
ಬ್ರಹ್ಮಾವರ: ದಿನಾಂಕ:28-03-2025(ಹಾಯ್ ಉಡುಪಿ ನ್ಯೂಸ್) ಆರೂರು ನಿವಾಸಿ ಯೋರ್ವರಿಗೆ ಬ್ರಹ್ಮಾವರ ಅಗ್ರಿಕಲ್ಚರ್ ಕೋ ಆಪರೇಟಿವ್ ಸೊಸೈಟಿ ಯ ಬ್ಯಾಂಕ್ ಸಿಬ್ಬಂದಿಗಳು ಸಹಿ ನಕಲು ಮಾಡಿ ವಂಚನೆ ನಡೆಸಿದ್ದಾರೆ ಎಂದು ಪೊಲೀಸರಿಗೆ ದೂರು ನೀಡಿದ್ದಾರೆ.
ಕುಂಜಾಲು ,ಆರೂರು ಗ್ರಾಮದ ನಿವಾಸಿ ಕೊರಗ (67) ಎಂಬವರು ದಿನಾಂಕ 23.04.2024 ರಂದು ಬ್ರಹ್ಮಾವರ ತಾಲೂಕು, ಬ್ರಹ್ಮಾವರ ಅಗ್ರಿಕಲ್ಚರಲ್ ಕೋ ಆಪರೇಟಿವ್ ಸೊಸೈಟಿಯಲ್ಲಿ ರೂ. 5 ಲಕ್ಷ ಹಣವನ್ನು ನಿರಖು ಠೇವಣಿ ಇಟ್ಟಿದ್ದು, ಆದರೆ ದಿನಾಂಕ 04.05.2023 ರಂದು ಕೊರಗರವರು ಕೃಷಿ ಬೇಸಾಯಕ್ಕೆ ತನ್ನ ಸ್ಥಿರಾಸ್ತಿಯನ್ನು ಅಡಮಾನವಾಗಿ ಇಟ್ಟು ರೂ. 7 ಲಕ್ಷ ಹಣ ಪಡೆದು ಕೊಂಡಿದ್ದಾರೆ ಎಂದು ಪೊಲೀಸರಿಗೆ ನೀಡಿದ ದೂರಿನಲ್ಲಿ ತಿಳಿಸಿದ್ದಾರೆ.
ಈ ಸಾಲದ ಮರುಪಾವತಿಯ ಬಗ್ಗೆ 1 ನೇ ಆರೋಪಿ ಪ್ರಕಾಶ್, ವ್ಯವಸ್ಥಾಪಕರು ಇವರು ಕೊರಗರವರ ಮನೆಗೆ ಬಂದು ಸಾಲದ ಹಣಕ್ಕೆ ಕೊರಗ ರವರು ನಿರಖು ಠೇವಣಿಯಾಗಿ ಇಟ್ಟ ಮೊತ್ತವನ್ನು ಸರಿ ಹೊಂದಿಸುವುದಾಗಿ ನಂಬಿಸಿ ಅದರ ಮೂಲ ರಶೀದಿಯನ್ನು ಕೊಂಡು ಹೋಗಿದ್ದಾರೆ ಎಂದು ದೂರಿದ್ದಾರೆ.
ನಂತರ 2 ನೇ ಆರೋಪಿ ಬ್ರಹ್ಮಾವರ ಅಗ್ರಿಕಲ್ಚರಲ್ ಕೋ ಆಪರೇಟಿವ್ ಸೊಸೈಟಿಯ ಮುಖ್ಯ ಕಾರ್ಯನಿರ್ವಾಹಣಾಧಿಕಾರಿಯು ಸೊಸೈಟಿಯಿಂದ ಪಡೆದ ಸಾಲ ಪಾವತಿಸುವ ಬಗ್ಗೆ ಕೊರಗರವರಿಗೆ ನೋಟಿಸು ಕಳುಹಿಸಿದ್ದು ಈ ಬಗ್ಗೆ ಕೊರಗರವರು ಸೊಸೈಟಿಗೆ ಭೇಟಿ ನೀಡಿ ತನ್ನ ಸಾಲದ ಬಾಬ್ತು ಉಳಿತಾಯದ ಹಣ ಸರಿದೂಗಿಸುವ ಬಗ್ಗೆ ವ್ಯವಸ್ಥಾಪಕರು ತಿಳಿಸಿರುವ ಬಗ್ಗೆ ಹೇಳಿದ್ದಕ್ಕೆ ಅವರು ಕೊರಗರವರಿಗೆ ಈ ಹಿಂದೆ ಪಡೆದ 4 ಸಾಲಗಳಿಗೆ ನಿರಖು ಠೇವಣಿಯ ಹಣ ಸರಿದೂಗಿಸಲಾಗಿರುತ್ತದೆ ಎಂದು ಹೇಳಿರುತ್ತಾರೆ ಎಂದು ದೂರಿದ್ದಾರೆ.
ಆದರೆ ಕೊರಗರವರು ರೂ. 7 ಲಕ್ಷ ಬಿಟ್ಟು ಯಾವುದೇ ಸಾಲವನ್ನು ಸೊಸೈಟಿಯಲ್ಲಿ ಮಾಡಿರುವುದಿಲ್ಲ ಎಂದಿದ್ದಾರೆ .1ನೇ ಆರೋಪಿ ಸೊಸೈಟಿಯ ವ್ಯವಸ್ಥಾಪಕ ಪ್ರಕಾಶನು ಓದು ಬರಹ ಗೊತ್ತಿಲ್ಲದ ಕೊರಗರವರ ಸಹಿಯನ್ನು ನಕಲು ಮಾಡಿ, ಸೊಸೈಟಿಗೆ ಸಂಬಂಧಿಸಿದ ದಾಖಲೆಗಳನ್ನು ಸೃಷ್ಟಿಸಿಕೊಂಡು ದುರುದ್ದೇಶಕ್ಕೋಸ್ಕರ ಬಳಸಿಕೊಂಡು ಕೊರಗರವರಿಗೆ ಮೋಸ, ವಂಚನೆ ನಂಬಿಕೆ ದ್ರೋಹವೆಸಗಿದ್ದಾರೆ ಎಂದು ಪೊಲೀಸರಿಗೆ ದೂರು ನೀಡಿದ್ದಾರೆ.
ಈ ಬಗ್ಗೆ ಬ್ರಹ್ಮಾವರ ಪೊಲೀಸ್ ಠಾಣೆಯಲ್ಲಿ ಕಲಂ: 316(2)(4)(5), 318, 335(A), 336, 339, 340 & 3(5) BNS ನಂತೆ ಪ್ರಕರಣ ದಾಖಲಾಗಿದೆ.