Spread the love

ಕುಂದಾಪುರ: ದಿನಾಂಕ: 26-02-2025(ಹಾಯ್ ಉಡುಪಿ ನ್ಯೂಸ್) ಗಂಡ ಹಾಗೂ ಗಂಡನ ಮನೆಯವರು ತವರು ಮನೆಗೆ ಹೋಗಲು ಬಿಡದೆ, ಚಿನ್ನಾಭರಣ ಗಳನ್ನೂ ಕೊಡದೆ ಮಾನಸಿಕ, ದೈಹಿಕ ವಾಗಿ ಹಲ್ಲೆ ಮಾಡಿ ಜೀವ ಬೆದರಿಕೆ ಹಾಕಿದ್ದಾರೆ ಎಂದು ಮಹಿಳೆಯೋರ್ವರು ಪೊಲೀಸರಿಗೆ ದೂರು ನೀಡಿದ್ದಾರೆ.

ಕುಂದಾಪುರ ತಾಲೂಕು, ಹೆಮ್ಮಾಡಿ ಗ್ರಾಮದ ನಿವಾಸಿ ಅಲ್ ಸಫಾ (22) ಎಂಬವರು  ಆರೋಪಿ 1ನೇಯವರಾದ ಇದ್ರೀಸ್ ಎಂಬವರೊಂದಿಗೆ  ದಿನಾಂಕ: 29-10-2020 ರಂದು  ಮದುವೆಯಾಗಿದ್ದು, ಮದುವೆ ನಂತರ  ಅಲ್ ಸಫಾ ರನ್ನು 1 ನೇ ಆರೋಪಿಯು ಆತನ ಮನೆಯಾದ ಕೇರಳದ ಕೋಝಿಕೋಡ್ ರಾಮನಾಟುಕರ  ವಾಯೂರು ಕಾರಾಡ್‌ ಪರಂಬ ಎಂಬಲ್ಲಿಗೆ ಕರೆದುಕೊಂಡು ಹೋಗಿ ಅಲ್ಲಿ ವಾಸ್ತವ್ಯವಿದ್ದರು ಎಂದು ಪೊಲೀಸರಿಗೆ ನೀಡಿದ ದೂರಿನಲ್ಲಿ ಅಲ್ ಸಫಾ ರವರು ತಿಳಿಸಿದ್ದಾರೆ.

ನಂತರ 2020 ಡಿಸೆಂಬರ್ ತಿಂಗಳಲ್ಲಿ ಅಲ್ ಸಫಾರವರು ತವರು ಮನೆಗೆ ಹೋಗಿ ಬರಲು ತನ್ನ ಗಂಡನಲ್ಲಿ ಕೇಳಿ ಮಹಿಳೆಯೋರ್ವರು ಗಂಡ ಹಾಗೂಕೊಂಡಾಗ  1ನೇ ಆರೋಪಿ ಗಂಡ ಇದ್ರೀಸ್ 2ನೇ ಆರೋಪಿ ಅಲ್ ಸಫಾರ ಅತ್ತೆ ರಶೀದಾ, 3ನೇ ಆರೋಪಿ ಮಾವನಾದ ಇಲಿಯಾಸ್ ಅಬ್ಬಾಸ್‌ ಮತ್ತು 4 ನೇ ಆರೋಪಿ ನಾದಿನಿಯಾದ ಇಮಾನಿಯಸ್‌,  ಇವರೆಲ್ಲರು ಸೇರಿ “ನಿನ್ನನ್ನ ಮದುವೆ ಮಾಡಿಕೊಂಡು ಬಂದಿದ್ದು ನಿನ್ನನ್ನ ತವರು ಮನೆಯಲ್ಲಿ ಇರುವುದಕ್ಕಾಗಿ ಅಲ್ಲ” ನಮ್ಮ ಮನೆಯಲ್ಲಿ ಕೆಲಸ ಮಾಡಿಕೊಂಡು ಇರಲು ಎಂಬುದಾಗಿ ಹೇಳಿ ತವರು ಮನೆಗೆ ಹೋಗಲು ಬೀಡದೆ, ಪೋನ್‌ ನಲ್ಲಿ ಮಾತನಾಡಲು ಬಿಡುತ್ತಿರಲಿಲ್ಲ ಎಂದು ಪೊಲೀಸರಿಗೆ ನೀಡಿದ ದೂರಿನಲ್ಲಿ ಅಲ್ ಸಫಾ ತಿಳಿಸಿದ್ದಾರೆ .

ನಂತರ 1 ನೇ ಆರೋಪಿ ಗಂಡ ಇದ್ರೀಸ್  ನು ತನ್ನ ಮೀನಿನ ವ್ಯವಹಾರಕ್ಕೆ ಹಣಬೇಕು ಎಂದು ಅಲ್ ಸಫಾ ರ ಚಿನ್ನಾಭರಣಗಳನ್ನು ಪಡೆದುಕೊಂಡು ಮಾರಾಟ ಮಾಡಿ ಬಂದ ಹಣವನ್ನು ಅವರೇ ಪಡೆದುಕೊಂಡಿದ್ದು, ನಂತರ ಚಿನ್ನಾಭರಣವನ್ನು  ಕೊಡುವಂತೆ ಕೇಳಿದಕ್ಕೆ , ಚಿನ್ನಾಭರಣದ ಬಗ್ಗೆ ಪದೇ ಪದೇ ಕೇಳಿದಲ್ಲಿ ನಿನ್ನನ್ನು ಜೀವ ಸಹಿತ ಬಿಡುವುದಿಲ್ಲವಾಗಿ ಜೀವ ಬೇದರಿಕೆ ಹಾಕಿರುತ್ತಾರೆ ಎಂದು ದೂರಿನಲ್ಲಿ ತಿಳಿಸಿದ್ದಾರೆ.

2024 ರಲ್ಲಿ ವಿದೇಶಕ್ಕೆ ತೆರಳಿದ್ದ 1 ನೇ ಆರೋಪಿ ಗಂಡ ಇದ್ರೀಸ್ ನು ವಿದೇಶದಿಂದ ಊರಿಗೆ ಬಂದಾಗ ದಿನಾಂಕ 05/02/2024 ರಂದು ಆರೋಪಿ ಗಂಡ ಇದ್ರೀಸ್ , ಅತ್ತೆ ರಶೀದಾ,ನಾದಿನಿ ಇಮಾನಿಯಸ್ ಯವರೊಂದಿಗೆ ಕುಂದಾಪುರ ಹೆಮ್ಮಾಡಿ ಗ್ರಾಮದಲ್ಲಿರುವ  ಅಲ್ ಸಫಾರ ತವರು ಮನೆಗೆ ಬಂದಿದ್ದು,  ತವರು ಮನೆಯಲ್ಲಿ ಸ್ವಲ್ಪ ದಿನ ಇದ್ದು ವಾಪಾಸ್ಸು ಬರುವುದಾಗಿ ಹೇಳಿದ್ದಕ್ಕೆ ಗಂಡ, ಅತ್ತೆ,ನಾದಿನಿ ಆರೋಪಿತರೆಲ್ಲರೂ ಸೇರಿ ಹಲ್ಲೆ ಮಾಡಿ ಬಲವಂತವಾಗಿ ಗಂಡನ ಮನೆಗೆ ಕರೆದುಕೊಂಡು ಹೋಗಿ ಹಿಂದಿನ ರೀತಿಯಲ್ಲೇ ಮಾನಸಿಕ ಹಿಂಸೆ ನೀಡಿರುತ್ತಾರೆ ಎಂದು ದೂರಿದ್ದಾರೆ.

ನಂತರ ದಿನಾಂಕ 03-02-2025 ರಂದು ಅಲ್ ಸಫಾ ರನ್ನು ಹಾಗೂ ಮೊಮ್ಮಕ್ಕಳನ್ನು ನೋಡಲು ಅವರ ತಂದೆ ತಾಯಿ ಆರೋಪಿತರ ಕೇರಳದ ಮನೆಗೆ ಹೋದಾಗ ಆರೋಪಿತರುಗಳು ಅವಾಚ್ಯವಾಗಿ ಬೈದು ಬೆದರಿಕೆ ಹಾಕಿರುತ್ತಾರೆ ಎಂದು ಅಲ್ ಸಫಾ ಪೊಲೀಸರಿಗೆ ದೂರು ನೀಡಿದ್ದಾರೆ.

ಈ ಬಗ್ಗೆ ಕುಂದಾಪುರ ಪೊಲೀಸ್‌ ಠಾಣೆಯಲ್ಲಿ ಕಲಂ: 85, 115(2), 351(2), 352 ಜೊತೆಗೆ 3(5) BNS ನಂತೆ ಪ್ರಕರಣ ದಾಖಲಾಗಿದೆ.

error: No Copying!