Spread the love

ಉಡುಪಿ: ದಿನಾಂಕ :21/02/2025(ಹಾಯ್ ಉಡುಪಿ ನ್ಯೂಸ್) ನಗರದ ಫಿಶ್ ಮಾರ್ಕೆಟ್ ಬಳಿ ಮಟ್ಕಾ ಜುಗಾರಿ ಆಟ ನಡೆಸುತ್ತಿದ್ದ ವ್ಯಕ್ತಿಯನ್ನು ಉಡುಪಿ ನಗರ ಪೊಲೀಸ್ ಠಾಣೆಯ  ಪೊಲೀಸ್‌ ಉಪನಿರೀಕ್ಷಕರಾದ (ಕಾನೂನು & ಸುವ್ಯವಸ್ಥೆ) ಪುನೀತ್ ಕುಮಾರ ಅವರು ಬಂಧಿಸಿದ್ದಾರೆ.

  • ಉಡುಪಿ ನಗರ ಪೊಲೀಸ್ ಠಾಣೆ ಪೊಲೀಸ್ ಉಪ ನಿರೀಕ್ಷಕರಾದ (ಕಾನೂನು ಮತ್ತು ಸುವ್ಯವಸ್ಥೆ) ಪುನೀತ್ ಕುಮಾರ ಅವರು ದಿನಾಂಕ:20-02-2025 ರಂದು ಸಿಬ್ಬಂದಿಯವರೊಂದಿಗೆ ರೌಂಡ್ಸ್‌ ಕರ್ತವ್ಯದಲ್ಲಿ ಇರುವಾಗ ಶಿವಳ್ಳಿ ಗ್ರಾಮದ ಫಿಶ್‌ ಮಾರ್ಕೇಟ್‌ ಬಳಿ ಮಟ್ಕಾ ಜುಗಾರಿ ಆಟ ನಡೆಯುತ್ತಿರುವ  ಬಗ್ಗೆ ಸಾರ್ವಜನಿಕರು ಮಾಹಿತಿ ನೀಡಿದ ಮೇರೆಗೆ ಕೂಡಲೇ ಸ್ಥಳಕ್ಕೆ ಸಿಬ್ಬಂದಿಗಳೊಂದಿಗೆ ದಾಳಿ ನಡೆಸಿದ್ದಾರೆ .
  • ಮಾಹಿತಿ ಬಂದ ಸ್ಥಳದಲ್ಲಿ ಮಟ್ಕಾ ಜುಗಾರಿ ಆಟಕ್ಕೆ ಹಣ ಸಂಗ್ರಹಿಸಿ ಚೀಟಿ ಬರೆದು ಕೊಡುತ್ತಿದ್ದ ಆರೋಪಿ ಗಣಪತಿ ಎಂಬಾತನನ್ನು ಬಂಧಿಸಿ ವಿಚಾರಣೆ ನಡೆಸಿದಾಗ  ಆತನು ನಾನು ಕಮಿಷನ್‌ ಹಣಕ್ಕಾಗಿ ದಿವಾಕರ ಎಂಬಾತ ತಿಳಿಸಿದಂತೆ ಸಾರ್ವಜನಿಕರಿಂದ ಮಟ್ಕಾ ಜುಗಾರಿ ಆಟದ ಬಗ್ಗೆ ಅಂಕೆ ಸಂಖ್ಯೆಗಳ ಮೇಲೆ ಹಣ ಹೂಡುವಂತೆ ಹೇಳಿ ಚೀಟಿಯಲ್ಲಿ ನಮೂದು ಮಾಡಿಕೊಂಡು ಹಣವನ್ನು ಸಂಗ್ರಹಿಸುತ್ತಿರುವುದಾಗಿ ತಿಳಿಸಿರುತ್ತಾನೆ ಎನ್ನಲಾಗಿದೆ.ಆತ ಸಂಗ್ರಹಿಸಿದ ಹಣವನ್ನು ದಿವಾಕರ ಎಂಬವನಿಗೆ ಕೊಡುತ್ತಿರುವುದಾಗಿ ವಿಚಾರಣೆಯಲ್ಲಿ ತಿಳಿಸಿದ್ದಾನೆ ಎನ್ನಲಾಗಿದೆ.
  • ಆಪಾದಿತ ಗಣಪತಿಯ ಬಳಿ ಮಟ್ಕಾ ಜುಗಾರಿ ಆಟಕ್ಕೆ ಸಂಗ್ರಹಿಸಿದ ನಗದು ಹಣ ರೂಪಾಯಿ 1280/- ಮತ್ತು ಮಟ್ಕಾ ನಂಬ್ರ ಬರೆದ ಪೇಪರ್‌, ಬಾಲ್‌ ಪೆನ್‌,ಸ್ಲೇಟ್‌ ಸ್ವಾಧೀನಪಡಿಸಿಕೊಂಡಿದ್ದಾರೆ. ಈ ಬಗ್ಗೆ ಉಡುಪಿ ನಗರ ಪೊಲೀಸ್‌ ಠಾಣೆಯಲ್ಲಿ  ಕಲಂ: 78(i)(III) kp act & 112 BNS ರಂತೆ ಪ್ರಕರಣ ದಾಖಲಾಗಿದೆ.

error: No Copying!