Spread the love

ಉಡುಪಿ:  ದಿನಾಂಕ:21-03-2025(ಹಾಯ್ ಉಡುಪಿ ನ್ಯೂಸ್) ಉತ್ತರ ಕರ್ನಾಟಕದ ಕೂಲಿ ಕಾರ್ಮಿಕನೋರ್ವನಿಗೆ ಮೊಬೈಲ್ ವಿಚಾರದಲ್ಲಿ ಅಪರಿಚಿತ ವ್ಯಕ್ತಿಯೋರ್ವ ಗಲಾಟೆ ಮಾಡಿ ಚೂರಿಯಿಂದ ಮಾರಣಾಂತಿಕ ಹಲ್ಲೆ ನಡೆಸಿದ್ದಾನೆ ಎಂದು ಉಡುಪಿ ನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ

ಬಾಗಲಕೋಟೆ ಜಿಲ್ಲೆಯ ನಿವಾಸಿ ಮಲಕಾರಿಸಿದ್ಧ (26) ಹಾಗೂ ಅವರ ಅಳಿಯ ಗೌಡಕ್ಕ ಬಿರಾದರ ಎಂಬವರು ಕಳೆದ 15 ದಿನಗಳ ಹಿಂದೆ ಉಡುಪಿಗೆ ಕೆಲಸಕ್ಕೆ ಬಂದು ಸ್ವಾಮಿ ಎಂಬುವವರ ಜೊತೆ ಗಾರೆ ಕೆಲಸಕ್ಕೆ ಹೋಗುತ್ತಿದ್ದಾರೆ ಎಂದು ಪೊಲೀಸರಿಗೆ ನೀಡಿದ ದೂರಿನಲ್ಲಿ ತಿಳಿಸಿದ್ದಾರೆ.

ಕೆಲಸ ಮುಗಿದ ನಂತರ ದಿನಾ ರಾತ್ರಿ ಉಡುಪಿ ತಾಲ್ಲೂಕು ಶಿವಳ್ಳಿ ಗ್ರಾಮದ ಶ್ರೀಕೃಷ್ಣ ಮಠ ಪಾರ್ಕಿಂಗ್‌ ಹತ್ತಿರ ಇರುವ ಗೇಟ್‌ ಎದುರು ಮಲಕಾರಿಸಿದ್ಧ ಹಾಗೂ ಅವರ ಅಳಿಯ ಗೌಡಕ್ಕ ಬಿರಾದರ ರವರು ಮಲಗುತ್ತಿದ್ದು, ಎಂದಿನಂತೆ ದಿನಾಂಕ 20/03/2025 ರಂದು ಗಾರೆ ಕೆಲಸವನ್ನು ಮುಗಿಸಿ ರಾತ್ರಿ 10 ಗಂಟೆಗೆ ದಿನಾಲೂ ಬಂದು ಮಲಗುತ್ತಿದ್ದ ಸ್ಥಳದಲ್ಲಿ ಮಲಗಿದ್ದು, ಮಲಕಾರಿ ಸಿದ್ಧರವರು ಮೊಬೈಲ್‌ ನ್ನು ನೋಡುತ್ತಿರುವಾಗ ನಾರಾಯಣ ಎಂಬಾತನು ಬಂದು ಮೊಬೈಲ್‌ ನ್ನು ಕೊಡು ಎಂದು ಕೇಳಿದಾಗ  ಮಲಕಾರಿ ಸಿದ್ಧರವರು ಇದು ನನ್ನ ಮೊಬೈಲ್‌ ನಾನೇಕೆ ನಿನಗೆ ಕೊಡಬೇಕು ಎಂದು ಹೇಳಿದ್ದು, ನಂತರ ಮಲಕಾರಿ ಸಿದ್ಧರವರು ಹಾಗೂ ನಾರಾಯಣ ನ ನಡುವೆ ಮೊಬೈಲ್‌ ವಿಚಾರದಲ್ಲಿ ಮಾತಿಗೆ ಮಾತು ಬೆಳೆದಿದ್ದು, ಅದೇ ಸಮಯದಲ್ಲಿ ನಾರಾಯಣನು ತನ್ನ ಪ್ಯಾಂಟಿನ ಕಿಸೆಯಿಂದ ಚೂರಿಯನ್ನು ತೆಗೆದು ಮಲಕಾರಿ ಸಿದ್ಧರವರ ಎದೆಯ ಎಡಭಾಗಕ್ಕೆ ಇರಿದಿದ್ದು, ನಂತರ ಆತನ ಚೂರಿಯ ಇರಿತದಿಂದ ತಪ್ಪಿಸಿಕೊಂಡು ಹೆದರಿ ಓಡಿ ಹೋಗುತ್ತಿದ್ದಾಗ ಆರೋಪಿ ನಾರಾಯಣನು ಅಟ್ಟಿಸಿಕೊಂಡು ಬಂದು ಮಲಕಾರಿ ಸಿದ್ಧರವರನ್ನು ಕೃಷ್ಣ ಮಠದ ಪಾರ್ಕಿಂಗ್‌ ಏರಿಯಾದಲ್ಲಿ ಅಡ್ಡಗಟ್ಟಿ ಕೊಲ್ಲುವ ಉದ್ದೇಶದಿಂದ ಪುನಃ ಎದೆಯ ಮಧ್ಯ ಭಾಗಕ್ಕೆ ಚೂರಿಯಿಂದ ಇರಿದಿರುತ್ತಾನೆ ಎನ್ನಲಾಗಿದೆ .

ಅದೇ ಸಮಯದಲ್ಲಿ ಮಲಕಾರಿಸಿದ್ಧ ರವರನ್ನು ಆರೋಪಿಯಿಂದ ರಕ್ಷಿಸಲು ಬಂದಿದ್ದ ಗೌತಮ್‌ ಎಂಬಾತನಿಗೂ ಕೂಡ ತಲೆಯ ಹಿಂಬದಿ ಹಾಗೂ ಎಡಕೆನ್ನೆಯ ಬಳಿ ಚೂರಿಯಿಂದ ನಾರಾಯಣನು ಇರಿದಿರುವುದಾಗಿ ಆಸ್ಪತ್ರೆಗೆ ದಾಖಲಾಗಿರುವ ಮಲಕಾರಿಸಿದ್ಧ ಪೊಲೀಸರಿಗೆ ದೂರು ನೀಡಿದ್ದಾರೆ .

ಅವರ ದೂರಿನಂತೆ ಉಡುಪಿ ನಗರ ಪೊಲೀಸ್‌ ಠಾಣೆಯಲ್ಲಿ  ಕಲಂ: 126, 352, 351(2), 109 BNS ರಂತೆ ಪ್ರಕರಣ ದಾಖಲಾಗಿದೆ.

error: No Copying!