
ಕುಂದಾಫುರ: ದಿನಾಂಕ:13-02-2025(ಹಾಯ್ ಉಡುಪಿ ನ್ಯೂಸ್) ಸೌಹಾರ್ದ ಕ್ರೆಡಿಟ್ ಕೋ ಆಪರೇಟಿವ್ ಹಣಕಾಸು ಸಂಸ್ಥೆಯೊಂದು ಗ್ರಾಹಕರು ಠೇವಣಿ ಇಟ್ಟಿರುವ 7.3 ಕೋಟಿ ರೂಪಾಯಿ ಹಣವನ್ನು ಹಿಂತಿರುಗಿಸದೆ ವಂಚನೆ ನಡೆಸಿದೆ ಎಂದು ಶ್ರೀಧರ್ ಎಂಬವರು ಕುಂದಾಪುರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
ಕುಂದಾಫುರ ,ಕಸಬಾ ಗ್ರಾಮದ ನಿವಾಸಿ ಶ್ರೀಧರ್ (57) ಎಂಬವರು ದಿನಾಂಕ 22/07/2022 ರಂದು ಕುಂದಾಪುರ ಕಸಬಾ ಗ್ರಾಮದ ವೆಂಕಟರಮಣ ಆರ್ಕೆಡ್ ನಲ್ಲಿರುವ ಕುಂದಾಪುರ ಸೌಹಾರ್ಧ ಕ್ರೆಡಿಕ್ ಕೋ ಆಪರೇಟಿವ್ ಲಿ. ಇದರಲ್ಲಿ ಶ್ರೀಧರ್ ರವರ ಮಗಳಾದ ಶ್ರೀರಕ್ಷಾ ಅವರ ಹೆಸರಿನಲ್ಲಿ 2 ಲಕ್ಷ ಮತ್ತು ಶ್ರೀ ವರ್ಷಾ ಅವರ ಹೆಸರಿನಲ್ಲಿ 5 ಲಕ್ಷ ಹಣವನ್ನು ಠೇವಣಿ ಇಟ್ಟಿದ್ದು ಈ ಠೇವಣಿ ಹಣವು ವಾಯಿದೆ ಮುಗಿದರೂ ಕುಂದಾಪುರ ಸೌಹಾರ್ದ ಕ್ರೆಡಿಟ್ ಕೋ ಆಪರೇಟಿವ್ ಲಿ ಸಂಸ್ಥೆಯ ಮುಖ್ಯ ಕಾರ್ಯನಿರ್ವಾಹಕರು ಮತ್ತು ನಿರ್ದೇಶಕರುಗಳಾಗಿರುವ ಆರೋಪಿಗಳು ಶ್ರೀಧರ್ ರವರ ಮಕ್ಕಳ ಠೇವಣಿ ಹಣವನ್ನು ಹಿಂತಿರುಗಿಸದೇ ಮೋಸ ಮಾಡಿರುತ್ತಾರೆ ಎಂದು ಪೊಲೀಸರಿಗೆ ನೀಡಿರುವ ದೂರಿನಲ್ಲಿ ತಿಳಿಸಿದ್ದಾರೆ.
ಅಲ್ಲದೇ ಇತರೇ ಸುಮಾರು 44 ಜನರ ಒಟ್ಟು 7,18,24,831/- ರೂ ಠೇವಣಿ ಹಣವನ್ನು ಕೂಡಾ ವಾಯಿದೆ ಮುಗಿದರೂ ವಾಪಾಸ್ಸು ನೀಡದೇ ಇರುವುದು ಶ್ರೀಧರರವರ ಗಮನಕ್ಕೆ ಬಂದಿದೆ ಎಂದು ದೂರಿನಲ್ಲಿ ತಿಳಿಸಿದ್ದಾರೆ. 1)ಶಿವಾನಂದ ಮುಖ್ಯ ಕಾರ್ಯನಿರ್ವಾಹಕರು, 2) ಪ್ರಕಾಶ ಲೋಬೋ, 3) ಮಹೇಶ ಲಕ್ಷ್ಮಣ ಕೊತ್ವಾಲ, 4) ವಿಠಲ, 5) ಅವಿನಾಶ ಪಿಂಟೋ, 6) ಕೆ ರಾಜೇಶ ದೈವಜ್ಞ, 7) ಹೆಚ್ ಮಹಾಬಲ, 8) ರತ್ನಾಕರ, 9) ದಯಾನಂದ 10) ಮರ್ವಿನ ಫೆರ್ನಾಂಡಿಸ್, 11) ಸರೋಜ 12) ಸುಧಾಕರ, 13) ಗೋಪಾಲ 14) ಡಾ, ದಿನಕರ, ನಿರ್ದೇಶಕರು ಕುಂದಾಪುರ ಸೌಹಾರ್ದ ಕ್ರೆಡಿಟ್ ಕೋ ಆಪರೇಟಿವ್ ಲಿ ಇವರೆಲ್ಲ ಸೇರಿಕೊಂಡು ಒಳಸಂಚು ರೂಪಿಸಿ ಒಟ್ಟು 7,25,24,831/- ರೂ ಹಣವನ್ನು ಠೇವಣಿದಾರರಿಗೆ ವಾಪಾಸ್ಸು ನೀಡದೇ ನಂಬಿಕೆ ದ್ರೋಹ ಮತ್ತು ಮೋಸ ಮಾಡಿ ಅಧಿಕಾರ ದುರುಪಯೋಗ ಮಾಡಿದ್ದಾರೆ ಎಂದು ದೂರು ನೀಡಿದ್ದಾರೆ.
ಈ ಬಗ್ಗೆ ಕುಂದಾಪುರ ಪೊಲೀಸ್ ಠಾಣೆಯಲ್ಲಿ ಕಲಂ:316(2), 318(2), 318(4), 319(2), 336(2), 336(3), 340(2), 61(2) 190 BNS, & u/s 09 KPID Act, & U/s 3 r/w 21(1) (2) BUDS ACT ರಂತೆ ಪ್ರಕರಣ ದಾಖಲಾಗಿದೆ.