
ಕುಂದಾಪುರ: ದಿನಾಂಕ:23-02-2025(ಹಾಯ್ ಉಡುಪಿ ನ್ಯೂಸ್) ಪೋಲ ನಾಗಾಂಜಿನೇಯುಲು (33) ಎಂಬವರು ಕುಂದಾಪುರ ತಾಲೂಕು ದಕ್ಷಿಣ ವಿಭಾಗದ ಅಂಚೆ ನಿರೀಕ್ಷಕರಾಗಿ ಕರ್ತವ್ಯ ನಿರ್ವಹಿಸಿಕೊಂಡಿರುತ್ತಾರೆ ಎಂದು ಪೊಲೀಸರಿಗೆ ನೀಡಿದ ದೂರಿನಲ್ಲಿ ತಿಳಿಸಿದ್ದಾರೆ.
ಕುಂದಾಪುರ ತಾಲೂಕು ಹಳ್ನಾಡು ಗ್ರಾಮದ ಬಡಾಬೆಟ್ಟು ಎಂಬಲ್ಲಿರುವ ಹಳ್ನಾಡು ಬ್ರಾಂಚ್ ಪೋಸ್ಟ್ ಆಫೀಸ್ ನಲ್ಲಿ ಕಿರಣ್ ಕುಮಾರ್ ಎಂಬುವವರು ದಿನಾಂಕ 28/06/2013 ರಿಂದ ದಿನಾಂಕ 26/09/2014 ರವರೆಗೆ ಅಂಚೆ ಪಾಲಕನಾಗಿ ಸರ್ಕಾರಿ ಕರ್ತವ್ಯ ನಿರ್ವಹಿಸಿಕೊಂಡಿರುತ್ತಾರೆ ಎಂದಿದ್ದಾರೆ
ಇವರ ಕರ್ತವ್ಯದ ಅವಧಿಯಲ್ಲಿ ತನ್ನ ಅಧಿಕಾರವನ್ನು ದುರುಪಯೋಗಪಡಿಸಿಕೊಂಡು ದಿನಾಂಕ 05/02/2019 ಮತ್ತು 06/03/2019 ರಂದು ದಿನೇಶ್ ದೇವಾಡಿಗ ಎಂಬುವವರ ಎಸ್.ಬಿ ಖಾತೆಗೆ ಜಮಾ ಮಾಡಲು ನೀಡಿದ ಮೊತ್ತ 6,000/- ರೂಪಾಯಿ, ದಿನಾಂಕ: 05/06/2019 ರಂದು ಮಹಾಬಲ ಎಂಬುವವರ ಎಸ್.ಬಿ ಖಾತೆಗೆ ಜಮಾ ಮಾಡಲು ನೀಡಿದ ಮೊತ್ತ 2,000/- ರೂಪಾಯಿ, ದಿನಾಂಕ 28/06/2018 ಮತ್ತು 13/12/2018 ರಂದು ಮುತ್ತು ಎಂಬವರ ಎಸ್.ಬಿ ಖಾತೆಗೆ ಜಮಾ ಮಾಡಲು ನೀಡಿದ ಒಟ್ಟು ಮೊತ್ತ 15,500/- ರೂಪಾಯಿ, ದಿನಾಂಕ: 02/08/2019 ರಂದು ಕು.ಆರಾಧ್ಯ ಎಂಬವರ ಸುಕನ್ಯ ಸಮೃದ್ದಿ ಖಾತೆಗೆ ಜಮಾ ಮಾಡಲು ನೀಡಿದ ಮೊತ್ತ 4,000/- ರೂಪಾಯಿ, ದಿನಾಂಕ: 22/08/2019 ರಂದು ಮೊಗವೀರ ಎಂಬವರ ಎಸ್.ಬಿ ಖಾತೆಯಲ್ಲಿದ್ದ 4,000/- ರೂಪಾಯಿ ಹಣವನ್ನು ಹಾಗೂ ದಿನಾಂಕ 28/08/2017 ರಿಂದ 05/06/2019 ರವರ ನಡುವೆ ನಾಗಶ್ರೀ ಎಂಬವರು ಪ್ರತಿ ತಿಂಗಳು ತಮ್ಮ ಸುಕನ್ಯ ಸಮೃದ್ದಿ ಖಾತೆಗೆ ಜಮಾ ಮಾಡಲು ನೀಡಿದ ಒಟ್ಟು ಮೊತ್ತ 46,000/- ರೂಪಾಯಿ ಹಣವನ್ನು ತನ್ನ ಸ್ವಂತಕ್ಕೆ ಬಳಸಿಕೊಂಡಿರುತ್ತಾರೆ. ಕಿರಣ್ ಕುಮಾರ್‌ರವರು ತನ್ನ ಕರ್ತವ್ಯದ ಅವಧಿಯಲ್ಲಿ ಒಟ್ಟು ಮೊತ್ತ 77,500/- ರೂಪಾಯಿ ಹಣವನ್ನು ಅಂಚೆ ಕಛೇರಿಯ ಖಾತೆಗೆ ಜಮಾ ಮಾಡದೇ ತನ್ನ ಸ್ವಂತಕ್ಕೆ ಉಪಯೋಗಿಸಿಕೊಂಡು ನಂಬಿಕೆ ದ್ರೋಹ ಎಸಗಿರುವುದಾಗಿ ನೀಡಿದ ದೂರಿನಂತೆ ಕುಂದಾಪುರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಕಲಂ: 409 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.