Spread the love

ಉಡುಪಿ: ದಿನಾಂಕ :21-02-2025(ಹಾಯ್ ಉಡುಪಿ ನ್ಯೂಸ್) ಫೈನಾನ್ಸ್ ಸಂಸ್ಥೆಯೊಂದರಲ್ಲಿ ಸಾಲ ಪಡೆದ ಗ್ರಾಹಕರೋರ್ವರು ನಕಲಿ ದಾಖಲೆಗಳನ್ನು ಸೃಷ್ಟಿಸಿ ಫೈನಾನ್ಸ್ ಸಂಸ್ಥೆಗೆ ವಂಚನೆ ನಡೆಸಿದ್ದಾರೆ ಎಂದು ನವೀನ್‌ ಕುಮಾರ್‌ ಎಂಬವರು ಪೊಲೀಸರಿಗೆ ದೂರು ನೀಡಿದ್ದಾರೆ .

ಉಡುಪಿ,ಅಂಬಲಪಾಡಿ ಗ್ರಾಮದ ನಿವಾಸಿ ನವೀನ್ ಕುಮಾರ್ (55) ಎಂಬವರು  ಅಂಬಲಪಾಡಿಯ ಸುರಭಿ ಲೋಟಸ್‌ನ ಮೊದಲನೇ ಮಹಡಿಯಲ್ಲಿರುವ ಶ್ರೀ ರಾಮ್‌ ಪೈನಾನ್ಸ್‌ ಲಿಮಿಟೆಡ್‌ ಶಾಖೆಯ ಜಿ.ಪಿ.ಎ. ಹೋಲ್ಡರ್‌ ರವರಾಗಿರುತ್ತಾರೆ ಎಂದು ಪೊಲೀಸರಿಗೆ ನೀಡಿದ ದೂರಿನಲ್ಲಿ ತಿಳಿಸಿದ್ದಾರೆ.

ದಿನಾಂಕ :22/05/2023 ರಂದು ಆರೋಪಿತ ಮೊಹಮ್ಮದ್‌ ಜಾಹಿದ್‌ ಎಂಬವರು ನವೀನ್ ಕುಮಾರ್ ರವರ ಪೈನಾನ್ಸಿಗೆ ಬಂದು KA-19-ML-075̧6 HYUNDAI I20 SPORTZ PLUS BS6 ಕಾರಿನ ಮೇಲೆ 6,50,000/- ಅಸಲು ಹಾಗೂ 2,75,557 ಬಡ್ಡಿ ಒಟ್ಟು 9,25,557/- ರೂಪಾಯಿಗಳನ್ನು ಸಾಲದ ರೂಪದಲ್ಲಿ ಕೇಳಿ ಪೈನಾನ್ಸಿನ ಕರಾರಿನ ಪತ್ರವನ್ನು ಓದಿ ತಿಳಿದು ಸಹಿ ಹಾಕಿ ಸಾಲವನ್ನು ಪಡೆದುಕೊಂಡಿರುತ್ತಾನೆ ಎಂದು ದೂರಿನಲ್ಲಿ ತಿಳಿಸಿದ್ದಾರೆ.

ಈ ಸಾಲಕ್ಕೆ ಮೊಹಮ್ಮದ್‌ ಅಬೀದ್‌ ಎಂಬವ ಜಾಮೀನುದಾರನಾಗಿರುತ್ತಾನೆ ಎಂದಿದ್ದಾರೆ. ನವೆಂಬರ್‌ ತಿಂಗಳಿನಲ್ಲಿ ಲೆಕ್ಕ ಪರಿಶೋಧನೆಯ ತಂಡದವರು ತಿಳಿಸಿದಂತೆ ಆರೋಪಿಗಳು ಒಟ್ಟು ಸೇರಿಕೊಂಡು ಸಂಸ್ಥೆಗೆ ಸಂಬಂಧಪಟ್ಟ ಲೆಟರ್‌ ಹೆಡ್‌ ನ್ನು ನಕಲು ಪ್ರತಿ ಮಾಡಿ ಅದರಲ್ಲಿ ನಿರಪೇಕ್ಷಣಾ ಪತ್ರ ತಯಾರಿಸಿ ಸಂಸ್ಥೆಗೆ ಸಂಬಂಧಪಟ್ಟ ಮುದ್ರೆಯನ್ನು ನಕಲು ಸೃಷ್ಠಿಸಿ ಸಂಸ್ಥಗೆ ಸಂಬಂಧ ಪಡದೆ ಇರುವ ವ್ಯಕ್ತಿಯಿಂದ ಸಹಿ ಹಾಕಿಸಿಕೊಂಡು ಸಂಸ್ಥೆಗೆ ನಮೂದಾಗಿದ್ದ ಹೈಪೋತಿಕೇಶನನ್ನು ತೆರವುಗೊಳಿಸಿ, ಆರ್.ಟಿ.ಓ. ಸಂಸ್ಥೆಯ ಫಾರ್ಮು ನಂ.29, 30, ಮತ್ತು 35 ರಲ್ಲಿ ಬೇಕಾದ ರೀತಿಯಲ್ಲಿ ಸಂಸ್ಥೆಯ ಮುದ್ರೆ ಹಾಗೂ ನಕಲಿ ಸಹಿ ಬಳಸಿಕೊಂಡು ಆರೋಪಿ ಮೊಹಮ್ಮದ್ ಜಾಹಿದ್ ನ  ಹೆಸರಿನಲ್ಲಿದ್ದ ಆರ್.ಸಿ. ಯನ್ನು ಆರೋಪಿ 2 ನೇ ಮೊಹಮ್ಮದ್‌ ಅಬೀದ್‌ ನ ಹೆಸರಿಗೆ ವರ್ಗಾಯಿಸಿ, ಉಡುಪಿ ಮುದ್ರಕರ ಸೌಹರ್ದ ದಲ್ಲಿ ಮೇಲಿನ ವಾಹನದ ಮೇಲೆ ಮರು ಸಾಲವನ್ನು ಮಾಡಿ ಹೈಪೋತಿಕೇಶನ್‌ ನಮೂದನ್ನು ಅವರ ಸಂಸ್ಥೆಗೆ ಮಾಡಿಸಿಕೊಂಡು ಆರೋಪಿಗಳಿಬ್ಬರು ನವೀನ್ ಕುಮಾರ್ ರವರ ಸಂಸ್ಥೆಗೆ ಪೋರ್ಜರಿ, ಮೋಸ, ವಂಚನೆ ನಂಬಿಕೆ ದ್ರೋಹ ಎಸಗಿದ್ದಾರೆ ಎಂದು ಪೊಲೀಸರಿಗೆ ದೂರು ನೀಡಿದ್ದಾರೆ.

ನವೀನ್ ಕುಮಾರ್ ಅವರು ನೀಡಿದ ದೂರಿನಂತೆ ಉಡುಪಿ ನಗರ ಪೊಲೀಸ್‌ ಠಾಣೆಯಲ್ಲಿ  ಕಲಂ: 465, 468, 471, 420 ಜೊತೆಗೆ 34 ಐಪಿಸಿಯಂತೆ ಪ್ರಕರಣ ದಾಖಲಾಗಿದೆ.

error: No Copying!