
ಉಡುಪಿ : ದಿನಾಂಕ:26-03-2025(ಹಾಯ್ ಉಡುಪಿ ನ್ಯೂಸ್)
ಕರ್ನಾಟಕ ರಕ್ಷಣಾ ವೇದಿಕೆಯ ರಾಜ್ಯಾಧ್ಯಕ್ಷರಾದ ಟಿ ಎ ನಾರಾಯಣ ಗೌಡರವರ ಆದೇಶದಂತೆ ಮಳೆಗಾಲಕ್ಕೆ ಪೂರ್ವ ಸಿದ್ಧತೆ ಕೈಗೊಳ್ಳುವ ಬಗ್ಗೆ ಉಡುಪಿ ಕರವೇ ಜಿಲ್ಲಾಧ್ಯಕ್ಷ ಸುಜಯ್ ಪೂಜಾರಿ ಹಾಗೂ ಜಿಲ್ಲಾ ಪದಾಧಿಕಾರಿಗಳು ಮತ್ತು ಸದಸ್ಯರುಗಳು ಸೇರಿ ಕರ್ನಾಟಕ ರಕ್ಷಣಾ ವೇದಿಕೆ ವತಿಯಿಂದ ಉಡುಪಿ ಜಿಲ್ಲಾಧಿಕಾರಿಯವರಾದ ಡಾಕ್ಟರ್.ಕೆ ವಿದ್ಯಾ ಕುಮಾರಿ ಅವರಿಗೆ ಮನವಿ ಸಲ್ಲಿಸಿದರು.
ಪ್ರಸ್ತುತ ಮಳೆಗಾಲ ಸಮೀಪಿಸುತ್ತಿರುವ ಈ ಸಂದರ್ಭದಲ್ಲಿ ಉಡುಪಿ ಜಿಲ್ಲೆಯಲ್ಲಿ ಅಪೂರ್ಣಗೊಂಡಿರುವ ಕಾಮಗಾರಿಗಳನ್ನು ತ್ವರಿತವಾಗಿ ಪೂರ್ಣಗೊಳಿಸಿ ಮಳೆಗಾಲಕ್ಕೆ ಸಜ್ಜುಗೊಳಿಸಬೇಕಾಗಿರುತ್ತದೆ. ಚರಂಡಿ ಹೂಳು ಎತ್ತುವುದು, ಸೇತುವೆ ಸರಿಪಡಿಸುವುದು, ರಸ್ತೆಯ ಮೇಲೆ ಅಪಾಯಕಾರಿಯಾಗಿ ಬೆಳೆದು ನಿಂತ ಮರದ ಗೆಲ್ಲುಗಳನ್ನು ಕಡಿಸಲು ಕ್ರಮ ಕೈಗೊಳ್ಳಬೇಕಾಗಿರುತ್ತದೆ. ರಾಷ್ಟ್ರೀಯ ಹೆದ್ದಾರಿಯಲ್ಲಿ ನಿಧಾನವಾಗಿ ಸಾಗುತ್ತಿರುವ ರಸ್ತೆ ಕಾಮಗಾರಿಗೆ ಚುರುಕು ನೀಡಿ ಮಳೆಗಾಲಕ್ಕೆ ಸರಿಯಾಗಿ ಸನ್ನದ್ಧವಾಗುವಂತೆ ಸಂಬಂಧಪಟ್ಟ ಅಧಿಕಾರಿಗಳಿಗೆ ಖಡಕ್ ಸೂಚನೆ ಸೂಕ್ತ ಆದೇಶ ನೀಡಿದಲ್ಲಿ ಸಾರ್ವಜನಿಕರಿಗೆ ತುಂಬಾ ಅನುಕೂಲವಾಗುತ್ತದೆ. ಮಳೆಗಾಲದ ಸಂದರ್ಭದಲ್ಲಿ ಬಿರುಗಾಳಿ ನೆರೆ ಹಾವಳಿ ತಡೆಗಟ್ಟುವುದಕ್ಕೆ ಸೂಕ್ತ ರಕ್ಷಣಾ ವ್ಯವಸ್ಥೆ ಕೈಗೊಳ್ಳಲು ಕ್ರಮ ತೆಗೆದುಕೊಳ್ಳಬೇಕಾಗಿರುತ್ತದೆ ಎಂದು ಮನವಿಯಲ್ಲಿ ತಿಳಿಸಲಾಗಿದೆ.
ಈ ಸಂದರ್ಭದಲ್ಲಿ ಮಾತನಾಡಿದ ಜಿಲ್ಲಾಧಿಕಾರಿ , ಡಾ. ಕೆ.ವಿದ್ಯಾಕುಮಾರಿ ಅವರು ಮಳೆಗಾಲಕ್ಕೆ ಪೂರ್ವ ಸಿದ್ಧತೆ ಕೈಗೊಳ್ಳುವ ಬಗ್ಗೆ ಕರವೇ ತಂಡಕ್ಕೆ ಭರವಸೆಯನ್ನು ನೀಡಿದರು.
ಈ ಸಂದರ್ಭದಲ್ಲಿ ಕರವೇ ಉಡುಪಿ ಜಿಲ್ಲಾಧ್ಯಕ್ಷರಾದ ಸುಜಯ್ ಪೂಜಾರಿ ಉಪಾಧ್ಯಕ್ಷರು ಗೋಪಾಲ್ ದೊರೆ. ಮಹಿಳಾ ಜಿಲ್ಲಾಧ್ಯಕ್ಷರು ಗೀತಾ ಪಾಂಗಾಳ. ಕಾರ್ಯದರ್ಶಿ ಸಿದ್ದಣ್ಣ ಪೂಜಾರಿ ,ಕಾರ್ಯದರ್ಶಿ ವಿಜಯ ಪೂಜಾರಿ. ಸಂಘಟನಾ ಕಾರ್ಯದರ್ಶಿ ಅಲ್ಫೋನ್ಸ್. ಜಿಲ್ಲಾ ಸಂಚಾಲಕರು ರತ್ನಾಕರ್ ಪೂಜಾರಿ. ಜಿಲ್ಲಾ ಸಾಂಸ್ಕೃತಿಕ ಕಾರ್ಯದರ್ಶಿ ಕೃಷ್ಣಕುಮಾರ್.ಮಹಿಳಾ ಉಪಾಧ್ಯಕ್ಷರು ದೇವಕಿ ಬಾರ್ಕೂರು. ಜಿಲ್ಲಾ ಜಾಲತಾಣ ಸಂಚಾಲಕಿ ರಶ್ಮಿ. ಜಿಲ್ಲಾ ಮಹಿಳಾ ಕಾರ್ಯದರ್ಶಿ ಚಂದ್ರಕಲಾ. ಜಿಲ್ಲಾ ಸದಸ್ಯರು ಮಲ್ಲು. ರೇಣುಕಾ. ಸಾವಿತ್ರಿ. ದೇವರಾಜ್. ಮೈಬೂಬ್. ವಿಶ್ವನಾಥ್. ಶಿವರಾಜ್.. ಹುಲುಗಪ್ಪರವರು ಉಪಸ್ಥಿತರಿದ್ದರು .