್ಟರ್ ಆಗಿ ಕೆಲಸವನ್ನು ಮಾಡಿಕೊಂಡಿರುವುದಾಗಿ ನಂಬಿಸಿದ್ದಾನೆ ಎಂದು ಪೊಲೀಸರಿಗೆ ನೀಡಿರುವ ದೂರಿನಲ್ಲಿ ವೀರೇಶ್ ತಿಳಿಸಿದ್ದಾರೆ.
ಆರೋಪಿ ಅಭಿಷೇಕ್ ನು ವೀರೇಶ್ ಮತ್ತು ಆತನ ಸ್ನೇಹಿತರಾದ ರವೀಂದ್ರ ಎಂಬವರಿಗೆ ಇಲಾಖೆಯಲ್ಲಿ ಕೆಲಸವನ್ನು ಕೊಡಿಸುವುದಾಗಿ ನಂಬಿಸಿ, ವೀರೇಶ್ ರಿಂದ 18 ಲಕ್ಷ ರೂಪಾಯಿ ಹಣ ಹಾಗೂ ರವೀಂದ್ರ ರವರಿಂದ 10 ಲಕ್ಷ ರೂಪಾಯಿ ಹಣವನ್ನು ತನ್ನ ಬ್ಯಾಂಕ್ ಖಾತೆಗೆ ದಿನಾಂಕ:27/03/2021 ರಿಂದ ದಿನಾಂಕ:01/08/2023 ರ ನಡುವೆ ವರ್ಗಾವಣೆ ಮಾಡಿಸಿಕೊಂಡಿದ್ದು,ಆರೋಪಿ ಅಭಿಷೇಕ್ ನು ವೀರೇಶ್ ಮತ್ತು ರವೀಂದ್ರ ರವರಿಗೆ ಈವರೆಗೂ ಯಾವುದೇ ಉದ್ಯೋಗವನ್ನು ಕೊಡಿಸದೇ, ಹಣವನ್ನೂ ವಾಪಾಸ್ಸು ಹಿಂದಿರುಗಿಸದೇ ನಂಬಿಸಿ, ವಂಚನೆ ಹಾಗೂ ಮೋಸ ಮಾಡಿದ್ದಾನೆ ಎಂದು ಪೊಲೀಸರಿಗೆ ದೂರು ನೀಡಿದ್ದಾರೆ.
ಈ ಬಗ್ಗೆ ಉಡುಪಿ ನಗರ ಪೊಲೀಸ್ ಠಾಣೆಯಲ್ಲಿ ಕಲಂ: 406, 417, 420 ಐಪಿಸಿಯಂತೆ ಪ್ರಕರಣ ದಾಖಲಾಗಿದೆ.