
- ಮಲ್ಪೆ: ದಿನಾಂಕ: 25-03-2025(ಹಾಯ್ ಉಡುಪಿ ನ್ಯೂಸ್) ಬಂದರಿನಲ್ಲಿ ನಡೆದಿದ್ದ ಪ್ರತಿಭಟನಾ ಸಭೆಯಲ್ಲಿ ಪ್ರಚೋದನಕಾರಿ ಭಾಷಣ ಮಾಡಿದ ಆರೋಪದ ಮೇರೆಗೆ ಮಂಜು ಕೊಳ ಮೇಲೆ ಮಲ್ಪೆ ಪೊಲೀಸರು ಸುಮೊಟೋ ಪ್ರಕರಣ ದಾಖಲಿಸಿಕೊಂಡಿದ್ದಾರೆ.
- ದಿನಾಂಕ 18.03.2025 ರಂದು ಮಲ್ಪೆ ಬಂದರಿನಲ್ಲಿ ಮಹಿಳೆಯನ್ನು ಮರಕ್ಕೆ ಕಟ್ಟಿ ಹಾಕಿ ಹಲ್ಲೆ ಮಾಡಿದ ಬಗ್ಗೆ ಮಲ್ಪೆ ಠಾಣೆಯಲ್ಲಿ ಪ್ರಕರಣ ದಾಖಲಾಗಿ 5 ಜನ ಆರೋಪಿಗಳನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರು ಪಡಿಸಲಾಗಿತ್ತು. ಮುಂದಿನ ದಿನಗಳಲ್ಲಿ ಈ ಪ್ರಕರಣವನ್ನು ಶಾಂತಿ ಮತ್ತು ಸೌಹಾರ್ಧತೆಯಿಂದ ಹೇಗೆ ನಿಭಾಯಿಸಬೇಕು, ಹಾಗೂ ಎಲ್ಲಾ ಸಮಾಜಗಳನ್ನು ಒಳಗೊಂಡು ಮೀನುಗಾರರಿಗೆ ಬಂದರಿನಲ್ಲಿರುವ ಸಮಸ್ಯೆಗಳ ಬಗ್ಗೆ ಚರ್ಚಿಸುವ ಸಲುವಾಗಿ ಮಲ್ಪೆ ಮೀನುಗಾರರ ಸಂಘ (ರಿ) ಹಾಗೂ ಇನ್ನಿತರ ಪ್ರಮುಖ ಮೀನುಗಾರಿಕಾ ಸಂಘಗಳು ಪ್ರತಿಭಟನಾ ಸಭೆಯನ್ನು ದಿನಾಂಕ 22.03.2025 ರಂದು ಮಲ್ಪೆಯ ಬಂದರು ಪ್ರದೇಶದಲ್ಲಿ ಹಮ್ಮಿಕೊಂಡಿದ್ದರು .
- ಈ ಸಭೆಯಲ್ಲಿ ಸಾರ್ವಜನಿಕರನ್ನು ಉದ್ದೇಶಿಸಿ ಮಾತನಾಡಿದ ಮಂಜು ಕೊಳ ಎಂಬುವವನು ತುಳು ಭಾಷೆಯಲ್ಲಿ ಮಾತನಾಡುತ್ತಾ ಗಂಗೊಳ್ಳಿಯ ಒಂದು ಘಟನೆ ನೆನಪಿಟ್ಟುಕೊಳ್ಳಿ ಇದೇ SP ಗೆ ಹೇಳುತ್ತೇನೆ. ಗಂಗೊಳ್ಳಿಯ ಒಂದು ಘಟನೆ ನೆನಪಿಟ್ಟುಕೊಳ್ಳಿ ಒಬ್ಬ ಮೀನುಗಾರನನ್ನು ಒಳಗೆ ಹಾಕಿದರು ಅದಕ್ಕೆ 10,000 ಜನ ಮೀನುಗಾರರು ಒಟ್ಟಾದಾಗ ಇದೇ SP ಹೋಗಿ ಅವರ ಕಾಲು ಹಿಡಿದು ವಾಪಾಸು ಕರೆದುಕೊಂಡು ಬಂದರು. ಆ ಘಟನೆ ಮತ್ತೆ ಆಗಲು ಬಿಡಬೇಡಿ ನೆನಪಿಟ್ಟುಕೊಳ್ಳಿ 25 ತಾರೀಖಿನೊಳಗೆ ರಘುಪತಿ ಭಟ್ ರವರು ಹೇಳಿದರು ಆ ಸೆಕ್ಷನ್ ನ ಚೇಂಜ್ ಮಾಡದೆ ಇದ್ದರೆ ಗಂಗೊಳ್ಳಿಯ ಕಥೆನೆ ಇಲ್ಲಿ ಆಗುತ್ತೆ. ಡೌಟೆ ಇಲ್ಲ. ನಾವು ಕರಾವಳಿ ಭಾಗದ ಜನ ಮುಂದೆ ನೋಡಿ ಗಂಗೊಳ್ಳಿಯಿಂದ ಮಂಗಳೂರಿನ ವರೆಗೆ ನಾವು ಜನ ಒಟ್ಟು ಮಾಡಿ ಹೈವೇಲಿ ನಿಲ್ಸಿಲ್ಲ ಅಂದ್ರೆ ನಾವು ಮೀನುಗಾರರೆ ಅಲ್ಲ . ದಯಮಾಡಿ ಒಳಗೆ ಹಾಕಿದ 4 ಹೆಂಗಸರನ್ನು ಬಿಡಬೇಕು. ವೇದಿಕೆ ಮೇಲೆ ಭಾಷಣ ಮಾಡಿದ ಮಂಜು ಕೊಳನು ಭಾಷಣ ಮಾಡುವ ನೆಪದಲ್ಲಿ ರಾಷ್ಟ್ರೀಯ ಹೆದ್ದಾರಿ ತಡೆಗಟ್ಟುವ ಮಾತನಾಡುತ್ತಾ ಸಾರ್ವಜನಿಕರಿಂದ ಇಂಥಹ ಅಪರಾಧ ಮಾಡಿಸಲು ದುಷ್ಪ್ರೇರಣೆ ಮಾಡುತ್ತಾ,ದ್ವೇಷ ಭಾವನೆಯಿಂದ ಇಷ್ಟಪೂರ್ವಕವಾಗಿ ಭಾಷಣ ಮಾಡಿ ದೊಂಬಿಯ ಅಪರಾಧವು ನಡೆಯುವ ಸಂಭವ ಇದೆ ಎಂದು ಗೊತ್ತಿದ್ದೂ ಅಲ್ಲಿದ್ದವರನ್ನು ಪ್ರಚೋದಿಸುತ್ತಾ ಉದ್ರೇಕ ಭಾಷಣ ಮಾಡಿರುತ್ತಾನೆ ಎಂದು ದೂರು ದಾಖಲಿಸಿದ್ದಾರೆ.
- ಈ ಬಗ್ಗೆ ಮಲ್ಪೆ ಪೊಲೀಸ್ ಠಾಣೆಯಲ್ಲಿ ಅಪರಾಧ ಕ್ರಮಾಂಕ: 38/2025 ಕಲಂ:57 ಜೊತೆಗೆ 191(1),192 BNS ನಂತೆ ಪ್ರಕರಣ ದಾಖಲಾಗಿದೆ.