Spread the love

ಕೊಲ್ಲೂರು: ದಿನಾಂಕ :04-03-2025(ಹಾಯ್ ಉಡುಪಿ ನ್ಯೂಸ್) ಹೊಸೂರು ಗ್ರಾಮದ ಮರ್ಡಿ ಎಂಬಲ್ಲಿ ಸರಕಾರಿ ಜಾಗದಲ್ಲಿ ಅಕ್ರಮವಾಗಿ ಮನೆ ಕಟ್ಟುತ್ತಿದ್ದಾರೆ ಎಂದು ಕಂದಾಯ ನಿರೀಕ್ಷಕರಾದ ರಾಘವೇಂದ್ರ ಡಿ  ಅವರು ಪೊಲೀಸರಿಗೆ ದೂರು ನೀಡಿದ್ದಾರೆ.

ಕುಂದಾಪುರ ತಾಲೂಕು ವಂಡ್ಸೆ ಹೋಬಳಿಯಲ್ಲಿ ಕಂದಾಯ ನಿರೀಕ್ಷಕರಾಗಿರುವ ರಾಘವೇಂದ್ರ ಡಿ ಅವರಿಗೆ ಹೊಸೂರು ಗ್ರಾಮದ ಮರ್ಡಿ ಎಂಬಲ್ಲಿ ಮಂಜುಳ ಎಂಬುವವರು ಸರಕಾರಿ ಜಾಗದಲ್ಲಿ ಅಕ್ರಮವಾಗಿ ಮನೆ ಕಟ್ಟುತ್ತಿದ್ದಾರೆ ಎಂಬ ಬಗ್ಗೆ ಸಾರ್ವಜನಿಕರು ನೀಡಿದ ದೂರಿನ ಮೇರೆಗೆ ರಾಘವೇಂದ್ರ ಡಿ ಅವರು ದಿನಾಂಕ 23/12/2024 ರಂದು ಸ್ಥಳಕ್ಕೆ ಭೇಟಿ ನೀಡಿ ಸ್ಥಳ ಪರಿಶೀಲನೆ ಮಾಡಿದಾಗ ಮಂಜುಳ ರವರು ಅವರ ಪಟ್ಟಾ ಜಾಗ ಸರ್ವೆ ನಂಬ್ರ 56/11 ರಲ್ಲಿ ಮನೆ ಕಟ್ಟಲು ಅನುಮತಿ ಪಡೆದುಕೊಂಡು ಅನುಮತಿ ಪಡೆದ ಜಾಗದಲ್ಲಿ ಮನೆ ಕಟ್ಟದೇ ಹತ್ತಿರದ ಸರ್ವೆ ನಂಬ್ರ 141/ * ರಲ್ಲಿ 0.05 ಸರಕಾರಿ ಜಾಗದಲ್ಲಿ ಕಟ್ಟುತ್ತಿದ್ದರು ಎಂದು ವರದಿ ನೀಡಿದ್ದಾರೆ ಎನ್ನಲಾಗಿದೆ

ಬಳಿಕ  ಕುಂದಾಪುರ ತಹಶೀಲ್ದಾರರವರು ಮನೆ ಕಾಮಗಾರಿ ನಿಲ್ಲಿಸುವಂತೆ ನೋಟೀಸ್‌ ನೀಡಿದ್ದು, ನೊಟೀಸ್‌ ನೀಡಿದ‌‌ ಹೊರತಾಗಿಯೂ ಮಂಜುಳ ರವರು ಮನೆ ಕಾಮಗಾರಿಯನ್ನು ಅಶೋಕ ಎಂಬವರ ಮುಖಾಂತರ ಮುಂದುವರಿಸಿರುತ್ತಾರೆ ಎಂದು ಸಾರ್ವಜನಿಕರು ದೂರಿದ್ದಾರೆ.

ಮಂಜುಳ ರವರು ಮನೆ ಕಟ್ಟುತ್ತಿರುವ ಜಾಗವು ಸರಕಾರಿ ಜಾಗ ಆಗಿರುವುದರಿಂದ ಸರಕಾರಿ ಜಾಗ ಅಕ್ರಮಣ ಮಾಡಿ ಮನೆ ಕಟ್ಟಿಸುತ್ತಿರುವ ಮಂಜುಳ ರವರ ವಿರುದ್ದ ನೀಡಿದ ದೂರಿನಂತೆ ಕೊಲ್ಲೂರು ಪೊಲೀಸ್‌ ಠಾಣೆಯಲ್ಲಿ  ಕಲಂ: 192 (A) KARNATAKA LAND REVENUE (AMENDMENT) ACT ರಂತೆ ಪ್ರಕರಣ ದಾಖಲಾಗಿದೆ.

error: No Copying!