
ಕೋಟ: ದಿನಾಂಕ :26-02-2025 (ಹಾಯ್ ಉಡುಪಿ ನ್ಯೂಸ್ ) ಮೊಳಹಳ್ಳಿ ಗ್ರಾಮದ ಉದಯ ಕುಮಾರ್ ಎಂಬವರಿಗೆ ಕೆಲವರು ಕೊಲೆ ಬೆದರಿಕೆ ಹಾಕಿದ್ದಾರೆ ಎಂದು ಪೊಲೀಸರಿಗೆ ದೂರು ನೀಡಿದ್ದಾರೆ.
ಕುಂದಾಪುರ ತಾಲೂಕು ಮೊಳಹಳ್ಳಿ ಗ್ರಾಮದ ನಿವಾಸಿ ಉದಯ ಕುಮಾರ್ ಎಂಬವರು ದಿನಾಂಕ 25.02.2025 ರಂದು ಮದ್ಯಾಹ್ನ ಹುಣ್ಸೆಮಕ್ಕಿಯ ಹೆಗ್ಡೆ ಬಾರಿಗೆ ಹೋದಾಗ ಅಲ್ಲಿಗೆ ಆರೋಪಿಗಳಾದ 1)ಉಮೇಶ 2)ಪ್ರವೇಶ 3)ರಾಜೇಂದ್ರ ಮೊಳಹಳ್ಳಿ 4)ರಾಜು ಕೈಲ್ಕೇರಿ ಇತರ 10 ಜನರು ಅಕ್ರಮಕೂಟ ಸೇರಿಕೊಂಡು ಬಂದು ಉದಯಕುಮಾರ್ ಅವರನ್ನು ಅಡ್ಡಗಟ್ಟಿ ಅವಾಚ್ಯ ಶಬ್ದಗಳಿಂದ ಬೈದು ಲಾರಿ ಹರಿಸಿ ಕೊಲ್ಲುತ್ತೇನೆಂದು ಜೀವ ಬೆದರಿಕೆ ಹಾಕಿದ್ದಾರೆ ಎಂದು ಪೋಲೀಸರಿಗೆ ದೂರು ನೀಡಿದ್ದಾರೆ.
ಈ ಬಗ್ಗೆ ಕೋಟ ಪೊಲೀಸ್ ಠಾಣೆಯಲ್ಲಿ ಕಲಂ: US 191(2), 126(2), 352, 351(2) ಜೊತೆಗೆ 190 BNS ನಂತೆ ಪ್ರಕರಣ ದಾಖಲಾಗಿದೆ.