Spread the love

ಕಾರ್ಕಳ: ದಿನಾಂಕ:30-03-2025(ಹಾಯ್ ಉಡುಪಿ ನ್ಯೂಸ್) ಮಿಯ್ಯಾರು ಗ್ರಾಮದ ಜೋಡು ಕಟ್ಟೆಯ ಸಾರ್ವಜನಿಕ ಸ್ಥಳದಲ್ಲಿ ಮಟ್ಕಾ ಜುಗಾರಿ ಅಡ್ಡೆ ನಡೆಸುತ್ತಿದ್ದವರನ್ನು ಕಾರ್ಕಳ ನಗರ ಪೊಲೀಸ್‌ ಠಾಣೆಯ ಪೊಲೀಸ್ ಉಪ ನಿರೀಕ್ಷಕರಾದ ಸಂದೀಪ್ ಕುಮಾರ್ ಶೆಟ್ಟಿ ಅವರು ಬಂಧಿಸಿದ್ದಾರೆ

ಕಾರ್ಕಳ ನಗರ ಪೊಲೀಸ್‌ ಠಾಣೆಯ ಪೊಲೀಸ್ ಉಪ ನಿರೀಕ್ಷಕರಾದ ಸಂದೀಪ್ ಕುಮಾರ್ ಶೆಟ್ಟಿ ಅವರಿಗೆ ದಿನಾಂಕ 29/03/2025 ರಂದು ಬಂದ ಖಚಿತ ಮಾಹಿತಿಯಂತೆ  ಕಾರ್ಕಳ ತಾಲೂಕಿನ ಮಿಯ್ಯಾರು ಗ್ರಾಮದ ಹೈವೆ ಬಾರ್ ಬಳಿಯ ಜೋಡುಕಟ್ಟೆ ಎಂಬಲ್ಲಿನ ಸಾರ್ವಜನಿಕ ಸ್ಥಳದಲ್ಲಿ ಅಕ್ರಮವಾಗಿ ಸಾರ್ವಜನಿಕರಿಂದ 1 ರೂಪಾಯಿಗೆ 70 ರೂಪಾಯಿ ನೀಡುವುದಾಗಿ ಹೇಳಿ ಮಟ್ಕಾ ಜುಗಾರಿ ಆಟದ ಬಗ್ಗೆ ಹಣ ಸಂಗ್ರಹ ಮಾಡುತ್ತಿದ್ದಲ್ಲಿಗೆ  ಕೂಡಲೇ ದಾಳಿ ನಡೆಸಿ ಅಲ್ಲಿ ಸಂಘಟಿತರಾಗಿ ಮಟ್ಕಾ ಜುಗಾರಿ ನಡೆಸುತ್ತಿದ್ದ ಸಂದೀಪ್ ಬಜಗೋಳಿ, ಉಡುಪಿಯ ಹರೀಶ ಹಾಗೂ ಉಡುಪಿಯ ಲಿಯೋ ಎಂಬವರನ್ನು ಬಂಧಿಸಿದ್ದಾರೆ.

ಇವರು ಮಟ್ಕಾ ಜುಗಾರಿ ಆಟಕ್ಕೆ ಬಳಸಿದ ಮಟ್ಕಾ ಸಂಖ್ಯೆ ಬರೆದ ಚೀಟಿ , ನಗದು ಹಣ ಒಟ್ಟು 3940/-ರೂಪಾಯಿ.  ಪೆನ್ನು -1 ಹಣ ಹಾಕಿದ ಬ್ಯಾಗ್ -1 ಹಾಗೂ ಮೊಬೈಲ್ ಪೋನ್ -1 ಇದನ್ನು ಮುಂದಿನ ಕ್ರಮದ ಬಗ್ಗೆ ವಶಪಡಿಸಿಕೊಂಡಿದ್ದಾರೆ.

ಈ ಬಗ್ಗೆ ಕಾರ್ಕಳ ನಗರ ಪೊಲೀಸ್‌ ಠಾಣೆಯಲ್ಲಿ  78(i)̧, (iii) KP Act ಕಲಂ: 112(1) R/W 3(5) BNS ರಂತೆ ಪ್ರಕರಣ ದಾಖಲಾಗಿದೆ.

error: No Copying!