
ಕಾಪು:ದಿನಾಂಕ: 23-03-2025 (ಹಾಯ್ ಉಡುಪಿ ನ್ಯೂಸ್) ಏಣಗುಡ್ಡೆ ಗ್ರಾಮದ ಹಾಡಿಯೊಂದರಲ್ಲಿ ಇಸ್ಪೀಟ್ ಜುಗಾರಿ ಆಡುತ್ತಿದ್ದ ಮೂವರನ್ನು ಕಾಪು ಪೊಲೀಸ್ ಠಾಣೆಯ ಪಿಎಸ್ಐ ಯವರಾದ ತೇಜಸ್ವಿ ಟಿ ಐ ರವರು ಬಂಧಿಸಿದ್ದಾರೆ.
ಕಾಪು ಪೊಲೀಸ್ ಠಾಣಾ ಪಿ.ಎಸ್.ಐ ತೇಜಸ್ವಿ ಟಿ ಐ ರವರು ದಿನಾಂಕ :23-03-2025 ರಂದು ಠಾಣೆಯಲ್ಲಿರುವಾಗ ಮಾಹಿತಿ ದಾರರೊಬ್ಬರು ಕರೆ ಮಾಡಿ ಏಣಗುಡ್ಡೆ ಗ್ರಾಮದ ಅಗ್ರಹಾರ ಚರ್ಚ್ ಎದುರು ಹಾಡಿಯಲ್ಲಿ ಕೆಲವು ಜನ ಸೇರಿಕೊಂಡು ಇಸ್ಪೀಟು ಜುಗಾರಿ ಆಟ ಆಡುತ್ತಿರುವುದಾಗಿ ಬಂದ ಮಾಹಿತಿಯಂತೆ ಪಿ.ಎಸ್.ಐ ರವರು ಕೂಡಲೇ ಠಾಣೆಯಿಂದ ಹೊರಟು ಮಾಹಿತಿ ಬಂದ ಸ್ಥಳಕ್ಕೆ ದಾಳಿ ನಡೆಸಿ ಅಲ್ಲಿ ಇಸ್ಪೀಟ್ ಜುಗಾರಿ ಆಡುತ್ತಿದ್ದ ಮೂರು ಜನರನ್ನು ಬಂಧಿಸಿ ವಶಕ್ಕೆ ಪಡೆದಿದ್ದು ಆರೋಪಿತರು ಗಳಾದ 1) ಫೈರೋಜ್, (36), 2) ಶಂಕರ,(43), 3) ಈರಯ್ಯ ,(49). ಎಂಬವರನ್ನು ಬಂಧಿಸಿದ್ದಾರೆ .
ಈ ಬಗ್ಗೆ ಕಾಪು ಪೊಲೀಸ್ ಠಾಣೆಯಲ್ಲಿ. ಕಲಂ: 112 BNS ಮತ್ತು 87 KP Act.ರಂತೆ ಪ್ರಕರಣ ದಾಖಲಾಗಿದೆ.