
ಮಲ್ಪೆ: ದಿನಾಂಕ:23-03-2025(ಹಾಯ್ ಉಡುಪಿ ನ್ಯೂಸ್) ಮೀನು ವ್ಯಾಪಾರದಲ್ಲಿ ಕೆಲಸ ಮಾಡಿದ್ದ ಕೆಲಸಗಾರನೋರ್ವ ಬಾಕಿ ಸಂಬಳ ಕೊಡಲಿಲ್ಲ ವೆಂದು ಹಲ್ಲೆ ನಡೆಸಿದ್ದಾನೆ ಎಂದು ಸುರೇಶ್ ಕಲ್ಮಾಡಿ ಎಂಬವರು ಪೊಲೀಸರಿಗೆ ದೂರು ನೀಡಿದ್ದಾರೆ.
ಕೊಡವೂರು ಗ್ರಾಮದ ನಿವಾಸಿ ಸುರೇಶ್ ಕಲ್ಮಾಡಿ ಎಂಬವರು ಮಲ್ಪೆಯಲ್ಲಿ ಮೀನು ವ್ಯಾಪಾರ ಕೆಲಸ ಮಾಡಿಕೊಂಡಿದ್ದಾರೆ ಎಂದು ಪೊಲೀಸರಿಗೆ ನೀಡಿದ ದೂರಿನಲ್ಲಿ ತಿಳಿಸಿದ್ದಾರೆ. ಸುಮಾರು 4 ತಿಂಗಳ ಹಿಂದೆ ವ್ಯವಹಾರದಲ್ಲಿ ಕೊಪ್ಪಲತೋಟ ನಿವಾಸಿ ಸುರೇಶ ಎಂಬಾತನು 10 ದಿನಗಳ ಕಾಲ ಕೆಲಸ ಮಾಡಿದ್ದು, ಆ ಕೆಲಸದಲ್ಲಿ 4 ದಿನಗಳ ಸಂಬಳದ ಬಾಬ್ತು ರೂ. 2000 ಹಣ ಕೊಡಲು ಬಾಕಿ ಇದ್ದು ದಿನಾಂಕ 22/03/2025 ರಂದು ಸಂಜೆ ಸುರೇಶ್ ಕಲ್ಮಾಡಿ ಅವರು ಮಲ್ಪೆ ಏಳೂರು ಸಭಾಭವನದ ಬಳಿ ಇರುವ ರಾಯಲ್ ಬಾರ್ ಬಳಿ ಇರುವಾಗ ಸುರೇಶನು, ಸುರೇಶ್ ಕಲ್ಮಾಡಿ ರವರ ಬಳಿಗೆ ಬಂದು, ತನಗೆ ಕೊಡಬೇಕಾದ ಹಣವನ್ನು ಯಾಕೆ ಕೊಡುವುದಿಲ್ಲ ಎಂದು ಅವಾಚ್ಯ ಶಬ್ದಗಳಿಂದ ಬೈದು, ಕೈಯಿಂದ ಸುರೇಶ್ ಕಲ್ಮಾಡಿ ರವರ ಮುಖಕ್ಕೆ ಮತ್ತು ಬೆನ್ನಿಗೆ ಹಲ್ಲೆ ಮಾಡಿರುತ್ತಾನೆ ಹಾಗೂ ಸುರೇಶ್ ಕಲ್ಮಾಡಿರವರು ಮನೆ ಕಡೆಗೆ ಹೋಗಲು ಮುಂದಾದಾಗ ಸುರೇಶನು ಅಡ್ಡಗಟ್ಟಿ, ಪುನಃ ಕೈಯಿಂದ ಹಲ್ಲೆ ಮಾಡಿರುತ್ತಾನೆ ಎಂದು ದೂರಿದ್ದಾರೆ.
ಅಲ್ಲದೆ,ಹಣ ಕೊಡುವವರೆಗೆ ನಿನ್ನ ಸ್ಕೂಟರ್ ಅನ್ನು ತಾನು ಇಟ್ಟುಕೊಳ್ಳುತ್ತೇನೆ ಎಂದು ಸ್ಕೂಟರ್ ಅನ್ನು ಸುರೇಶನು ತೆಗೆದುಕೊಂಡು ಹೋಗಿರುತ್ತಾನೆ ಎಂದಿದ್ದಾರೆ. ಸುರೇಶ್ ಕಲ್ಮಾಡಿ ರವ ರು ತನ್ನ ಸ್ಕೂಟರ್ ನ್ನು ತರಲು ಹೆಂಡತಿ ಮಾಲಿಬಾಯಿ ಜೊತೆಗೆ ಆರೋಪಿ ಸುರೇಶನ ಮನೆ ಬಳಿಗೆ ಸಂಜೆ ಹೋದಾಗ ಸುರೇಶ, ಸುರೇಶನ ತಂದೆ ಶೇಖರ, ತಾಯಿ ಸರೋಜ ಬಾಯಿ ಹಾಗೂ ಇನ್ನೊಬ್ಬ ವ್ಯಕ್ತಿ ಒಟ್ಟು ಸೇರಿ ಏಕಾಏಕಿಯಾಗಿ ಕಣ್ಣಿಗೆ, ಮೂಗಿಗೆ, ಬೆನ್ನಿಗೆ ಹಾಗೂ ಕಾಲಿಗೆ ಕೈಯಿಂದ ಹಲ್ಲೆ ಮಾಡಿದ್ದಲ್ಲದೆ ಸುರೇಶ್ ಕಲ್ಮಾಡಿ ರವರ ಹೆಂಡತಿ ಮಾಲಿಬಾಯಿಯ ಮುಖಕ್ಕೆ ಹಾಗೂ ಬೆನ್ನಿಗೆ ಕೈಯಿಂದ ಹಲ್ಲೆ ಮಾಡಿದ ಪರಿಣಾಮ ಮಾಲಿಬಾಯಿಯವರ ಹಲ್ಲಿನಿಂದ ರಕ್ತ ಬಂದಿರುತ್ತದೆ ಎಂದೂ ತನ್ನ ಹಣವನ್ನು ವಾಪಾಸು ಕೊಡದಿದ್ದರೆ ಜೀವ ಸಹಿತ ಬಿಡುವುದಿಲ್ಲ ಎಂದು ಸುರೇಶನು ಜೀವ ಬೆದರಿಕೆ ಹಾಕಿದ್ದಾನೆ ಎಂದು ದೂರು ನೀಡಿದ್ದಾರೆ.
ಈ ಬಗ್ಗೆ ಸುರೇಶ ರವರು ತನಗೆ ಸುರೇಶ್ ಕಲ್ಮಾಡಿ ಹಲ್ಲೆ ನಡೆಸಿದ್ದಾರೆ ಎಂದು ಪ್ರತಿ ದೂರು ನೀಡಿದ್ದಾರೆ.
ಈ ಬಗ್ಗೆ ಮಲ್ಪೆ ಪೊಲೀಸ್ ಠಾಣೆಯಲ್ಲಿ ಕಲಂ:352,115(2),126(2),351(2) RW 3(5) BNS ರಂತೆ ಪ್ರಕರಣ ದಾಖಲಾಗಿದೆ.