Spread the love

ಮಣಿಪಾಲ: ದಿನಾಂಕ: 31-03-2025( ಹಾಯ್ ಉಡುಪಿ ನ್ಯೂಸ್) ತನ್ನ ಮನೆಯ ಕಡೆಗೆ ನಡೆದು ಕೊಂಡು ಹೋಗುತ್ತಿದ್ದ ಮಹಿಳೆ ಯ ಕುತ್ತಿಗೆಯಿಂದ ಚಿನ್ನದ ಚೈನ್ ಅನ್ನು ಸುಲಿಗೆ ಮಾಡಿದ್ದಾರೆ ಎಂದು ಮಹಿಳೆ ಪೊಲೀಸರಿಗೆ ದೂರು ನೀಡಿದ್ದಾರೆ.

ಪರ್ಕಳ , ಹೆರ್ಗಾ ನಿವಾಸಿ ವಸಂತಿ (51) ಅವರು ಕೆಎಂಸಿ ಆಸ್ಪತೆಯ ಬಿಲ್ಲಿಂಗ್‌ ಸೆಕ್ಷನ್‌ ನಲ್ಲಿ ಅಟೆಂಡರ್‌ ಕೆಲಸ ಮಾಡಿಕೊಂಡಿದ್ದು ಅವರು ದಿನಾಂಕ 29/03/2025 ರಂದು ಸಂಜೆ ಕೆಲಸ ಮುಗಿಸಿ ವಾಪಾಸು ಮನೆಗೆ ಹೋಗುವಾಗ ನಡೆದುಕೊಂಡು ಹೋಗುತ್ತಿರುವಾಗ ಉಡುಪಿ ತಾಲೂಕು ಶಿವಳ್ಳಿ ಗ್ರಾಮದ WGSHA ಕಾಲೇಜಿನ ಹಿಂಬದಿ ತಲುಪುವಾಗ ಹಿಂದುಗಡೆಯಿಂದ ಓರ್ವ ವ್ಯಕ್ತಿ ಬಂದು ವಸಂತಿರವರ ಕುತ್ತಿಗೆಗೆ ಕೈ ಹಾಕಿ ಅವರ ಕುತ್ತಿಗೆಯಲ್ಲಿದ್ದ ಸುಮಾರು 3,50,000/- ರೂ ಮೌಲ್ಯದ ಸುಮಾರು 45 ಗ್ರಾಂ ತೂಕದ ಚಿನ್ನದ ಚೈನ್‌ ಆನ್ನು ಎಳೆದು ಸುಲಿಗೆ ಮಾಡಿಕೊಂಡು ಹೋಗಿದ್ದಾನೆ ಎಂದು ಪೊಲೀಸರಿಗೆ ದೂರು ನೀಡಿದ್ದಾರೆ.

ಈ ಬಗ್ಗೆ ಮಣಿಪಾಲ ಪೊಲೀಸ್‌ ಠಾಣೆಯಲ್ಲಿ  ಕಲಂ: 304 BNS ರಂತೆ ಪ್ರಕರಣ ದಾಖಲಾಗಿದೆ.

error: No Copying!