Spread the love

ಮಣಿಪಾಲ: ದಿನಾಂಕ :25/02/2025(ಹಾಯ್ ಉಡುಪಿ ನ್ಯೂಸ್) ಬ್ಯಾಕಸ್ ಇನ್ ಬಾರ್ ಗೆ ತಡರಾತ್ರಿ ನುಗ್ಗಿದ ಯುವಕರ ತಂಡವೊಂದು ನೌಕರರಿಗೆ ಹಲ್ಲೆ ನಡೆಸಿದೆ ಎಂದು ಬಾರ್ ನ ನೌಕರರು ಪೊಲೀಸರಿಗೆ ದೂರು ನೀಡಿದ್ದಾರೆ.

ಉಡುಪಿ ತಾಲೂಕು ಶಿವಳ್ಳಿ ಗ್ರಾಮದ ಮಣಿಪಾಲ ಬ್ಯಾಕಸ್‌ ಇನ್‌ ಬಾರ್‌ ಬಳಿ ದಿನಾಂಕ :23-02-2025 ರಂದು ತಡ ರಾತ್ರಿಗೆ ಪ್ರಸಾದ್‌ ಎಂಬವ  ಹಾಗೂ ಇತರ  5 ಜನ ಅಪರಿಚಿತ ಗಂಡಸರು KA-20 MD-0617 ನೇ ಕಾರಿನಲ್ಲಿ ಬಂದು ಅಕ್ರಮಕೂಟ ಸೇರಿಕೊಂಡು ಬಾರ್‌ನ ಗೇಟನ್ನು ತೆಗೆಯುವಂತೆ ಸೆಕ್ಯೂರಿಟಿ ಗಾರ್ಡ್‌ ಮನೀಶ್‌ ಎಂಬಾತನಿಗೆ ಗದರಿಸಿ 6 ಜನರೂ ಬಲತ್ಕಾರವಾಗಿ ಗೇಟನ್ನು ದೂಡಿ ಬಾರ್‌ನ ಕಾಂಪೌಂಡ್‌ ಒಳಗೆ ಅಕ್ರಮ ಪ್ರವೇಶ ಮಾಡಿದ್ದಾರೆ ಎಂದು ಪೊಲೀಸರಿಗೆ ನೀಡಿದ ದೂರಿನಲ್ಲಿ ತಿಳಿಸಿದ್ದಾರೆ.

ಬಾರ್ ನ ಕಂಪೌಂಡ್ ಒಳಗೆ ಅಕ್ರಮ ಪ್ರವೇಶ ಮಾಡಿದ ಆರು ಜನರು ಸೆಕ್ಯೂರಿಟಿ ಗಾರ್ಡನ್ನು ಅಡ್ಡಗಟ್ಟಿ ಆತನ ಎಡ ಕೆನ್ನೆಗೆ ಕೈಯಿಂದ ಹೊಡೆದು ಆತನನ್ನು ದೂಡಿರುತ್ತಾರೆ. ಆಗ ಬಾರ್ ನ ಸಿಬ್ಬಂದಿ  ಆನಂದ (59)  ಅವರು ಹಾಗೂ ಬಾರ್‌ನ ಇತರ ಸಿಬ್ಬಂದಿಯವರು ಅಲ್ಲಿಗೆ ಬಂದಾಗ ಅವರಿಗೆಲ್ಲ ಅವಾಚ್ಯ ಶಬ್ದಗಳಿಂದ ಬೈದಿರುತ್ತಾರೆ ಹಾಗೂ ಗೇಟ್‌ ದೂಡುವಾಗ ಸೆಕ್ಯೂರಿಟಿ ಗಾರ್ಡ್‌ ಮನೀಶ್‌ನ ಕೆನ್ನೆಗೆ ತಾಗಿ ಗಾಯವಾಗಿ ರಕ್ತ ಬಂದಿದೆ ಎಂದು ಪೊಲೀಸರಿಗೆ ದೂರು ನೀಡಿದ್ದಾರೆ.

ಈ ಬಗ್ಗೆ ಮಣಿಪಾಲ ಪೊಲೀಸ್‌ ಠಾಣೆಯಲ್ಲಿ  126(2).115, (2),352, 329, (3) ಜೊತೆಗೆ 190 BNS ರಂತೆ ಪ್ರಕರಣ ದಾಖಲಾಗಿದೆ.

error: No Copying!