
ಕೋಟ: ದಿನಾಂಕ: 29-03-2025(ಹಾಯ್ ಉಡುಪಿ ನ್ಯೂಸ್) ತೆಕ್ಕಟ್ಟೆ ಗ್ರಾಮದ ಜಾಗವೊಂದನ್ನು ಮೂವರು ಆರೋಪಿಗಳು ಸೇರಿ ಕೊಂಡು ನಕಲಿ ದಾಖಲೆ ಸೃಷ್ಟಿಸಿ ಬೇರೆಯವರ ಹೆಸರಿಗೆ ಮಾಡಿ ವಂಚನೆ ನಡೆಸಿದ್ದು ಇದೀಗ ಕೊಲೆ ಬೆದರಿಕೆ ಹಾಕಿದ್ದಾರೆ ಎಂದು ಅರುಂಧತಿ ಎಂಬವರು ಕೋಟ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ.
ಕುಂದಾಪುರ ತಾಲೂಕು,ಕೊಟೇಶ್ವರ ಗ್ರಾಮದ ನಿವಾಸಿ ಆರುಂಧತಿ ಎಂಬವರ ತಂದೆ ಶೇಷಗಿರಿ , ಅನಂತ ಮತ್ತು ಬಾಬುರಾಯ ಎಂಬವರ ಹೆಸರಿನಲ್ಲಿ ತೆಕ್ಕಟ್ಟೆ ಗ್ರಾಮದ ಸ. ನಂಬ್ರ 161 1H1 ರಲ್ಲಿ 4.66 ಸೆಂಟ್ಸ್ ಜಾಗ ಇದ್ದು ,ಅದನ್ನು ಆರುಂಧತಿ ರವರ ತಂದೆಯವರು ದಿನಾಂಕ:16.08.1988 ರಂದು ತೆಕ್ಕಟ್ಟೆಯ ಸಂಜೀವ ಮತ್ತು ಅವರ ಪತ್ನಿ ಯವರಿಗೆ ಕರಾರು ಪತ್ರ ಮಾಡಿ ಕೊಟ್ಟಿರುತ್ತಾರೆ ಎಂದು ಆರುಂಧತಿ ಅವರು ಪೊಲೀಸರಿಗೆ ನೀಡಿದ ದೂರಿನಲ್ಲಿ ತಿಳಿಸಿದ್ದಾರೆ.
ಅಂದಿನಿಂದ ಇಂದಿನವರೆಗೂ ಈ ಸರ್ವೇ ನಂಬರ್ ನ ಭೂಮಿಯು ಸಂಜೀವ ರವರ ಸ್ವಾಧೀನದಲ್ಲಿ ಇರುತ್ತದೆ ಎಂದಿದ್ದಾರೆ .ಹೀಗಿರುವಾಗ ಆರೋಪಿಗಳಾದ 1.ನಾಗರಾಜ 2.ಸುಜಾತ 3.ಮಂಜುನಾಥ 4.ಕೋಡಿ ನಾಗೇಶ್ ಎಂಬವರುಗಳು ಲಾಭ ಮಾಡುವ ಉದ್ದೇಶದಿಂದ ಅಕ್ರಮವಾಗಿ ನಕಲಿ ದಾಖಲೆ ಸೃಷ್ಠಿಸಿ ದಿನಾಂಕ:12.08.2021 ರಂದು ಕುಂದಾಪುರ ಸಬ್ ರಿಜಿಸ್ಟರ್ ಕಛೇರಿಯಲ್ಲಿ ಇದೇ ಜಾಗವನ್ನು ಆರೋಪಿ 1 ನಾಗರಾಜ ಮತ್ತು 2 ನೇ ಸುಜಾತ ರವರ ಹೆಸರಿನಲ್ಲಿ ಮಾಡಿಕೊಂಡು ಮೋಸ ಹಾಗೂ ವಂಚನೆ ಮಾಡಿರುತ್ತಾರೆ ಎಂದು ಪೊಲೀಸರಿಗೆ ದೂರು ನೀಡಿದ್ದಾರೆ.
ಶೇಷಗಿರಿ, ಅನಂತ ಮತ್ತು ಬಾಬುರಾಯ ರವರು ಮರಣ ಹೊಂದಿದ್ದು ಅವರ ಹೆಸರಿನಲ್ಲಿ ನಕಲಿ ದಾಖಲೆ ಸೃಷ್ಠಿಸಿದ್ದು ಈ ಬಗ್ಗೆ ಆರೋಪಿ 1 ನಾಗರಾಜ ಮತ್ತು 2 ನೇ ಸುಜಾತ ರವರಲ್ಲಿ ವಿಚಾರಿಸಿದಾಗ ಆರುಂಧತಿ ರವರಿಗೆ ಗದರಿಸಿ ಕೊಲೆ ಬೆದರಿಕೆ ಹಾಕಿರುತ್ತಾರೆ ಎಂದು ಪೊಲೀಸರಿಗೆ ದೂರು ನೀಡಿದ್ದಾರೆ.
ಈ ಬಗ್ಗೆ ಕೋಟ ಪೊಲೀಸ್ ಠಾಣೆಯಲ್ಲಿ ಕಲಂ: 318(2), 318(4), 336(2), 336(3), 340(2), 351(2) ಜೊತೆಗೆ 3(5) BNS ನಂತೆ ಪ್ರಕರಣ ದಾಖಲಾಗಿದೆ.