Spread the love

ಕಾರ್ಕಳ: ದಿನಾಂಕ:13-02-2025 (ಹಾಯ್ ಉಡುಪಿ ನ್ಯೂಸ್) ಕಸಬಾ ಗ್ರಾಮದ ನಿವಾಸಿ ಯೋರ್ವರು ಅಕ್ರಮವಾಗಿ ಮರಗಳನ್ನು ಕಡಿದಿರುವ ಬಗ್ಗೆ ಅರಣ್ಯ ಇಲಾಖೆಗೆ ಮಾಹಿತಿ ನೀಡಿದ್ದ ಪರಿಶಿಷ್ಟ ಜಾತಿಯ ಯುವಕನೋರ್ವನಿಗೆ ಕೊಲೆ ಬೆದರಿಕೆ ಹಾಕಿದ್ದಾರೆ ಎಂದು ದೂರು ದಾಖಲಾಗಿದೆ.

ಕಾರ್ಕಳ ತಾಲೂಕು ಮಿಯ್ಯಾರು ಗ್ರಾಮದ ನಿವಾಸಿ ಪ್ರಶಾಂತ್ (35) ಎಂಬವರು ಪರಿಶಿಷ್ಟ ಜಾತಿಯ ಆದಿದ್ರಾವಿಡ ಸಮುದಾಯಕ್ಕೆ ಸೇರಿದವರಾಗಿದ್ದಾರೆ ಎಂದು ಪೊಲೀಸರಿಗೆ ನೀಡಿದ ದೂರಿನಲ್ಲಿ ತಿಳಿಸಿದ್ದಾರೆ.

ಆಪಾದಿತ ಕೃಷ್ಣ ಎಂಬವನು ಕಾರ್ಕಳ ತಾಲೂಕು ಕಸಬಾ ಗ್ರಾಮದ ಜೋಗುಳಬೆಟ್ಟು ಎಂಬಲ್ಲಿ ಮೀಸಲು ಅರಣ್ಯ ಪ್ರದೇಶದ ಸ.ನಂ 354 ರಲ್ಲಿ ಜೆಸಿಬಿ ತಂದು ಅಗೆದು ಸಮತಟ್ಟು ಮಾಡಿ ಅದರಲ್ಲಿರುವ ಮರಗಳನ್ನು ಕಡಿದು ಮಾರಾಟ ಮಾಡಿದ್ದು, ಈ ಬಗ್ಗೆ  ಪ್ರಶಾಂತರವರು ಅರಣ್ಯಾಧಿಕಾರಿಯವರಿಗೆ ದಿನಾಂಕ 11/02/2025 ರಂದು ಮೌಖಿಕವಾಗಿ ದೂರು ನೀಡಿರುತ್ತಾರೆ ಎಂದು ದೂರಿನಲ್ಲಿ ತಿಳಿಸಿದ್ದಾರೆ.

ದಿನಾಂಕ 11/2/2025 ರಂದು ರಾತ್ರಿ  ಪ್ರಶಾಂತರವರು ಜೋಗುಳಬೆಟ್ಟು ಮೈದಾನದ ಪಕ್ಕದ ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿರುವಾಗ, ಆಪಾದಿತ ಕ್ರಿಷ್ಣನು ಬೈಕಿನಲ್ಲಿ ಪ್ರಶಾಂತರವರನ್ನು ಹಿಂಬಾಲಿಸಿಕೊಂಡು ಬಂದು  ಅರಣ್ಯಾಧಿಕಾರಿಗೆ ಬಾರಿ ದೂರು ಕೊಡುತ್ತೀಯಾ, ಎಂದು ಅವಾಚ್ಯ ಶಬ್ದಗಳಿಂದ ಜಾತಿ ಬಗ್ಗೆ ಬೈದು,  ಜಾತಿನಿಂದನೆ ಮಾಡಿ, ಮೈದಾನಕ್ಕೆ ಬಂದರೆ ಕೊಲೆ ಮಾಡುವುದಾಗಿ ಜೀವ ಬೆದರಿಕೆ ಹಾಕಿದ್ದಾನೆ ಎಂದು ಪೊಲೀಸರಿಗೆ ದೂರು ನೀಡಿದ್ದಾರೆ.

ಈ ಬಗ್ಗೆ ಕಾರ್ಕಳ ನಗರ ಪೊಲೀಸ್‌ ಠಾಣೆಯಲ್ಲಿ  ಕಲಂ: 352, 351 BNS and 3(1)(r)(s),3(2)(v-a) SC/ST (POA) Act. ರಂತೆ ಪ್ರಕರಣ ದಾಖಲಾಗಿದೆ..

error: No Copying!