Spread the love

ಉಡುಪಿ: ದಿನಾಂಕ: 12/03/2025 (ಹಾಯ್ ಉಡುಪಿ ನ್ಯೂಸ್) ಬ್ರಹ್ಮಗಿರಿ ಲಯನ್ಸ್ ಭವನದಲ್ಲಿ ಅನುಮತಿ ಇಲ್ಲದೆ ತಡರಾತ್ರಿ ಕರ್ಕಶ ಧ್ವನಿ ವರ್ಧಕ ಬಳಸಿ ಮೆಹೆಂದಿ ಕಾರ್ಯಕ್ರಮ ನಡೆಸುತ್ತಿದ್ದವರ ಮೇಲೆ ಉಡುಪಿ ನಗರ ಪೊಲೀಸ್ ಠಾಣೆಯ ಸಹಾಯಕ ಪೊಲೀಸ್‌ ಉಪನಿರೀಕ್ಷಕರಾದ ನವೀನ್ ದೇವಾಡಿಗ ಅವರು ಪ್ರಕರಣ ದಾಖಲಿಸಿದ್ದಾರೆ.

ಉಡುಪಿ ನಗರ ಠಾಣೆ ಪೊಲೀಸ್ ಉಪ ನಿರೀಕ್ಷಕರಾದ ನವೀನ್ ದೇವಾಡಿಗ ಅವರು ದಿನಾಂಕ: 10-03-2025 ರಂದು ರಾತ್ರಿ ರೌಂಡ್ಸ್ ಕರ್ತವ್ಯದಲ್ಲಿರುವಾಗ ಬ್ರಹ್ಮಗಿರಿ ಜಂಕ್ಷನ್ ನಲ್ಲಿ ಲಯನ್ಸ್ ಭವನದಲ್ಲಿ ರಾತ್ರಿ 10:00 ಗಂಟೆಯ ಮೇಲೂ ಸೌಂಡ್ ಬಾಕ್ಸ್ ಹಾಕಿ ಸಾರ್ವಜನಿಕರ ನೆಮ್ಮದಿಗೆ ಭಂಗ ಮಾಡುತ್ತಿರುವುದಾಗಿ ಬಂದ ಸಾರ್ವಜನಿಕ ಮಾಹಿತಿ ಮೇರೆಗೆ ರಾತ್ರಿ 10:40 ಗಂಟೆಗೆ ಬ್ರಹ್ಮಗಿರಿ ಲಯನ್ಸ್ ಭವನದ ಬಳಿ ಪೊಲೀಸರು ಹೋದಾಗ ಲಯನ್ಸ್ ಭವನದಲ್ಲಿ ಬೆಳಕಿನ ವ್ಯವಸ್ಥೆಯೊಂದಿಗೆ ಕಾರ್ಯಕ್ರಮ ನಡೆಯುತ್ತಿತ್ತು ಎನ್ನಲಾಗಿದೆ.

ಪೊಲೀಸರು ವಿಚಾರಿಸಿದಾಗ ಮಂಜುನಾಥ ಎಂಬುವವರ ಮೆಹಂದಿ ಕಾರ್ಯಕ್ರಮ ನಡೆಯುತ್ತಿದ್ದು, ಈ ಬಗ್ಗೆ  ಪೊಲೀಸರು ಮಂಜುನಾಥ ರವರಲ್ಲಿ ಸೌಂಡ್ ಬಾಕ್ಸ್ ದ್ವನಿವರ್ಧಕ ಬಳಸಲು ಹಾಗೂ ಕಾರ್ಯಕ್ರಮವನ್ನು ತಡರಾತ್ರಿಯವರೆಗೆ ಅಯೋಜಿಸಿದ ಬಗ್ಗೆ ಸಂಬಂಧಿಸಿದ ಪ್ರಾಧಿಕಾರದಿಂದ ಪರವಾನಿಗೆ ಪೂರ್ವಾನುಮತಿ ಪಡೆದುಕೊಂಡಿರುವ ಕುರಿತು ವಿಚಾರಿಸಿದಾಗ ತಾನು ಯಾವುದೇ ಪೂರ್ವಾನುಮತಿ ಅಥವಾ ಪರವಾನಿಗೆಯನ್ನು ಪಡೆದುಕೊಂಡಿಲ್ಲವೆಂದು ತಿಳಿಸಿರುತ್ತಾರೆ ಎಂದು ಪೊಲೀಸರು ದೂರಿನಲ್ಲಿ ತಿಳಿಸಿದ್ದಾರೆ.

ನಂತರ ಲೈಟ್ ಮತ್ತು ಸೌಂಡ್ ಬಾಕ್ಸ್ ಬಗ್ಗೆ ವಿಚಾರಿಸಿದಾಗ ದಾಮೋದರ ಎಂಬುವವರು ಸ್ಥಳದಲ್ಲಿ ಹಾಜರಿದ್ದು, ಬೈಲೂರಿನ ರವಿ ಎಂಬುವವರು ನಡೆಸಿ ಕೊಂಡಿರುವ ಸೌಂಡ್ಸ್ ಸಿಸ್ಟಮ್ ನಲ್ಲಿ ತಾನು ಮೆನೇಜರ್ ಆಗಿ ಕೆಲಸ ಮಾಡಿಕೊಂಡಿರುವುದಾಗಿ ತಿಳಿಸಿದ್ದು ,ಆರೋಪಿತರುಗಳು ಯಾವುದೇ ಪರವಾನಿಗೆ ಇಲ್ಲದೇ ದ್ವನಿವರ್ಧಕವನ್ನು ಅತೀ ಕರ್ಕಶವಾಗಿ ಸಾರ್ವಜನಿಕರಿಗೆ ಉಪದ್ರವವಾಗುವ ರೀತಿ ತಡರಾತ್ರಿಯವರೆಗೂ ಬಳಸಿದ್ದಾರೆ ಎಂದು ಪೊಲೀಸರು ದೂರು ನೀಡಿದ್ದಾರೆ.

ಈ ಬಗ್ಗೆ ಉಡುಪಿ ನಗರ ಪೊಲೀಸ್‌ ಠಾಣೆಯಲ್ಲಿ ಕಲಂ: 109 kp act & 292 BNS ರಂತೆ ಪ್ರಕರಣ ದಾಖಲಾಗಿದೆ.

error: No Copying!