Spread the love

ಕೋಟ: ದಿನಾಂಕ: 12-03-2025(ಹಾಯ್ ಉಡುಪಿ ನ್ಯೂಸ್) ಶಿರಿಯಾರ ಶ್ರೀ ರಾಮ ಮಂದಿರ ದೇವಸ್ಥಾನದಲ್ಲಿ ಕಳ್ಳತನ ನಡೆದಿದೆ ಎಂದು ಕೋಟ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

ಬ್ರಹ್ಮಾವರ  ತಾಲೂಕು ಹೆರೂರು ಗ್ರಾಮದ ನಿವಾಸಿ ಎನ್ ಗಣೇಶ (50) ಎಂಬವರು ಶಿರಿಯಾರ ಗ್ರಾಮದ ಕಲ್ಮರ್ಗಿ ಎಂಬಲ್ಲಿನ ರಾಮಾಂಜನೇಯ ಸೇವಾ ಟ್ರಸ್ಟ್‌ನ ಶ್ರೀ ರಾಮ ಮಂದಿರ ದೇವಸ್ಥಾನದ  ಕಾರ್ಯದರ್ಶಿಯಾಗಿರುವುದಾಗಿ ಪೊಲೀಸರಿಗೆ ನೀಡಿದ ದೂರಿನಲ್ಲಿ ತಿಳಿಸಿದ್ದಾರೆ.

ದಿನಾಂಕ 11.03.2025 ರ ರಾತ್ರಿ ದೇವಸ್ಥಾನದ ಪೂಜೆ ಮುಗಿಸಿ ದೇವಳದ ಬಾಗಿಲನ್ನು ಸಮಾಜ ಭಾಂದವರಾದ ರತ್ನಾಕರ ಎಂಬುವರು ಬೀಗ ಹಾಕಿ ಭದ್ರ ಪಡಿಸಿ ಮನೆಗೆ ತೆರಳಿದ್ದು ದಿನಾಂಕ 12.03.2025 ರ ಬೆಳಿಗ್ಗೆ 06.00 ಕ್ಕೆ ನಿತ್ಯದಂತೆ ರಾಮ ಮಂದಿರಕ್ಕೆ ಬಂದು ನೋಡುವಾಗ ಪ್ರಧಾನ ಬಾಗಿಲು ಹಾಗೂ ಗರ್ಭ ಗುಡಿ ಬಾಗಿಲನ್ನು ಯಾರೋ ಕಳ್ಳರು ಯಾವುದೋ ಆಯುಧದಿಂದ ಬಲತ್ಕಾರವಾಗಿ ಒಡೆದು ಒಳ ಪ್ರವೇಶಿಸಿ ದೇವರ ಗರ್ಭ ಗುಡಿಯಲ್ಲಿ ಪ್ರತಿಷ್ಠಾಪನೆ ಮಾಡಿದ ಪಂಚ ಲೋಹದ ದೇವರ ವಿಗ್ರಹವಾದ ರಾಮ, ಸೀತೆ, ಲಕ್ಷ್ಮಣ ಮತ್ತು ಹನುಮಂತನ ಪಂಚಲೋಹದ ವಿಗ್ರಹಗಳನ್ನು ಅಂದಾಜು ಮೌಲ್ಯ ರೂ. 5 ಲಕ್ಷ ಹಾಗೂ ಕಾಣಿಕೆ ಡಬ್ಬ ಮೌಲ್ಯ ರೂ. 30,000/- ಹಾಗೂ ದೇವರ ವಿಗ್ರಹಕ್ಕೆ ಅಲಂಕಾರಕ್ಕೆ ಹಾಕಿರುವ ರಾಮ ಲಕ್ಷ್ಮಣ ಹನುಮಂತನ ತುಳಸಿ ಬೆಳ್ಳಿ ಮಣಿಸರ-3, ಹಾಗೂ ಸೀತೆ ದೇವರ ಮಾಂಗಲ್ಯ ಸರ ಬೆಳ್ಳಿಯ ಚಿನ್ನದ ಲೇಪವಿರುವ ಸರ-1 ಇವುಗಳ ಅಂದಾಜು ಮೌಲ್ಯ ರೂ. 1,50,000/- ಗಳನ್ನು ಯಾರೋ ಕಳ್ಳರು ದಿನಾಂಕ 11.03.2025 ರ ರಾತ್ರಿಯ ನಂತರ ಕಳವು ಮಾಡಿಕೊಂಡು ಹೋಗಿದ್ದಾರೆ ಎಂದು ಪೊಲೀಸರಿಗೆ ದೂರು ನೀಡಿದ್ದಾರೆ.

ಕಳವಾದ ಒಟ್ಟು ಸೊತ್ತುಗಳ ಮೊತ್ತ ರೂ. 6,80,000/- ಆಗಬಹುದು ಎಂದು ಅಂದಾಜಿಸಲಾಗಿದೆ. ಈ ಬಗ್ಗೆ ಕೋಟ ಪೊಲೀಸ್‌ ಠಾಣೆಯಲ್ಲಿ  ಕಲಂ: 331(4), 305 BNS ನಂತೆ ಪ್ರಕರಣ ದಾಖಲಾಗಿದೆ.

error: No Copying!