Spread the love

ಬೈಂದೂರು: ದಿನಾಂಕ:01-02-2025(ಹಾಯ್ ಉಡುಪಿ ನ್ಯೂಸ್) ಸಾಲದ ಕಂತು ಕಟ್ಟಲಿಲ್ಲ ಎಂಬ ಕಾರಣಕ್ಕೆ ಮಹಿಳೆ ಯೋರ್ವರ ಮನೆಗೆ ಅಕ್ರಮ ಪ್ರವೇಶ ಮಾಡಿ ಅವಮಾನಿಸಿದ್ದಾರೆ ಎಂದು ಮಹಿಳೆಯೋರ್ವರು ಪೊಲೀಸರಿಗೆ ದೂರು ನೀಡಿದ್ದಾರೆ.

ಬಿಜೂರು ಗ್ರಾಮದ ನಿವಾಸಿ ಕಮಲಾಕ್ಷಿ (39) ಎಂಬವರು ಸೇಫ್‌ ಸ್ಟಾರ್‌ ಸೌಹಾರ್ಧ ಸಹಕಾರಿ ಸಂಘ ನಿಯಮಿತ ಬೈಂದೂರು ಶಾಖೆಯಿಂದ ಕಳೆದ 3 ವರ್ಷದ ಹಿಂದೆ ರೂ 40000/- ಸಾಲವನ್ನು ಪಡೆದುಕೊಂಡಿದ್ದು ಕಂತುಗಳನ್ನು ಕಟ್ಟುತ್ತಿದ್ದರು ಎಂದು ಪೊಲೀಸರಿಗೆ ನೀಡಿದ ದೂರಿನಲ್ಲಿ ತಿಳಿಸಿದ್ದಾರೆ.

ಇತ್ತೀಚೆಗೆ ಸಾಲದ ಕಂತು ಕಟ್ಟಲು ಕಷ್ಟಸಾಧ್ಯವಾಗಿತ್ತು ಇದರಿಂದ ಬ್ಯಾಂಕಿನ ಅಪಾದಿತ ಸಿಬ್ಬಂದಿ ಗಳಾದ ಯೋಗೀಶ್‌,ಮ್ಯಾನೇಜರ್‌,ಜನಾರ್ಧನ್‌,ಸುಜಾತರವರು ಪದೇ ಪದೇ ಕಮಲಾಕ್ಷಿರವರ ಮನೆಗೆ ಬಂದು ಸಾಲದ ಕಂತು ಕಟ್ಟುವಂತೆ ಪೀಡಿಸುತ್ತಿದ್ದು  ಕಮಲಾಕ್ಷಿ ರವರು ಕಂತನ್ನು ಕಟ್ಟಲು ಸಮಯಾವಕಾಶ ಕೇಳಿದರೂ ಕೇಳದೇ   ದಿನಾಂಕ 28.02.2025 ರಂದು ಬೆಳಿಗ್ಗೆ  ಆಪಾದಿತ ಬ್ಯಾಂಕ್ ನ ಸಿಬ್ಬಂದಿಗಳು ಕಮಲಾಕ್ಷಿ ರವರ ಮನೆಗೆ ಬಂದು  ಮನೆಯೊಳಗೆ ಅಕ್ರಮ ಪ್ರವೇಶ ಮಾಡಿ ಕೂಡಲೇ ರೂ 15,000 ಹಣವನ್ನು ಈಗಲೇ ತುಂಬುವಂತೆ ಬಲವಂತಪಡಿಸಿ 10 ದಿನಗಳ ಸಮಯಾವಕಾಶ ಕೇಳಿದರೂ ಕೇಳದೇ  ಕಮಲಾಕ್ಷಿ ರವರಿಗೆ ಅವಾಚ್ಯವಾಗಿ ಬೈದು ಕಮಲಾಕ್ಷಿ ರವರನ್ನು ಅವಮಾನಿಸಿದ್ದಾರೆ ಎಂದು ಪೊಲೀಸರಿಗೆ ದೂರು ನೀಡಿದ್ದಾರೆ.

ಈ ಬಗ್ಗೆ ಬೈಂದೂರು ಪೊಲೀಸ್‌ ಠಾಣೆಯಲ್ಲಿ ಕಲಂ :329 (4) 351(2) r/w 3(5) BNS & Sec ̧8, 12 The Karnataka Micro Loan & small Loan (Prevention Coercive actions) Ordiance 2025 ರಂತೆ ಪ್ರಕರಣ ದಾಖಲಾಗಿದೆ.

error: No Copying!