
ಬೈಂದೂರು: ದಿನಾಂಕ: 21-03-2025(ಹಾಯ್ ಉಡುಪಿ ನ್ಯೂಸ್) ಬೈಂದೂರು ತಾಲೂಕು ಕಂಬದಕೋಣೆಯ ಸರಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ನಡೆಯುವ ರಾಜ್ಯ ಮಟ್ಟದ ಎಸ್. ಎಸ್. ಎಲ್.ಸಿ. ಪಬ್ಲಿಕ್ ಪರೀಕ್ಷೆಗಾಗಿ ಪರೀಕ್ಷೆ ನಡೆಯುವ ಶಾಲಾ ಆವರಣ ಹಾಗೂ ಶಾಲಾ ಕೊಠಡಿಗಳಿಗೆ ಸಿ.ಸಿ. ಕೆಮರಾ ಅಳವಡಿಸಿ ಪರೀಕ್ಷೆಗೆ ವ್ಯವಸ್ಥೆಗೊಳಿಸಿದ್ದು ಯಾರೋ ಕಿಡಿಗೇಡಿಗಳು ದಿನಾಂಕ 20.03.2025 ರ ರಾತ್ರಿ ಸಮಯದಲ್ಲಿ ಪರೀಕ್ಷೆಗೆ ವ್ಯವಸ್ಥೆಗೊಳಿಸಿದ ಶಾಲಾಕೊಠಡಿ ಹಾಗೂ ಸಬಾಂಗಣದ ಒಳಗೆ ಇರುವ 2 ಸಿ.ಸಿ. ಕ್ಯಾಮರಾ ಮತ್ತು ತರಗತಿ ಕೊಣೆಯೊಳಗಿನ 1 ಸಿ.ಸಿ. ಕ್ಯಾಮರ ಮತ್ತು ಶಿಕ್ಷಕರ ಕೋಣೆಯ ಎದುರು ಬಾಗದಲ್ಲಿ ಅಳವಡಿಸಿದ ಕ್ಯಾಮರ ಮತ್ತು ಮೈದಾನಕ್ಕೆ ತಾಗಿ ಇರುವ ತರಗತಿ ಕೋಣೆಯಲ್ಲಿ ಅಳವಡಿಸಿದ 1 ಕ್ಯಾಮರಾ ಒಟ್ಟು 5 ಕ್ಯಾಮರಾಗಳಿಗೆ ಹಾನಿ ಮಾಡಿದ್ದಲ್ಲದೆ ಕ್ಯಾಮರಾಗಳಿಗೆ ಅಳವಡಿಸಿದ ವಿದ್ಯುತ್ ಸಂಪರ್ಕವನ್ನು ಕಡಿತಗೊಳಿಸಿ ಸುಮಾರು 12.000/- ನಷ್ಟವನ್ನುಂಟುಮಾಡಿದ್ದಾರೆ ಎಂದು ಬೈಂದೂರು ಸರಕಾರಿ ಪದವಿ ಪೂರ್ವ ಕಾಲೇಜಿನ ಉಪಪ್ರಾಂಶುಪಾಲರಾದ ಬಿ.ಸಿ.ಶೆಣೈ ಅವರು ಪೊಲೀಸರಿಗೆ ದೂರು ನೀಡಿದ್ದಾರೆ.
ಅವರು ನೀಡಿದ ದೂರಿನಂತೆ ಬೈಂದೂರು ಪೊಲೀಸ್ ಠಾಣೆಯಲ್ಲಿ ಕಲಂ: 329 (3), 329 (4), 324 (3) BNS ನಂತೆ ಪ್ರಕರಣ ದಾಖಲಾಗಿದೆ.