
ಉಡುಪಿ: ದಿನಾಂಕ: 29-03-2025(ಹಾಯ್ ಉಡುಪಿ ನ್ಯೂಸ್) ಶಾರದಾ ನಗರದ ಮನೆಯೊಂದರಲ್ಲಿ ನಡೆಯುತ್ತಿದ್ದ ಬಲವಂತದ ವೇಶ್ಯಾವಾಟಿಕೆ ಅಡ್ಡೆಗೆ ಉಡುಪಿ ನಗರ ಪೊಲೀಸರು ದಾಳಿ ನಡೆಸಿ ಇಬ್ಬರನ್ನು ಬಂಧಿಸಿ ಓರ್ವ ಸಂತ್ರಸ್ಥೆಯನ್ನು ರಕ್ಷಿಸಿದ್ದಾರೆ.
ಉಡುಪಿ ತಾಲೂಕು ಶಿವಳ್ಳಿ ಗ್ರಾಮದ ಶಾರದ ನಗರದ ಧರಿತ್ರಿ ಎಂಬ ಮನೆಯಲ್ಲಿ ಮಹಿಳೆಯರನ್ನು ಕರೆತಂದು ಬಲವಂತವಾಗಿ ಅಕ್ರಮ ವೇಶ್ಯಾವಾಟಿಕೆ ನಡೆಸುತ್ತಿರುವ ಬಗ್ಗೆ ಉಡುಪಿ ನಗರ ಠಾಣೆಯ ಪೊಲೀಸ್ ನಿರೀಕ್ಷಕರವರಿಗೆ ದಿನಾಂಕ :28-03-2025 ರಂದು ಖಚಿತ ವರ್ತಮಾನ ಬಂದಿದ್ದು ಆ ಕೂಡಲೇಪೊಲೀಸ್ ನಿರೀಕ್ಷಕರು ಸಿಬ್ಬಂದಿಯವರೊಂದಿಗೆ ಮಾಹಿತಿ ಬಂದ ಸ್ಥಳಕ್ಕೆ ದಾಳಿ ನಡೆಸಿದ್ದಾರೆ .
ದಾಳಿ ನಡೆಸಿದಾಗ ಮನೆಯಲ್ಲಿದ್ದ ಓರ್ವ ಸಂತ್ರಸ್ಥೆಯನ್ನು ರಕ್ಷಿಸಿದ್ದು, ಸತೀಶ್ ಎನ್ನುವ ವ್ಯಕ್ತಿ ಸಂತ್ರಸ್ಥೆಗೆ ಕೆಲಸ ಕೊಡುವುದಾಗಿ ಪುಸಲಾಯಿಸಿ ಮೂಡಬಿದ್ರೆಯಿಂದ ಉಡುಪಿಯ ಶಾರದ ನಗರದಲ್ಲಿರುವ ಶ್ರೀಲತಾ ಎಂಬವರ ಮನೆಗೆ ಕಳುಹಿಸಿ ಶ್ರೀಲತಾ ಇವರ ಮನೆಯಲ್ಲಿ ಶ್ರೀಲತಾ ಇವರು ವೇಶ್ಯಾವಾಟಿಕೆ ಚಟುವಟಿಕೆ ಮಾಡುವಂತೆ ಒತ್ತಾಯ ಮಾಡಿ ರೂಮಿನಲ್ಲಿ ಕೂತುಕೊಂಡು ಇರು ಎಂದು ಒತ್ತಾಯದಿಂದ ಇರಿಸಿದ್ದರು ಎಂದು ಸಂತ್ರಸ್ಥೆಯು ವಿಚಾರಣೆ ವೇಳೆ ಪೊಲೀಸರಿಗೆ ತಿಳಿಸಿದ್ದಾಳೆ.
ಆರೋಪಿಗಳು ಅಕ್ರಮಮಾಗಿ ವೇಶ್ಯವಾಟಿಕೆ ದಂಧೆ ನಡೆಸಿ ಅಕ್ರಮವಾಗಿ ಲಾಭ ಮಾಡುವ ಉದ್ದೇಶದಿಂದ ಸಂತ್ರಸ್ಥೆಯನ್ನು ಮನೆಯಲ್ಲಿ ಇರಿಸಿಕೊಂಡು ವೇಶ್ಯಾವಾಟಿಕೆ ದಂಧೆ ನಡೆಸುತ್ತಿದ್ದರೆನ್ನಲಾಗಿದೆ.
ಈ ಬಗ್ಗೆ ಮಹಿಳಾ ಪೊಲೀಸ್ ಠಾಣೆಯಲ್ಲಿ ಕಲಂ: 143(2) BNS ಮತ್ತು 3, 4, 5, 6 ಮತ್ತು 7 Immoral Traffic ( Prevention) Act ನಂತೆ ಪ್ರಕರಣ ದಾಖಲಾಗಿದೆ.