
- ಉಡುಪಿ: ದಿನಾಂಕ :28-03-2025(ಹಾಯ್ ಉಡುಪಿ ನ್ಯೂಸ್) ಗಂಡ ಹಾಗೂ ಗಂಡನ ಮನೆಯವರು ಮಾನಸಿಕ ಹಾಗೂ ದೈಹಿಕ ಹಿಂಸೆ ನೀಡಿದ್ದಾರೆ ಎಂದು ಮಂಗಳೂರಿನ ನಿವಾಸಿ ಶ್ರೀಮತಿ ಆಲಿಯಾ ಪಟ್ಟು ಪವಿನ್ ಎಂಬವರು ಮಹಿಳಾ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
- ಮಂಗಳೂರು ಕ್ರಷ್ಣಾಪುರದ ಶ್ರೀಮತಿ ಆಲಿಯಾ ಪಟ್ಟು ಪವಿನ್ (24) ಎಂಬವರು ದಿನಾಂಕ 25/01/2021 ರಂದು ಫರ್ವೇಝ್ ಎಂಬಾತನನ್ನು ಕುಂದಾಪುರದ ಸಹನಾ ಕನ್ವೆನ್ಷನ್ ಹಾಲ್ ನಲ್ಲಿ ಮುಸ್ಲಿಂ ಸಂಪ್ರದಾಯದಂತೆ ಮದುವೆಯಾಗಿರುವುದಾಗಿ ಪೊಲೀಸರಿಗೆ ನೀಡಿದ ದೂರಿನಲ್ಲಿ ತಿಳಿಸಿದ್ದಾರೆ.
- ಮದುವೆಯಾದ ಬಳಿಕ ಗಂಡನ ಮನೆಯಾದ ಉಡುಪಿ ಜಿಲ್ಲೆಯ ಕುಂದಾಪುರ ತಾಲೂಕಿನ ಹಂಗಳೂರು ಎಂಬಲ್ಲಿ ಗಂಡನ ಜೊತೆಯಲ್ಲಿ ವಾಸ ಮಾಡಿಕೊಂಡಿರುತ್ತ, ಮದುವೆಯ ಮೂರು ದಿನಕ್ಕೆ ಶ್ರೀಮತಿ ಆಲಿಯಾ ಪಟ್ಟು ಪವಿನ್ ರವರಿಗೆ ಅವರ ಗಂಡ ವಿನಾ ಕಾರಣ ಕೈಯಿಂದ ಹೊಡೆದು ಹಲ್ಲೆ ನಡೆಸಿದ್ದಲ್ಲದೆ ,ಅಲ್ಲದೆ ಗಂಡನ ತಂದೆ ಷೇಕ್ ಅಬ್ದುಲ್ಲ ಮತ್ತು ತಾಯಿ ಜುಬೈದಾರವರು ಕೂಡಾ ಹೊಡೆದಿದ್ದು, ಶ್ರೀಮತಿ ಆಲಿಯಾ ಪಟ್ಟು ಪವಿನ್ ರವರ ಗಂಡ ಶ್ರೀಮತಿ ಆಲಿಯಾ ಪಟ್ಟು ಪವಿನ್ ರವರಿಗೆ, ಅವಾಚ್ಯವಾಗಿ ಬೈದು ಮಾನಸಿಕ ಹಿಂಸೆಯನ್ನು ಕೊಟ್ಟಿರುತ್ತಾನೆ ಎಂದು ದೂರಿನಲ್ಲಿ ತಿಳಿಸಿದ್ದಾರೆ.
- ಶ್ರೀಮತಿ ಆಲಿಯಾ ಪಟ್ಟು ಪವಿನ್ ರ ಗಂಡನ ಅಕ್ಕ ರಯಾನಳು ಕೂಡಾ ಅವ್ಯಾಚ್ಯ ಶಬ್ದಗಳಿಂದ ಬೈಯುತ್ತಿದ್ದು, ಗಂಡನಿಗೆ ಹೇಳಿಕೊಟ್ಟು ಹೊಡೆಸುತ್ತಿದ್ದಳು ಎಂದಿದ್ದಾರೆ .ಬಳಿಕ ಗಂಡ ಫರ್ವೇಜ್ ನು ಆಲಿಯಾರನ್ನು ಮತ್ತು ಮನೆಯವರನ್ನು ಸೌದಿಗೆ ಕರೆದುಕೊಂಡು ಹೋಗಿದ್ದು, ಅಲ್ಲಿಯೂ ಕೂಡಾ ಆಲಿಯಾ ರಿಗೆ ಮಾನಸಿಕ ದೈಹಿಕ ಹಿಂಸೆ ನೀಡಿರುತ್ತಾನೆ ಎಂದಿದ್ದಾರೆ. ಆಲಿಯಾರವರು ಗರ್ಭಿಣಿಯಾಗಿದ್ದ ಸಮಯದಲ್ಲಿ ಗಂಡನ ತಂದೆ ತಾಯಿ ಊಟ ಕೊಡದೆ ಅನ್ನವನ್ನು ಮುಖಕ್ಕೆ ಎಸೆಯುತ್ತಿದ್ದರು ಎಂದು ಆರೋಪಿಸಿದ್ದಾರೆ . ಆಲಿಯಾರವರು ಗಂಡ ಹಾಗೂ ಅವರ ಮನೆಯವರು ಸರಿ ಹೋಗಬಹುದೆಂದು ಭಾವಿಸಿ ಇದುವರೆಗೆ ಕಾದರೂ ಅವರು ಸರಿ ಹೋಗದೆ ಇರುವ ಕಾರಣದಿಂದ ನೊಂದು ಇದೀಗ ಪೋಲೀಸರಿಗೆ ದೂರು ನೀಡಿದ್ದಾರೆ ಎನ್ನಲಾಗಿದೆ.
- ಈ ಬಗ್ಗೆ ಉಡುಪಿ ಮಹಿಳಾ ಪೊಲೀಸ್ ಠಾಣೆಯಲ್ಲಿ ಕಲಂ: 85, 115(2), 352 BNS ರಂತೆ ಪ್ರಕರಣ ದಾಖಲಾಗಿದೆ.