
ಕುಂದಾಪುರ: ದಿನಾಂಕ: 01-03-2025(ಹಾಯ್ ಉಡುಪಿ ನ್ಯೂಸ್) ಕಸಬಾ ಗ್ರಾಮದಲ್ಲಿ ನಕಲಿ ಸರ್ಕಾರಿ ದಾಖಲೆಗಳನ್ನು ತಯಾರಿಸಿ ಕೊಟ್ಟು ಸಾರ್ವಜನಿಕರನ್ನು ವಂಚಿಸುತ್ತಿದ್ದ ಕೋಡಿ ನಾಗೇಶ್ ಎಂಬವನನ್ನು ಕುಂದಾಪುರ ಪೊಲೀಸ್ ಠಾಣೆಯ ಪೊಲೀಸ್ ಉಪ ನಿರೀಕ್ಷಕರಾದ ನಂಜಾ ನಾಯ್ಕ್ ಅವರು ಬಂಧಿಸಿದ್ದಾರೆ.
ಕುಂದಾಪುರ ಪೊಲೀಸ್ ಠಾಣೆಯ ಪೊಲೀಸ್ ಉಪನಿರೀಕ್ಷಕರಾದ ನಂಜಾನಾಯ್ಕ ಅವರಿಗೆ ಬಂದ ಗುಪ್ತ ಮಾಹಿತಿಯಂತೆ ನ್ಯಾಯಾಲಯದ ಸರ್ಚ್ ವಾರಂಟ್ ಪಡೆದುಕೊಂಡು ಸಿಬ್ಬಂದಿಯವರೊಂದಿಗೆ ಕುಂದಾಪುರ ತಾಲೂಕು ಕಸಬ ಗ್ರಾಮದ ಫೆರಿ ರಸ್ತೆಯಲ್ಲಿರುವ ಕೋಡಿ ನಾಗೇಶ್ ಎಂಬುವವನ ಅರ್ಜಿ ಕೇಂದ್ರಕ್ಕೆ ದಿನಾಂಕ 28-02-2025 ರಂದು ದಾಳಿ ನಡೆಸಿದ್ದಾರೆ.
ಪೊಲೀಸರು ಸ್ಥಳಕ್ಕೆ ಹೋದಾಗ ಅರ್ಜಿ ಕೇಂದ್ರದ ಬಾಗಿಲು ತೆರೆದುಕೊಂಡಿದ್ದು ಅರ್ಜಿ ಕೇಂದ್ರದೊಳಗೆ ಮಾಲಕರಾದ ಕೋಡಿ ನಾಗೇಶ್ ಎಂಬವ ಹಾಜರಿದ್ದು ಅವನಿಗೆ ನ್ಯಾಯಾಲಯವು ಹೊರಡಿಸಿದ ಶೋಧನಾ ವಾರಂಟನ್ನು ತೋರಿಸಿ ವಿಚಾರ ತಿಳಿಸಿ ನಂತರ ಪೊಲೀಸರು “ಅರ್ಜಿ ಕೇಂದ್ರ ಇರುವ ಕೋಣೆಯನ್ನು ಪರಿಶೀಲನೆ ಮಾಡಿದಾಗ ಒಂದು ಟೇಬಲ್ ಮತ್ತು 2 ಖುರ್ಚಿಗಳಿದ್ದು ಟೇಬಲ್ ಮೇಲೆ 2 ಕಂಪ್ಯೂಟರ್ ಮಾನೀಟರ್ ಹಾಗೂ 1 ಸಿಪಿಯು ಇದ್ದು ಬಂದ್ ಆಗಿರುತ್ತದೆ ಎನ್ನಲಾಗಿದೆ.. ನಂತರ ಪೊಲೀಸರು ಟೇಬಲ್‌ನ ಡ್ರಾವರ್‌ನ್ನು ತೆರೆದು ನೋಡಿ ದಾಗ ಒಂದು ಪ್ಲಾಸ್ಟಿಕ್ ಚೀಲದಲ್ಲಿ ರಬ್ಬರ್ ಸ್ಟ್ಯಾಂಪ್‌ಗಳು ಇರುವುದು ಕಂಡು ಬಂದಿದೆ ಎಂದು ದೂರಲಾಗಿದೆ.
1.ಉಪನೋಂದಣಾಧಿಕಾರಿಗಳ ಮೊಹರು ಬೈಂದೂರು ಎಂದು ಮುದ್ರಣ ಇರುವ ಕನ್ನಡ ಮತ್ತು ಇಂಗ್ಲೀಷ್ ನಲ್ಲಿ ತಯಾರಿಸಿದ ರೌಂಡ್ ಸೀಲು-1,2.ಉಪನೋಂದಣಾಅಧಿಕಾರಿಗಳು ಜನನ ಮತ್ತು ಮರಣ ತಾಲೂಕು ಸಾರ್ವಜನಿಕ ಆಸ್ಪತ್ರೆ ಕುಂದಾಫುರ ಎಂದು ಮುದ್ರಣ ಇರುವ ಕನ್ನಡ ಮತ್ತು ಇಂಗ್ಲೀಷ್ ನಲ್ಲಿ ತಯಾರಿಸಿದ ರೌಂಡ್ ಸೀಲು-1,3.ಗ್ರಾಮ ಪಂಚಾಯತ್ ಕಾರ್ಯಾಲಯ ಬೀಜಾಡಿ ಗ್ರಾಮ ಕುಂದಾಪುರ ತಾಲೂಕು ಎಂದು ಮುದ್ರಣ ಇರುವ ಕನ್ನಡ ಮತ್ತು ಇಂಗ್ಲೀಷ್ ನಲ್ಲಿ ತಯಾರಿಸಿದ ರೌಂಡ್ ಸೀಲು-1,4. ಜಿಲ್ಲಾಧಿಕಾರಿಗಳ ಕಛೇರಿ ಉಡುಪಿ ಜಿಲ್ಲೆ ರಜತಾದ್ರಿ ಮಣಿಪಾಲ ಎಂದು ಮುದ್ರಣ ಇರುವ ಕನ್ನಡದಲ್ಲಿ ತಯಾರಿಸಿದ ರೌಂಡ್ ಸೀಲು-1,5.Registrar of Birth & Death Udupi City Muncipal Counsil Udupi ಎಂದು ಮುದ್ರಣ ಇರುವ ಇಂಗ್ಲೀಷ್‌ನಲ್ಲಿ ತಯಾರಿಸಿದ ಸೀಲು-1,6. REGISTARAR OF BIRTH & DEATH TOWN MUNCIPAL OFFICE KUNDAPURA ಎಂದು ಮುದ್ರಣ ಇರುವ ಇಂಗ್ಲೀಷ್‌ನಲ್ಲಿ ತಯಾರಿಸಿದ ಸೀಲು-1,7.ತಹಶೀಲ್ದಾರರು ಕುಂದಾಪುರ ತಾ// ಉಡುಪಿ ಜಿಲ್ಲೆ ಎಂದು ಮುದ್ರಣ ಇರುವ ಕನ್ನಡದಲ್ಲಿ ತಯಾರಿಸಿದ ಸೀಲು-1,8. ಅಧ್ಯಕ್ಷರು ಗ್ರಾಮ ಪಂಚಾಯತ್, ಬಸ್ರೂರು ಎಂದು ಮುದ್ರಣ ಇರುವ ಕನ್ನಡದಲ್ಲಿ ತಯಾರಿಸಿದ ಸೀಲು-1,9. ಮುಖ್ಯೋಪಾಧ್ಯಾಯರು ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ನಾವುಂದ – ಉಡುಪಿ ಜಿಲ್ಲೆ ಎಂದು ಮುದ್ರಣ ಇರುವ ಕನ್ನಡದಲ್ಲಿ ತಯಾರಿಸಿದ ಸೀಲು-1,10.HEALTH OFFICER Govt. Hospital Kundapra, Udupi Dist. ಎಂದು ಮುದ್ರಣ ಇರುವ ಇಂಗ್ಲೀಷ್‌ನಲ್ಲಿ ತಯಾರಿಸಿದ ಸೀಲು-1,11.REGISTRAR OF MARRIAGE KUNDAPUR ಎಂದು ಮುದ್ರಣ ಇರುವ ಇಂಗ್ಲೀಷ್‌ನಲ್ಲಿ ತಯಾರಿಸಿದ ಸೀಲು-1,12.ಮುಖ್ಯೋಪಾಧ್ಯಾಯರು ಭಾರತ್ ಮಾತಾ ಪ್ರೌಢ ಶಾಲೆ ಮುದೂರು ಉಡುಪಿ ಜಿಲ್ಲೆ ಎಂದು ಮುದ್ರಣ ಇರುವ ಕನ್ನಡದಲ್ಲಿ ತಯಾರಿಸಿದ ಸೀಲು-1,13. Medical Officer and Sun Registrar of Births and Deaths District Hopsital, Udupi District ಎಂದು ಮುದ್ರಣ ಇರುವ ಇಂಗ್ಲೀಷ್‌ನಲ್ಲಿ ತಯಾರಿಸಿದ ಸೀಲು-1,14.ಪಂಚಾಯತ್ ಅಭಿವೃದ್ದಿ ಅಧಿಕಾರಿ ಗ್ರಾಮ ಪಂಚಾಯತ್, ಗೋಪಾಡಿ ಎಂದು ಮುದ್ರಣ ಇರುವ ಕನ್ನಡದಲ್ಲಿ ತಯಾರಿಸಿದ ಸೀಲು-1,15.ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್ ಲೋಕೋಪಯೋಗಿ ಇಲಾಖೆ, ನಂ. 2. 2 ನೇ ಉಪ-ವಿಭಾಗ ಕುಂದಾಪುರ ತಾಲೂಕು ಎಂದು ಮುದ್ರಣ ಇರುವ ಕನ್ನಡದಲ್ಲಿ ತಯಾರಿಸಿದ ಸೀಲು-1,16. ಉಪನೋಂದಣಾಧಿಕಾರಿ ಬೈಂದೂರು ಎಂದು ಮುದ್ರಣ ಇರುವ ಕನ್ನಡದಲ್ಲಿ ತಯಾರಿಸಿದ ಸೀಲು-1,17.ನಿಯೋಜಿತ ಅಧ್ಯಕ್ಷರು ಶಿಕ್ಷಣ ಭಾರತಿ ಕ್ರೆಡಿಟ್ ಸಹಕಾರ ಸಂಘ (ನಿ). ಡೋರ್ ನಂ 3/7, ಶ್ರೀರಾಮ ನಗರ, ಕೋಡಿ, ಕುಂದಾಫುರ ತಾಲೂಕು, ಉಡುಪಿ ಜಿಲ್ಲೆ.18.ಉಪ ತಹಶೀಲ್ದಾರರು ಉಡುಪಿ ಉಡುಪಿ ಜಿಲ್ಲೆ- 576102 ಎಂದು ಮುದ್ರಣ ಇರುವ ಕನ್ನಡದಲ್ಲಿ ತಯಾರಿಸಿದ ಸೀಲು-1,19. ತಾಲೂಕು ಭೂ ಮಾಪಕರು ಕುಂದಾಪುರ ಎಂದು ಮುದ್ರಣ ಇರುವ ಕನ್ನಡದಲ್ಲಿ ತಯಾರಿಸಿದ ಸೀಲು -1,20.ಮದುವೆ ಆಫೀಸರು ಕುಂದಾಪುರ ಆಫೀಸು ಎಂದು ಮುದ್ರಣ ಇರುವ ಕನ್ನಡ ಮತ್ತು ಇಂಗ್ಲೀಷ್ ನಲ್ಲಿ ತಯಾರಿಸಿದ ರೌಂಡ್ ಸೀಲು-1,21.ಗ್ರಾಮ ಪಂಚಾಯತ್ ಬಸ್ರೂರು ಬಸ್ರೂರು 576211 ಕುಂದಾಪುರ ತಾ// ಉಡುಪಿ ಜಿಲ್ಲೆ ಎಂದು ಮುದ್ರಣ ಇರುವ ಕನ್ನಡ ಮತ್ತು ಇಂಗ್ಲೀಷ್ ನಲ್ಲಿ ತಯಾರಿಸಿದ ರೌಂಡ್ ಸೀಲು-1,22.ದಿನಾಂಕ ತಿಂಗಳು ವರ್ಷ ಇರುವ ರಬ್ಬರ್ ಸ್ಟ್ಯಾಂಪ್ -1 ಈ ಎಲ್ಲಾ ಸ್ವತ್ತುಗಳನ್ನು ಮುಂದಿನ ಕಾನೂನು ಕ್ರಮದ ಬಗ್ಗೆ ಪೊಲೀಸರು ಸ್ವಾಧೀನ ಪಡಿಸಿಕೊಂಡಿದ್ದಾರೆ.
ಆಪಾದಿತ ಕೋಡಿ ನಾಗೇಶ್ ಸಾರ್ವಜನಿಕರಿಗೆ ಮೋಸ ಮಾಡುವ ಉದ್ದೇಶದಿಂದ ನಕಲಿಯಾಗಿ ತಯಾರಿಸುವ ದಸ್ತಾವೇಜಿಗೆ ಈ ಸ್ಟ್ಯಾಂಪ್ ಹಾಕಿ ನಕಲಿ ಸರಕಾರಿ ಅಧಿಕಾರಿಯವರ ಸಹಿ ಮಾಡಿ ನೀಡುವುದಾಗಿ ತಿಳಿದು ಬಂದಿರುವುದರಿಂದ ಕಾನೂನು ಕ್ರಮ ಕೈಗೊಳ್ಳುವ ಬಗ್ಗೆ ಪೊಲೀಸರು ವರದಿ ನೀಡಿದ್ದಾರೆ.
ಈ ಬಗ್ಗೆ ಕುಂದಾಪುರ ಪೊಲೀಸ್ ಠಾಣೆಯಲ್ಲಿ ಕಲಂ: 341(2) 318(4) BNS ರಂತೆ ಪ್ರಕರಣ ದಾಖಲಾಗಿದೆ.