
ತಾಳಗುಪ್ಪ : ಶಿವಮೊಗ್ಗ ಜಿಲ್ಲೆ ಸಾಗರ ತಾಲ್ಲೂಕು ಸೊರಬ ವಿಧಾನಸಭಾ ಕ್ಷೇತ್ರದ ತಾಳಗುಪ್ಪ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಪ್ರಾಥಮಿಕ ಅರೋಗ್ಯ ಕೇಂದ್ರವೂ ತಾಳಗುಪ್ಪ ಹೋಬಳಿಯ ಸುತ್ತಮುತ್ತಲಿನ ಗ್ರಾಮಗಳ ಗ್ರಾಮಸ್ಥರನ್ನೂ ಮಾತ್ರವಲ್ಲದೆ ಕಾರವಾರ ಜಿಲ್ಲೆಯ ಸಿದ್ದಾಪುರದ ಮನ್ಮನೆ, ಹಸುವಂತೆ, ನೆಜ್ಜುರು ಗ್ರಾಮಗಳಿಂದ ದಿನನಿತ್ಯ ನೂರಾರು ರೋಗಿಗಳು ತಾಳಗುಪ್ಪ ಪ್ರಾಥಮಿಕ ಅರೋಗ್ಯ ಕೇಂದ್ರವನ್ನೇ ಅವಲಂಬನೆಯಾಗಿದ್ದರೂ ಇಲ್ಲಿ ವೈದ್ಯರುಗಳು, ಔಷಧಿಗಳ ಕೊರತೆ ಎದ್ದು ತೋರುತ್ತಿದೆ.
ಸಮುದಾಯ ಅರೋಗ್ಯ ಕೇಂದ್ರಕ್ಕೆ ವ್ಯವಸ್ಥಿತವಾಗಿ ಎಲ್ಲಾ ರೀತಿಯಲ್ಲಿ ಕೊಠಡಿ ವ್ಯವಸ್ಥೆ ಸಹಿತ ಸಂಪೂರ್ಣ ಸೌಕರ್ಯ ಹೊಂದಿರುವ ಈ ಸರ್ಕಾರಿ ಆಸ್ಪತ್ರೆಯನ್ನುಅಂದಿನ ಅರೋಗ್ಯ ಸಚಿವರಾಗಿದ್ದ ಕಾಗೋಡು ತಿಮ್ಮಪ್ಪ ರವರು ಅಭಿವೃದ್ಧಿ ಪಡಿಸಿದ್ದು ಅವರ ಚಿಂತನೆ ನಿಜಕ್ಕೂ ಹೆಮ್ಮೆಯ ಸಂಗತಿ.
ಈಗಿನ ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳ ಇಚ್ಚಾಶಕ್ತಿ ಕೊರತೆಯಿಂದ ತಾಳಗುಪ್ಪ ಪ್ರಾಥಮಿಕ ಅರೋಗ್ಯ ಕೇಂದ್ರ ಸಮುದಾಯ ಅರೋಗ್ಯ ಕೇಂದ್ರಕ್ಕೆ ಮೇಲ್ದರ್ಜೆಗೆ ಕಾಣದಿರುವ ಬಗ್ಗೆ ತಾಳಗುಪ್ಪ ಹೋಬಳಿಯ ಸುತ್ತಮುತ್ತಲಿನ ಗ್ರಾಮಸ್ಥರು ಬೇಸರ ವ್ಯಕ್ತಪಡಿಸುತ್ತಿರುವುದು ಕಂಡು ಬಂದಿದೆ.
ವರದಿ .✍🏻 ಓಂಕಾರ ಎಸ್. ವಿ. ತಾಳಗುಪ್ಪ