Spread the love

ಪಡುಬಿದ್ರಿ: ದಿನಾಂಕ: 20/03/2025 (ಹಾಯ್ ಉಡುಪಿ ನ್ಯೂಸ್) ಹೆಜಮಾಡಿ ಕೋಡಿ ಬೀಚ್ ರಸ್ತೆಯ ಬಳಿ ಅನುಮಾನಾಸ್ಪದವಾಗಿ ವರ್ತಿಸುತ್ತಿದ್ದ ಯುವಕರನ್ನು ಪಡುಬಿದ್ರಿ ಪೊಲೀಸ್‌ ಠಾಣೆಯ ಪೊಲೀಸ್‌ ಉಪ ನಿರೀಕ್ಷಕರಾದ (ಕಾ.ಸು) ಪ್ರಸನ್ನ ಎಂ ಎಸ್ ಅವರು ಬಂಧಿಸಿದ್ದಾರೆ.

ಪಡುಬಿದ್ರಿ ಪೊಲೀಸ್ ಠಾಣೆಯ ಪೊಲೀಸ್ ಉಪ ನಿರೀಕ್ಷಕರಾದ ಪ್ರಸನ್ನ ಎಂ.ಎಸ್.ಅವರಿಗೆ ದಿನಾಂಕ:15-03-2025 ರಂದು  ಹೆಜಮಾಡಿ ಕೋಡಿ ಬೀಚ್‌ ರಸ್ತೆಯ ಬಳಿ ಯಾರೋ ನಾಲ್ಕು ಅನುಮನಾಸ್ಪದ ಯುವಕರು ಅಮಲಿನಲ್ಲಿರುವ ಬಗ್ಗೆ ಸಾರ್ವಜನಿಕರಿಂದ ದೂರು ಬಂದಿದ್ದು ಕೂಡಲೇ ಪ್ರಸನ್ನ ಎಂ.ಎಸ್ ಅವರು ಸ್ಥಳಕ್ಕೆ ಹೋದಾಗ 4 ಯುವಕರು, ಯಾವುದೋ ಅಮಲಿನಲ್ಲಿ ತೂರಾಡುತ್ತಾ ಇದ್ದರೆನ್ನಲಾಗಿದೆ .

ಪೊಲೀಸರು ಅವರ ಬಳಿ ಹೋಗಿ ಹೆಸರು ವಿಳಾಸ ವಿಚಾರಿಸಿದಾಗ 1)ಅಬ್ದುಲ್‌ ರೆಹಮಾನ್‌ ಮಿಯಾಜ್‌(26),2)ಶೇಖ್‌ ಮೊಹಮ್ಮದ್‌ ಅಪ್ತಾಬ್‌ (29), 3)ಸಯ್ಯದ್‌ ರಜಾನ್‌ ಬಿ (18),4)ಮೊಹಮ್ಮದ್‌ ಶಮೀಲ್ (24) ಎಂದು ತಿಳಿಸಿದ್ದು, ಅವರು ಯಾವುದೋ ಮಾದಕ ಪದಾರ್ಥ ಸೇವಿಸಿರಬಹುದು ಎಂಬ ಬಗ್ಗೆ ಅನುಮಾನಗೊಂಡು ಬಂಧಿಸಿ ವಶಕ್ಕೆ ಪಡೆದು ಮಣಿಪಾಲ ಕೆ.ಎಂ.ಸಿ ಆಸ್ಪತ್ರೆಯ ಫೊರೆನ್ಸಿಕ್ ಮೆಡಿಸಿನ್ ವಿಭಾಗದ ವೈದ್ಯಾಧಿಕಾರಿಯವರ ಎದುರು ಹಾಜರುಪಡಿಸಿ ವೈದ್ಯಕೀಯ ತಪಾಸಣೆಗೊಳಪಡಿಸಿದ್ದಾರೆ . 4 ಯುವಕರ ಪೈಕಿ ಶೇಖ್‌ ಮೊಹಮ್ಮದ್‌ ಅಪ್ತಾಬ್‌ ಎಂಬಾತ ಮಾದಕ ವಸ್ತುವಾದ ಗಾಂಜಾ ಸೇವಿಸಿರುವುದಾಗಿ ದಿನಾಂಕ 19/03/2025 ರಂದು ವೈದ್ಯರು ದೃಢ ಪತ್ರವನ್ನು ನೀಡಿದ್ದಾರೆ ಎನ್ನಲಾಗಿದೆ.

ಈ ಬಗ್ಗೆ ಪಡುಬಿದ್ರಿ ಪೊಲೀಸ್‌ ಠಾಣೆಯಲ್ಲಿ  ಕಲಂ: 27 (b) NDPS Act ರಂತೆ ಪ್ರಕರಣ ದಾಖಲಾಗಿದೆ.

error: No Copying!