
ಶಂಕರನಾರಾಯಣ: ದಿನಾಂಕ: 11/03/2025(ಹಾಯ್ ಉಡುಪಿ ನ್ಯೂಸ್) ಸಿದ್ಧಾಪುರ ಗ್ರಾಮದ ಸರ್ವೀಸ್ ಸ್ಟೇಷನ್ ನಲ್ಲಿ ಟ್ಯಾಂಕರ್ ಗಳಿಂದ ಡೀಸೆಲ್, ಪೆಟ್ರೋಲ್ ಕಳ್ಳತನ ನಡೆಸುತ್ತಿದ್ದ ಮೂವರನ್ನು ಕುಂದಾಪುರ ಉಪವಿಭಾಗ ಪೊಲೀಸ್ ಉಪಾಧೀಕ್ಷಕರಾದ ಹೆಚ್.ಡಿ.ಕುಲಕರ್ಣಿ ಅವರು ಬಂಧಿಸಿದ್ದಾರೆ.
ಕುಂದಾಪುರ ಉಪವಿಭಾಗ , ಪೊಲೀಸ್ ಉಪಾಧೀಕ್ಷಕರಾಗಿರುವ ಹೆಚ್.ಡಿ ಕುಲಕರ್ಣಿ ಅವರು ದಿನಾಂಕ: 10-03-2025 ರಂದು ಕಛೇರಿಯಲ್ಲಿರುವಾಗ ಶಂಕರನಾರಾಯಣ ಠಾಣಾ ಪಿಎಸ್ಐ ನಾಸೀರ್ ಹುಸೇನ್ ರವರು ರಾತ್ರಿ 8:00 ಗಂಟೆಗೆ ಕರೆಮಾಡಿ ಕುಂದಾಪುರ ತಾಲೂಕು ಸಿದ್ದಾಪುರ ಗ್ರಾಮದ ಸುಬ್ಬರಾವ್ ಕಾಂಪ್ಲೇಕ್ಸ್ ನಲ್ಲಿರುವ ಸರ್ವಿಸ್ ಸ್ಟೇಷನ್ ನಲ್ಲಿ ಡಿಸೇಲ್ ಟ್ಯಾಂಕರ್ ಗಳಿಂದ ಅಕ್ರಮವಾಗಿ ಡಿಸೇಲನ್ನು ಕ್ಯಾನ್ ಗಳಿಗೆ ವರ್ಗಾಯಿಸಿ ಕಳ್ಳತನ ಮಾಡುತ್ತಿರುವುದಾಗಿ ನೀಡಿದ ಮಾಹಿತಿ ಮೇರೆಗೆ ಅವರು ಕೂಡಲೇ ಸಿದ್ದಾಪುರ ಪೇಟೆಗೆ ಬಂದಾಗ ಅಲ್ಲಿ ಶಂಕರನಾರಾಯಣ ಪೊಲೀಸ್ ಠಾಣಾ ಪಿಎಸ್ಐ ಹಾಗೂ ಠಾಣಾ ಸಿಬ್ಬಂದಿಗಳು ಹಾಜರಿದ್ದು ಸಿದ್ದಾಪುರ-ಅಂಪಾರು ಮುಖ್ಯ ರಸ್ತೆಯಿಂದ ಹೋಂಡಾ ಶೋ ರೂಂ ಬದಿಯಲ್ಲಿ ಹೋಗುವ ಕಾಲು ದಾರಿಯಲ್ಲಿ ಸರ್ವಿಸ್ ಸ್ಟೇಷನ್ ಪಕ್ಕದ ಖಾಲಿ ಜಾಗದಲ್ಲಿ ಇಂಧನ ಸಾಗಿಸುವ ಒಂದು ಟ್ಯಾಂಕರ್ ನಿಂತಿದ್ದು ಟ್ಯಾಂಕರ್ ಬಳಿ ಜಯರಾಮ ಎಂಬಾತ ನಿಂತಿದ್ದು ಆತನು ಟ್ಯಾಂಕರ್ ಗಳ ಕೆಳಗೆ ಇರುವ ಅದೇ ವಾಹನದ ಇಂಧನ ಟ್ಯಾಂಕ್ ನಿಂದ ಪೈಪ್ ಹಾಗೂ ಜಾಕ್ ಬಳಸಿ ಕ್ಯಾನ್ ಗಳಿಗೆ ಇಂಧನವನ್ನು ತುಂಬಿಸುತ್ತಿರುವುದು ಕಂಡುಬಂದಿದ್ದು ಪೋಲೀಸರು ಕೂಡಲೇ ದಾಳಿ ನಡೆಸಿ ಆತನನ್ನು ಹಿಡಿದು, ಟ್ಯಾಂಕರ ಬಳಿ ಇದ್ದ ಚಾಲಕನ ಬಳಿ ವಿಚಾರಿಸಿದಾಗ ನಾನು ಪ್ರತಿ ಡಿಸೇಲ್ ಟ್ಯಾಂಕನಿಂದ 20 ಲೀಟರ್ ಡಿಸೇಲನ್ನು ಕಳವುಮಾಡಿ ಆಪಾದಿತ ಸಿದ್ದಾಪುರದ ವಿಜಯ ಎಂಬಾತನಿಗೆ ನೀಡುತ್ತಿರುವುದಾಗಿ ಪೊಲೀಸರಿಗೆ ತಿಳಿಸಿದ್ದಾನೆ ಎನ್ನಲಾಗಿದೆ.
ವಿಜಯ ನು ಓಡಿಹೋಗಿ ತಪ್ಪಿಸಿಕೊಂಡಿರುತ್ತಾನೆ ಎನ್ನಲಾಗಿದೆ.ಪೊಲೀಸರು ಟ್ಯಾಂಕರನ್ನು ಪರಿಶೀಲಿಸಿದಾಗ ಅದರ ನಂಬ್ರ KA-19-AE-4986 ಆಗಿದ್ದು ಅದರ ಡಿಸೇಲ್ ಟ್ಯಾಂಕಿನ ಬಳಿ ಒಂದು ಕ್ಯಾನ್ ಇದ್ದು ಅದರಲ್ಲಿ ಡಿಸೇಲ್ ತುಂಬಿರುವುದು ಕಂಡು ಬಂದಿದ್ದು ಕ್ಯಾನ್ ನಲ್ಲಿ ಸುಮಾರು 20 ಲೀಟರ್ ಡಿಸೇಲ್ ಇರುವುದು ಕಂಡು ಬಂದಿದ್ದು ನಂತರ ಅಲ್ಲಿ ಸರ್ವೀಸ್ ಸ್ಟೇಷನ್ ಬಳಿ ಬದಿಯಲ್ಲಿ ಡಿಸೇಲ್ ಹಾಗೂ ಪೆಟ್ರೋಲ್ ತುಂಬಿಸಿರುವುದು ಕಂಡು ಬಂದಿದ್ದು 1020 ಲೀಟರ್ ಡಿಸೇಲ್, 30 ಲೀಟರ್ ಪೆಟ್ರೋಲ್, 3 ಪೈಪ್ ಗಳು, ಹಾಗೂ ಒಂದು ಡಿಸೇಲ್ ತೆಗೆಯುವ ಲಿಪ್ಟ್ ಮೋಟಾರನ್ನು ಪೊಲೀಸರು ಸ್ವಾದೀನ ಪಡಿಸಿಕೊಂಡಿದ್ದಾರೆ .
ಆಪಾದಿತರು ಮೂವರು ಕೂಡಿಕೊಂಡು ಈ ಕೃತ್ಯ ಎಸಗಿದ್ದಾರೆ ಎಂದು ಪೊಲೀಸರು ದೂರು ನೀಡಿದ್ದಾರೆ.
ಈ ಬಗ್ಗೆ ಶಂಕರನಾರಾಯಣ ಪೊಲೀಸ್ ಠಾಣೆಯಲ್ಲಿ ಕಲಂ: 303(2),112 BNS ಮತ್ತು ಕಲಂ: 3, 7 ಅವಶ್ಯಕ ವಸ್ತುಗಳ ಅಧಿನಿಯಮ-1955 ಮತ್ತು ಕಲಂ: 23 ಪೆಟ್ರೋಲಿಯಂ ಕಾಯ್ದೆ ಯಂತೆ ಪ್ರಕರಣ ದಾಖಲಾಗಿದೆ.