
ಕೋಟ: ದಿನಾಂಕ : 07/04/2025 (ಹಾಯ್ ಉಡುಪಿ ನ್ಯೂಸ್) ಗುಂಡ್ಮಿ ಗ್ರಾಮದ ಮಸೀದಿ ಬಳಿಯ ಸಾರ್ವಜನಿಕ ಸ್ಥಳದಲ್ಲಿ ಗಾಂಜಾ ಅಮಲಿನಲ್ಲಿದ್ದ ಇಬ್ಬರು ಯುವಕರನ್ನು ಕೋಟ ಪೊಲೀಸ್ ಠಾಣೆಯ ಪೊಲೀಸ್ ಉಪ ನಿರೀಕ್ಷಕರಾದ (ಕಾ&ಸು) ರಾಘವೇಂದ್ರ ಸಿ ಅವರು ಬಂಧಿಸಿದ್ದಾರೆ.
ಕೋಟ ಪೊಲೀಸ್ ಠಾಣೆ ಪೊಲೀಸ್ ಉಪ ನಿರೀಕ್ಷಕರಾದ ರಾಘವೇಂದ್ರ ಸಿ ಅವರು ದಿನಾಂಕ: 06-04-2025 ರಂದು ಬ್ರಹ್ಮಾವರದ ಹೊನ್ನಾಳದಲ್ಲಿ ಪ್ರಕರಣವೊಂದರ ತನಿಖೆ ಮುಗಿಸಿ ಕೋಟಾ ಕಡೆಗೆ ಬರುತ್ತಿರುವಾಗ ಮಧ್ಯಾಹ್ನ ಬ್ರಹ್ಮಾವರ ತಾಲೂಕು ಗುಂಡ್ಮಿ ಗ್ರಾಮದ ಗುಂಡ್ಮಿ ಮಸೀದಿಯ ಬಳಿ ಸಾರ್ವಜನಿಕ ಸ್ಥಳದಲ್ಲಿ ಇಬ್ಬರು ಯುವಕರು ಅಮಲಿನಲ್ಲಿದ್ದಂತೆ ಕಂಡು ಬಂದಿದ್ದು, ಅವರು ಗಾಂಜಾ ಸೇವನೆ ಮಾಡಿರಬಹುದು ಎಂದು ಅನುಮಾನಗೊಂಡು ಅವರ ಬಳಿ ಹೋಗಿ ಪೊಲೀಸರು ಹೆಸರು ಕೇಳಿದಾಗ ಅಫ್ವಾನ್ (27) , ಹಾಗೂ ಮಹಮ್ಮದ್ ತಬ್ರೇಜ್ (30) ಎಂದು ತಿಳಿಸಿದ್ದು, ಇಬ್ಬರನ್ನೂ ವೈದ್ಯಾಧಿಕಾರಿಯವರು ಸಮುದಾಯ ಆರೋಗ್ಯ ಕೇಂದ್ರ ಕೋಟ ರವರ ಮುಂದೆ ಹಾಜರು ಪಡಿಸಿದ್ದು, ಇಬ್ಬರನ್ನೂ ಪರೀಕ್ಷಿಸಿದ ವೈದ್ಯರು ಆರೋಪಿಗಳು ಈರ್ವರೂ ಗಾಂಜಾ ಸೇವಿಸಿರುವ ಬಗ್ಗೆ ದೃಢಪಡಿಸಿ ವರದಿ ನೀಡಿರುತ್ತಾರೆ ಎನ್ನಲಾಗಿದೆ.
ಈ ಬಗ್ಗೆ ಕೋಟ ಪೊಲೀಸ್ ಠಾಣೆಯಲ್ಲಿ ಅಪರಾಧ ಕಲಂ: 27(B) NDPS ACT ರಂತೆ ಪ್ರಕರಣ ದಾಖಲಾಗಿದೆ.