Spread the love
  • ಉಡುಪಿ: ದಿನಾಂಕ:22-02-2025(ಹಾಯ್ ಉಡುಪಿ ನ್ಯೂಸ್) ಪೊಲೀಸರ ಸೂಚನೆಯ ಮೇರೆಗೂ ತಡ ರಾತ್ರಿ ಮೆಹೆಂದಿ ಕಾರ್ಯಕ್ರಮದಲ್ಲಿ ಡಿ.ಜೆ ಸೌಂಡ್ ಬಳಕೆ ಮಾಡಿದ್ದಾರೆ ಎಂದು ಪೊಲೀಸರು ದೂರು ದಾಖಲಿಸಿದ್ದಾರೆ.
  • ಉಡುಪಿ ನಗರ ಪೊಲೀಸ್ ಠಾಣೆಯ ಹೆಡ್‌ ಕಾನ್ ಸ್ಟೇಬಲ್‌‌ ಆಗಿ ಕರ್ತವ್ಯ ನಿರ್ವಹಿಸಿಕೊಂಡಿರುವ ಶಂಕರ್ ಅವರು ಮೇಲಾಧಿಕಾರಿಗಳ ಆದೇಶದಂತೆ ದಿನಾಂಕ 20/02/2025 ರಂದು ಕರ್ತವ್ಯದಲ್ಲಿದ್ದು  ಅಂದು  ರಾತ್ರಿ 10:28 ಗಂಟೆಗೆ ಸಾರ್ವಜನಿಕರಿಂದ ದೂರು ಬಂದ ಮೇರೆಗೆ ಉಡುಪಿ ಪುಲಿಮಾರು ಜಂಕ್ಷನ್‌ ನಲ್ಲಿ ಡಿ.ಜೆ. ಸೌಂಡ್‌ ನಿಂದ ತೊಂದರೆಯಾಗುತ್ತಿರುವ ಬಗ್ಗೆ ಬಂದ ದೂರು ಆದಾಗಿದ್ದು ,ಅದರಂತೆ  ಶಂಕರ್ ರವರು ಮತ್ತು ಜೀಪು ಚಾಲಕರು ಮೂಡನಿಡಂಬೂರು ಗ್ರಾಮದ ಕಾಡಬೆಟ್ಟು ಪುಲಿಮಾರು ಜಂಕ್ಷನ್‌ ತಲುಪಿ ಹುಡುಕಾಡಿ ನೋಡಿದಾಗ ಡಿ.ಜೆ. ಸೌಂಡ್‌ ಕೇಳಿ ಬರುತ್ತಿರುವ ಸ್ಥಳವು ಕಿರಿದಾದ ರಸ್ತೆಯಾಗಿದ್ದು ಅಲ್ಲಿಗೆ  ವಾಹನವು ಹೋಗಲು ಅಸಾಧ್ಯವಾದ ಕಾರಣ ವಾಹನವನ್ನು ಪುಲಿಮಾರು ಜಂಕ್ಷನ್‌ ನಲ್ಲಿಯೇ ನಿಲ್ಲಿಸಿ ಡಿ.ಜೆ. ಸೌಂಡ್‌ ಕೇಳಿ ಬರುತ್ತಿರುವ ಸ್ಥಳವನ್ನು ಹುಡುಕುತ್ತಾ ನಡೆದುಕೊಂಡು ಹೋದ ಸಮಯ ನಿತಿನ್‌ ರಾಜ್‌ (30), ಮೂಡ ನಿಡಂಬೂರು ಗ್ರಾಮ, ಉಡುಪಿ ಎಂಬವರ ವಿಳಾಸದಲ್ಲಿ ಮೆಹಂದಿ ಕಾರ್ಯಕ್ರಮ ನಡೆಯುತ್ತಿತ್ತು ಎಂದು ದೂರಿನಲ್ಲಿ ತಿಳಿಸಿದ್ದಾರೆ.
  • ಆ ಸಮಯ ರಾತ್ರಿ 11:00 ಗಂಟೆ ಆಗಿರುತ್ತದೆ. ರಾತ್ರಿ 10 ಗಂಟೆಯವರೆಗೆ ಮಾತ್ರ ಧ್ವನಿ ವರ್ಧಕ ಬಳಸಲು ಅವಕಾಶವಿದ್ದು ಕೂಡಲೇ ಡಿ.ಜೆ. ಸೌಂಡ್‌ ಬಳಕೆ ನಿಲ್ಲಿಸುವಂತೆ ದೂರು ಬಂದಿರುವುದಾಗಿ ಪೊಲೀಸರು ತಿಳಿಸಿದ್ದು, ಆ ಸಮಯ ಆ ಸ್ಥಳದಲ್ಲಿ ಡಿ.ಜೆ. ಮೂಲಕ ಸೌಂಡ್‌ ಚಾಲನೆ ಮಾಡುತ್ತಿದ್ದ ರಾಕೇಶ್‌ ಕುಮಾರ್‌, ಉದ್ಯಾವರ ಎಂಬಾತನು ಯಾವುದೇ ಪ್ರತಿಕ್ರಿಯೆ ನೀಡದೇ ಡಿ.ಜೆ. ಬಳಕೆ ಮುಂದುವರಿಸಿದ್ದು , ರಾತ್ರಿ 10:00 ಗಂಟೆಯ ಬಳಿಕ ಡಿ.ಜೆ.ಸೌಂಡ್‌ ಹಾಗೂ ಧ್ವನಿ ವರ್ಧಕ ಬಳಸಲು ಅನುಮತಿ ಇಲ್ಲದಿದ್ದರೂ ಕೂಡ ರಾತ್ರಿ 11:00 ಗಂಟೆಯವರೆಗೆ ಡಿ.ಜೆ. ಸೌಂಡ್‌ ಬಳಸಿ ಸಾರ್ವಜನಿಕರಿಗೆ ತೊಂದರೆ ನೀಡುತ್ತಿದ್ದ ಬಗ್ಗೆ ಕರ್ತವ್ಯದಲ್ಲಿದ್ದ ಪೊಲೀಸರು ದೂರು ನೀಡಿದ್ದಾರೆ.
  • ಈ ಬಗ್ಗೆ ಉಡುಪಿ ನಗರ ಪೊಲೀಸ್‌ ಠಾಣೆಯಲ್ಲಿ ಕಲಂ: 109 kp act & 292 BNS ರಂತೆ ಪ್ರಕರಣ ದಾಖಲಾಗಿದೆ.
error: No Copying!